ಸುಹಾಸ್ ಶೆಟ್ಟಿ ಕೊಲೆ : ಸಾಮಾಜಿಕ ಜಾಲತಾಣದಲ್ಲಿ ದ್ವೇಷ ಭಾವನೆ ಕೆರಳಿಸಿದವರ ವಿರುದ್ದ ಪ್ರಕರಣ ದಾಖಲು

Spread the love

ಸುಹಾಸ್ ಶೆಟ್ಟಿ ಕೊಲೆ : ಸಾಮಾಜಿಕ ಜಾಲತಾಣದಲ್ಲಿ ದ್ವೇಷ ಭಾವನೆ ಕೆರಳಿಸಿದವರ ವಿರುದ್ದ ಪ್ರಕರಣ ದಾಖಲು

ಮಂಗಳೂರು: ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕಿನ್ನಿಪದವು ಬಳಿ ನಡೆದ ಸುಹಾಸ್ ಶೆಟ್ಟಿ ಹತ್ಯೆ ಸಂಬಂಧವಾಗಿ ಕೆಲವು ಸಾಮಾಜಿಕ ಜಾಲತಾಣಗಳಲ್ಲಿ ಶಾಂತಿ ಮತ್ತು ಸೌಹಾರ್ದತೆಗೆ ಧಕ್ಕೆ ಉಂಟುಮಾಡುವ ಉದ್ದೇಶದಿಂದ ಕೆಲವು ವ್ಯಕ್ತಿಗಳು ಹಾಗೂ ಗ್ರೂಪುಗಳು ಸಾಮಾಜಿಕ ಮಾಧ್ಯಮದ ಮೂಲಕ ಒಂದು ಸಮುದಾಯವನ್ನು ಮತ್ತೊಂದು ಸಮುದಾಯದ ವಿರುದ್ಧ ದ್ವೇಷ ಭಾವನೆ ಹುಟ್ಟುವಂತೆ ಪೋಸ್ಟ್ ಮಾಡುತ್ತಿರುವ ಹಿನ್ನೆಲೆಯಲ್ಲಿ ಮಂಗಳೂರು ನಗರ ಪೊಲೀಸ ಠಾಣೆಗಳಲ್ಲಿ ಕೆಳಗಿನಂತೆ ಪ್ರಕರಣಗಳನ್ನುದಾಖಲಿಸಿದೆ.

ಮುಲ್ಕಿ ಪೊಲೀಸ್ ಠಾಣೆ

  1. ಸಾಮಾಜಿಕ ಜಾಲತಾಣವಾದ youtub ನಲ್ಲಿ tv9 ಕನ್ನಡ ನ್ಯೂಸ್ ಚಾನಲಿ ನಲ್ಲಿ ಸುಹಾಸ್ ಶೆಟ್ಟಿ ಹತ್ಯೆ ಸಂಬಂಧಿಸಿ ನೇರಪ್ರಸಾರ ಆಗುತ್ತಿದ್ದಸಮಯದಲ್ಲಿkudla friends ಎಂಬಹೆಸರಿನ youtube user ” ವಿಕೇಟ್ ಹೋಗುತ್ತಿಎ ” ಎಂಬುದಾಗಿ ಪೋಸ್ಟ್ ಮಾಡಿದವರ ವಿರುದ್ದ ಪ್ರಕರಣ ದಾಖಲಾಗಿದೆ.
  2.  ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್ನಲ್ಲಿ beary_royal_nawab ಎಂಬ ಇನ್ಸ್ಟಾ ಗ್ರಾಂ ಖಾತೆಯಲ್ಲಿ “ಶತ್ರು ಸಂಹಾರ ಶರುವಾಗಿದೆ. ಪ್ರತಿರೋಧ ಅಪರಾಧವಲ್ಲ” ಎಂಬುದಾಗಿ ಪೊಸ್ಟ ಮಾಡಿರುವವರ ವಿರುದ್ದ ಪ್ರಕರಣ ದಾಖಲಾಗಿದೆ.

ಮಂಗಳೂರು ಉತ್ತರ ಪೊಲೀಸ್ ಠಾಣೆ

  1. “ನಮ್ಮಕಾರ್ಯಕರ್ತನಾದ ಸುಹಾಸ ಬಜ್ಪೆಯ ಹತ್ಯೆಯನ್ನು ಖಂಡಿಸಿ ಇಂದು ಬೆಳಗ್ಗೆ 6:00 ಗಂಟೆಯಿಂದ ಸಂಜೆ 6:00 ಗಂಟೆಯವರೆಗೆ ದ.ಕ ಜಿಲ್ಲೆ ಸಂರ್ಪೂರ್ಣ ಬಂದ್. ಸುಹಾಸ್ ರವರ ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ.ನಮ್ಮ ಬಲವನ್ನು ಈಗ ತೋರಿಸದೇ ಇದ್ದಲ್ಲಿ ಮುಂದೊಂದು ದಿನ ನಾವೇ ಇರುವುದಿಲ್ಲ. ಹಿಂದೂ ಸಾಗರದ ಬಿಂದು ಬಿಂದುಗಳೇ ಒಟ್ಟಾಗೋಣ. ಬಲಿದಾನ ವ್ಯರ್ಥವಾಗದಿರಲಿ”ಎಂಬುದಾಗಿ ಪೊಸ್ಟ ಮಾಡಿರುವವರ ವಿರುದ್ದ ಪ್ರಕರಣ ದಾಖಲಾಗಿದೆ.

ಉರ್ವಾ ಪೊಲೀಸ್ ಠಾಣೆ

  1. ಬಜ್ಪೆಯಲ್ಲಿ ತಲವಾರು ದಾಳಿಯಿಂದ ಮೃತಪಟ್ಟ ಸುಹಾಸ ಶೆಟ್ಟಿ ಪೋಟೊಹಾಕಿ VHP ಭಜರಂಗದ ಅಶೋಕನಗರ ಮತ್ತು ಶಂಖನಾದ ಎಂಬ ಎರಡು ಇನ್ಸ್ಟಾಗ್ರಾಂ ಪ್ರೊಪೈಲ್ಗಳಲ್ಲಿ ಉದ್ರೇಕಕಾರಿ ಮತ್ತು ಪ್ರಚೋದನಕಾರಿಯಾಗಿ ಜನರಲ್ಲಿ ಸಮಾಜದ ವಿವಿಧ ಧರ್ಮ ಹಾಗೂ ವರ್ಗಗಳ ಜನರಲ್ಲಿ ದ್ವೇಷದ ಭಾವನೆ ಹುಟ್ಟುಹಾಕಿ ಅಪರಾಧ ಕೃತ್ಯ ವೆಸಗುವಂತೆ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿ, ಒಂದು ಸಮುದಾಯವನ್ನುಮತ್ತೊಂದು ಸಮುದಾಯದ ವಿರುದ್ಧ ದ್ವೇಷಭಾವನೆ ಹುಟ್ಟುವಂತೆ ಪೋಸ್ಟ ಮಾಡಿರುತ್ತಾರೆ.ಪೊಸ್ಟ ಮಾಡಿರುವವರ ವಿರುದ್ದ ಪ್ರಕರಣ ದಾಖಲಾಗಿದೆ.

ಬರ್ಕೆಪೊಲೀಸ್ ಠಾಣೆ

  1. Live ಯೂ ಟ್ಯೂಬ್ ನ್ಯೂಸ್ 18 ಚಾನಲ್ ನಲ್ಲಿ Mr silent Lvr ಎಂಬ ಹೆಸರಿನ ವ್ಯಕ್ತಿಯು “2 ದಿನ ಆದ ಮೇಲೆ ಮಂಗಳೂರುರಲ್ಲಿ ಹೆಣ ಬಿಳುದು ಸತ್ಯ ಅದರಲ್ಲಿ, ಸುರತ್ಕಲ್ಕೋಡಿ ಕೆರೆ ಜನ ಬೀಡೋ ಮಾತೆ ಇಲ್ಲ..” ಎಂದು ಕಾಮೆಂಟ್ ಹಾಕಿದ್ದು ಅವರ ವಿರುದ್ದ ಪ್ರಕರಣ ದಾಖಲಾಗಿದೆ.
  2.  beary_muslim_samrajya_3.0 ಎಂಬ ಇನ್ಸ್ಟಾಗ್ರಾಮ್ನಲ್ಲಿ “ಪ್ರತಿರೋಧ ಅಪರಾಧವಲ್ಲ ನಾವು ನಪುಂಸಕರು ಅಲ್ಲ. ನೆನಪಿರಲಿ ತಾನು ಯಾವ ಕಾರಣಕ್ಕೆ ಕೊಲೆಯಾದ ಅನ್ನೊ ಆರಿವಿಲ್ಲದೆ ಖಬುರ್ಸ್ತಾನಲ್ಲಿ ಮಲಗಿರೋ ಅಮಾಯಕ ಪಾಝಿಲ್ನ ಕೊಲೆಮಾಡಿದ ಇವನ ಸಾವವನ್ನು ದುಃಖಪಡುವಷ್ಟು ಮೂರ್ಖ ನಾನಲ್ಲ…… ಎಂದು ಸ್ಟೋರಿ ಹಾಕಿದ್ದು, ಅವರ ವಿರುದ್ದ ಪ್ರಕರಣ ದಾಖಲಾಗಿದೆ.
  3.  hindu_mantra_ ಎಂಬ ಇನ್ಸ್ಟಾಗ್ರಾಮ್ನಲ್ಲಿ “ನಮಗೆ ಯಾವುದೇ ಉತ್ತರಗಳು ಬೇಡ ರಕ್ತಕ್ಕೆ ರಕ್ತವೇ ಉತ್ತರವಾಗಬೇಕು ಜೀವಕೆ, ಜೀವನೆ ಬೇಕು” ಎಂಬುದಾಗಿ ಸ್ಟೋರಿ ಹಾಕಿರುತ್ತಾರೆ ಅವರ ವಿರುದ್ದ ಪ್ರಕರಣ ದಾಖಲಾಗಿದೆ.

ಮೂಡಬಿದ್ರೆ ಪೊಲೀಸ್ ಠಾಣೆ

  1. ullaltho_makka ಎಂಬ ಇನ್ಸ್ಟಾಗ್ರಾಮ್ಖಾ ಖಾತೆ ಯಲ್ಲಿ ಫಾಝಿಲ್ ಕೊಲೆಯಾದೆ ಅನ್ನೋ ಅರಿವಿಲ್ಲದೇ ಖಬರಸ್ಥಾನದಲ್ಲಿ ಮಲಗಿರೋ ಅಮಾಯಕ ಫಾಝಿಲ್ ಕೊಲೆ ಮಾಡಿದ ಇವನ ಸಾವನ್ನು ದುಃಖಪಡುವಷ್ಟು ಮೂರ್ಖನಾನಲ್ಲ.” ಎಂಬ ಬರಹವನ್ನು ಪೋಸ್ಟ್ ಮಾಡಿರುತ್ತಾರೆ ಅವರ ವಿರುದ್ದ ಪ್ರಕರಣ ದಾಖಲಾಗಿದೆ.

ಮಂಗಳೂರು ದಕ್ಷಿಣ ಪೊಲೀಸ್ ಠಾಣೆ

  1. hindu_dharma_006 ಎಂಬ ಇನ್ಸ್ಟಾಗ್ರಾಮ್ಖಾತೆಯಲ್ಲಿ ಪೊಸ್ಟ ಮಾಡಿರುವವರ ವಿರುದ್ದ ಪ್ರಕರಣ ದಾಖಲಾಗಿದೆ.
  2. karavali_official ಎಂಬ ಇನ್ಸ್ಟಾಗ್ರಾಮ್ಖಾತೆಯಲ್ಲಿ ಪೊಸ್ಟ ಮಾಡಿರುವವರ ವಿರುದ್ದ ಪ್ರಕರಣ ದಾಖಲಾಗಿದೆ.

