ಅಪಾರ್ಟ್ ಮೆಂಟಿನಿಂದ ಸೊತ್ತು ಕಳವು ಮಾಡಿದ ಆರೋಪಿಯ ಸೆರೆ
ಮಂಗಳೂರು: ಹೊರರಾಜ್ಯದ ಕಾರ್ಮಿಕರು ವಾಸವಿರುವ ಅಪಾರ್ಟ್ ಮೆಂಟ್ ನಿಂದ 43 ಸಾವಿರ ರೂ ಮೌಲ್ಯದ ಸೊತ್ತು ಕಳವು ಮಾಡಿದ ಆರೋಪಿಯನ್ನು ಪಣಂಬೂರು ಪೋಲಿಸರು ಬಂಧಿಸಿದ್ದಾರೆ.

ಬಂಧಿತನನ್ನು ಕಸ್ಪಾ ಬೆಂಗರೆಯ ಎಂಎಸ್ ಶಾಪ್ ಬಳಿಯ ನಿವಾಸಿ ಮಹಮ್ಮದ್ ಫೈರೋಝ್ (20) ಎಂದು ಗುರುತಿಸಲಾಗಿದೆ. ಬಂಧಿತನನ್ನು ತಣ್ಣಿರುಬಾವಿ ಬಳಿ ಬಂಧಿಸಲಾಗಿದೆ.
ಕಳ್ಳತನ ಮಾಡಿದ 28 ಸಾವಿರ ರೂ ಮೌಲ್ಯದ ಮೊಬೈಲ್ ಮತ್ತು 3200 ರೂ ನಗದು ವಶಪಡಿಸಿಕೊಳ್ಳಲಾಗಿದೆ. ಸೆ. 20 ರಂದು ನಗರದ ಹೊರವಲಯದ ಜೋಕಟ್ಟೆ ಬಳಿಯ ಅಪಾರ್ಟ್ ಮೆಂಟಿನ ನೆಲ ಮಹಡಿಯಲ್ಲಿರುವ ಕೊಠಡಿಗೆ ನುಗ್ಗಿದ ಈತ 30 ಸಾವಿರೂ. ಮೌಲ್ಯದ ಮೊಬೈಲ್ ಫೋನ್ಗಳು, 13 ಸಾವಿರ ರೂ ನಗದು ಹಾಗೂ ಎಟಿಎಂ ಕಾರ್ಡ್ ಸೇರಿದಂತೆ 43 ಸಾವರ ರೂ ಮೌಲ್ಯದ ಸೊತ್ತುಗಳನ್ನು ಕಳವು ಮಾಡಿದ ಕುರಿತು ಪ್ರಕರಣ ದಾಖಲಾಗಿತ್ತು.
ಪಣಂಬೂರು ಎಸ್ಐ ರಫೀಕ್ ಕೆ.ಎಂ, ಕ್ರೈ ಎಸ್ಐ ಕುಮರೇಶನ್ ಮತ್ತು ಸಿಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.













