ಪಡುಬಿದ್ರೆ :ಮಸೀದಿಯ ಮಿನಾರ ಏರಿದ ಮಾನಸಿಕ ಅಸ್ವಸ್ಥ

ಪಡುಬಿದ್ರೆ : ಮಸೀದಿಯ ಮಿನಾರ ಏರಿ ಕುಳಿತ ಮಾನಸಿಕ ಅಸ್ವಸ್ಥ ಯುವಕನನ್ನು ಎರಡು ಗಂಟೆಯ ಸತತ ಕಾರ್ಯಚರಣೆಯ ಮೂಲಕ ರಕ್ಷಿಸಿದ ಘಟನೆ  ಕಾಪು ಸಮೀಪದ ಕೊಂಬಗುಡ್ಡೆ ಗೌಸಿಯಾ  ಜಾಮಿಯಾ ಮಸೀದಿಯಲ್ಲಿ ನಡೆದಿದೆ.

ಉತ್ತರ ಪ್ರದೇಶ ಮೂಲದ ಆಲಂ (21) ಎಂಬ ಮಾನಸಿಕ ಅಸ್ವಸ್ಥ ಯುವಕ ರವಿವಾರ ಸಂಜೆ  ಸುಮಾರು 50 ಅಡಿ ಎತ್ತರದ ಮಿನಾರವನ್ನು ಏರಿ ಕುಳಿತಿದ್ದ. ಇದನ್ನು ವ್ಯಕ್ತಿಯೋರ್ವರು ಗಮನಿಸಿದರು. ವಿಷಯ ತಿಳಿದ ಜನರು ಸ್ಥಳದಲ್ಲಿ ಜಮಾಯಿಸತೊಡಗಿದರು. ಈತನನ್ನು ಮಿನಾರದಿಂದ ಕೆಳಗಿಳಿಸಲು ಅಗ್ನಿಶಾಮಕ ದಳ ಮತ್ತು ಪೊಲೀಸ್‌ ಇಲಾಖೆಯ ಸಿಬ್ಬಂದಿ ಹಾಗೂ ಸ್ಥಳೀಯರು ಸತತ ಪರಿಶ್ರಮ ನಡೆಸಿದರು. ಬಳಿಕ ಸ್ಥಳೀಯರು ಬಟ್ಟೆ ಹಾಸಿದರು. ಮಿನಾಧಿರಧಿದಿಂದ ಹಾರಿಧಿದ ಯುವಕ ಬಟ್ಟೆಯ ಮೇಲೆ ಬಿದ್ದ ಪರಿಣಾಮ ರಕ್ಷಿಸಲ್ಪಟ್ಟಿದ್ದಾನೆ. ಈತನನ್ನು ಸೂರಿ ಶೆಟ್ಟಿ ನೇತೃತ್ವದಲ್ಲಿ ಶಂಕರಪುರದ “ವಿಶ್ವಾಸದ ಮನೆ’ಗೆ ದಾಖಲಿಸಲಾಗಿದೆ.

Leave a Reply