ಕಾವೂರು ಪೊಲೀಸ್ ಠಾಣೆ

  1. _dj_bharath_2008 ಎಂಬ ಇನ್ಸ್ಟಾಗ್ರಾಮ್ಖಾತೆಯಲ್ಲಿ “ಸುಹಾಸ್ ಅಣ್ಣನ ಕೊಂದವರು ಹಾಗೂ ಕೊಂದವರಿಗೆ ಸಹಾಯ ಮಾಡಿದವರೆಲ್ಲರ ರಕ್ತ ಹರಿಯಬೇಕು ಆಗ ಮಾತ್ರ ಸುಹಾಸ್ ಅಣ್ಣನ ಆತ್ಮಕ್ಕೆ ಶಾಂತಿ ಸಿಗುತ್ತೆ ನೆನಪಿಟ್ಟುಕೊಳ್ಳಿ” ಎಂಬ ಬರಹವನ್ನು ಪೋಸ್ಟ್ ಮಾಡಿರುತ್ತಾರೆ ಅವರ ವಿರುದ್ದ ಪ್ರಕರಣ ದಾಖಲಾಗಿದೆ.
  2. ಸುದ್ದಿ ಪುತ್ತುರು ಎಂಬ ನ್ಯೂಸ್ ಚಾನಲ್ ನಲ್ಲಿಸುಹಾಸ್ ಶೆಟ್ಟಿಅಂತಿಮ ಕ್ರಿಯೆಯ ನೇರಪ್ರಸಾರದ live chat ನಲ್ಲಿ abdulmuneer ಎಂಬ youtube ಬಳಕೆದಾರನಿಂದ “Nest booking saran pampeel” “Nest booking kalladka but” “Nest booking mutalik” ಎಂಬುದಾಗಿ ”ಪೊಸ್ಟ ಮಾಡಿರುವ ಬಗ್ಗೆ ಪ್ರಕರಣ ದಾಖಲಾಗಿದೆ.

ಕಂಕನಾಡಿ ನಗರ ಪೊಲೀಸ್ ಠಾಣೆ

  1. “troll_mayadiaka” ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸುಹಾಸ್ ಶೆಟ್ಟಿ ನ ಭಾವಚಿತ್ರ ದ ಮೇಲೆ “sulemage finish” “waiting next wikate” ಮತ್ತುಸುಹಾಸ್ ಶೆಟ್ಟಿ ನ ಕೊಲೆಮಾಡುವ ವಿಡಿಯೋ ಹಾಕಿ “Alhamdulillah” ಎಂಬ ಬರವಣಿಗೆ ಬರೆದು ಪೊಸ್ಟ ಮಾಡಿರುವವರ ವಿರುದ್ದ ಪ್ರಕರಣ ದಾಖಲಾಗಿದೆ.

ಮಂಗಳೂರು ಪೂರ್ವ ಪೊಲೀಸ್ ಠಾಣೆ

  1. maikala_trolls_05” ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪ್ರತಿರೋಧ ಅಪರಾಧವಲ್ಲ ನಾವು ನಪುಂಸಕರು ಅಲ್ಲ ನೆನಪಿರಲಿ ಕೊಲೆಯನ್ನು ಸಮರ್ಥಿಸುವಷ್ಟು ನೀಚ ನಾನಲ್ಲ ಅದರೆ ಅಮಾಯಕ ಫಾಝೀಲ್ ಕೊಲೆಯನ್ನು ಮಾಡಿದ ಇವನ ಸಾವಿನಲ್ಲಿ ದುಃಖಪಡುವಷ್ಟು ಮೂರ್ಖನಾನಲ್ಲ .ಎಂಬ ಬರವಣಿಗೆ ಬರೆದು ಪೊಸ್ಟ ಮಾಡಿರುವವರ ವಿರುದ್ದ ಪ್ರಕರಣ ದಾಖಲಾಗಿದೆ.


Spread the love
Subscribe
Notify of

0 Comments
Inline Feedbacks
View all comments