ಹಾವು ಕಡಿತ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾರ್ಯಕ್ರಮ 

Spread the love

ಹಾವು ಕಡಿತ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾರ್ಯಕ್ರಮ 

ಮಂಗಳೂರು:  ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಅನುಸಾರ ವಿಶ್ವಾದ್ಯಂತ ಪ್ರತಿ ವರ್ಷ ಸುಮಾರು 54 ಲಕ್ಷ ಜನರು ಹಾವು ಕಡಿತಕ್ಕೆ ಒಳಗಾಗುತ್ತಾರೆ. 80,000ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಳ್ಳುತ್ತಾರೆ ಮತ್ತು ಬದುಕುಳಿದ ಅನೇಕರು ಜೀವನ ಪಯರ್ಂತ ಸವಾಲುಗಳನ್ನು ಎದುರಿಸುತ್ತಾರೆ. ಹಾವು ಕಡಿತವನ್ನು ತಡೆಗಟ್ಟಬಹುದು. ಹುಲ್ಲುಗಾವಲು ಪ್ರದೇಶಗಳಲ್ಲಿ ಗಟ್ಟಿಯಾದ ಬೂಟುಗಳನ್ನು ಧರಿಸಿ ಮತ್ತು ರಾತ್ರಿ ಹೊತ್ತುಹೊರಗೆ ನಡೆಯುವಾಗ ಬೆಳಕನ್ನು (ಟಾರ್ಚ್) ಬಳಸಬೇಕು. ಹಾವು ಕಚ್ಚಿದರೆ, ತಕ್ಷಣ ಕಾರ್ಯ ಪ್ರವೃತ್ತರಾಗಿ, ಗಾಬರಿಯಾಗದೆ ತಕ್ಷಣ ವೈದ್ಯಕೀಯ ಸಹಾಯ ಪಡೆಯಿರಿ. ಶೀಘ್ರವಾಗಿ ಆಂಟಿವೆನಮ್ (ವಿಷನಿರೋಧಕ) ನೀಡುವುದರಿಂದ ಜೀವ ಉಳಿಸಬಹುದು. ಸುರಕ್ಷತೆಗಾಗಿ ಧ್ವನಿಯಾಗಿ, ಬದುಕುಳಿದವರ ಕಥೆಗಳನ್ನು ಮತ್ತು ತಡೆಗಟ್ಟುವ ಸಲಹೆಗಳನ್ನು ಹಂಚಿಕೊಳ್ಳಬೇಕು.

ಬಾಧಿತ ವ್ಯಕ್ತಿಯನ್ನು ಶಾಂತವಾಗಿರಿಸಿ ಮತ್ತು ಧೈರ್ಯ ತುಂಬಬೇಕು. ಕಚ್ಚಿದ ಜಾಗವನ್ನು ಅಲುಗಾಡಿಸದೆ, ಹೃದಯಕ್ಕಿಂತ ಕೆಳಮಟ್ಟದಲ್ಲಿ ಇರಿಸಬೇಕು. ಕೈ ಅಥವಾ ಕಾಲಿಗೆ ಕಚ್ಚಿದ್ದರೆ, ಬಿಗಿಯಾದ ಬಟ್ಟೆ, ಬಳೆ, ಉಂಗುರ ಅಥವಾ ಕಾಲ್ಗೆಜ್ಜೆಯನ್ನು ತೆಗೆದುಹಾಕಬೇಕು. ಸಾಧ್ಯವಾದಷ್ಟು ಬೇಗ, ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು. ಹೆದರಬೇಡಿ ಮತ್ತು ಹಾವು ಕಡಿತಕ್ಕೆ ಒಳಗಾದ ವ್ಯಕ್ತಿಯನ್ನು ಸಮಾಧಾನಪಡಿಸಬೇಕು. ಹಾವಿನಿಂದ ನಿಧಾನವಾಗಿ ದೂರ ಸರಿಯಬೇಕು. ಹಾವು ಕಚ್ಚಿದ ದೇಹದ ಭಾಗದಲ್ಲಿರುವ ಪಾದರಕ್ಷೆ, ಕಾಲುಂಗುರ, ಬೆಲ್ಟ್, ಆಭರಣಗಳು, ವಾಚ್, ಬಿಗಿಯಾದ ಬಟ್ಟೆಯನ್ನು ಕಳಚಬೇಕು. ಹಾವು ಕಡಿತಕ್ಕೆ ಒಳಗಾದ ವ್ಯಕ್ತಿಯನ್ನು ಎಡಭಾಗಕ್ಕೆ ಮಲಗಿಸಿ, ಕಚ್ಚಿದ ಭಾಗವನ್ನು ಅಲುಗಾಡದಂತೆ ನೋಡಿಕೊಳ್ಳಬೇಕು. ತಕ್ಷಣವೇ ಸಮೀಪದ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಬೇಕು.

ಗಾಯದ ಜಾಗವನ್ನು ಕತ್ತರಿಸಬಾರದು ಅಥವಾ ವಿಷವನ್ನು ಬಾಯಿಯಿಂದ ಹೀರಿಕೊಳ್ಳಬಾರದು. ರಕ್ತ ಸಂಚಾರವನ್ನು ಸಂಪೂರ್ಣವಾಗಿ ನಿಲ್ಲಿಸುವಂತಹ ಬಿಗಿಯಾದ ಪಟ್ಟಿ (ಣouಡಿಟಿiqueಣ) ಕಟ್ಟಬಾರದು. ಗಾಯದ ಮೇಲೆ ಐಸ್, ಬೆಂಕಿ, ಅಥವಾ ಯಾವುದೇ ರೀತಿಯ ನಾಟಿ/ಮನೆಮದ್ದುಗಳನ್ನು ಹಚ್ಚಬಾರದು. ಬಾಧಿತ ವ್ಯಕ್ತಿಗೆ ನಡೆಯಲು ಬಿಡಬೇಡಿ.

ರಕ್ತ ಬಂಧಕ ಪಟ್ಟಿ ಅಥವಾ ಬಿಗಿಯಾದ ಬಟ್ಟೆಯನ್ನು ಕಟ್ಟಬಾರದು. ಏನನ್ನೂ ಹಚ್ಚಬಾರದು. ಹಾವು ಕಚ್ಚಿದ ವ್ಯಕ್ತಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ. ನಾಟಿ ಮದ್ದು ಸೇರಿದಂತೆ ಇನ್ನಾವುದೇ ಅಸುರಕ್ಷಿತ ಚಿಕಿತ್ಸಾ ಪದ್ಧತಿಯನ್ನು ಅವಲಂಬಿಸಬಾರದು. ಹಾವನ್ನು ಹಿಡಿಯುವ ಅಥವಾ ಕೊಲ್ಲುವ ಪ್ರಯತ್ನ ಮಾಡಬೇಡಿ, ಇದು ಅಮೂಲ್ಯ ಸಮಯವನ್ನು ವ್ಯರ್ಥ ಮಾಡುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments