ಅಫಘಾತದಲ್ಲಿ ಬಲಗೈ ಕಳೆದುಕೊಂಡು ವಿದ್ಯಾರ್ಥಿ – ಹೆಚ್ಚಿನ ಚಿಕಿತ್ಸೆಗೆ ಧನ ಸಹಾಯಕ್ಕೆ ಮನವಿ

ಅಫಘಾತದಲ್ಲಿ ಬಲಗೈ ಕಳೆದುಕೊಂಡು ವಿದ್ಯಾರ್ಥಿ – ಹೆಚ್ಚಿನ ಚಿಕಿತ್ಸೆಗೆ ಧನ ಸಹಾಯಕ್ಕೆ ಮನವಿ

ಉಡುಪಿ: ವಿಧಿಯ ಆಟವೇ ಕೆಲವೊಮ್ಮೆ ಹೀಗೆ. ಸಮಾಜದಲ್ಲಿ ಬದುಕಿ ಬಾಳಬೇಕಾಗಿದ್ದವರನ್ನು ಕೆಲವೊಮ್ಮೆ ಯಾವುದಾದರೊಂದು ರೀತಿಯಲ್ಲಿ ಕಷ್ಟಕೊಟ್ಟು ಅವರನ್ನು ಪರೀಕ್ಷೆಗೆ ಒಳಪಡಿಸುವುದು ಇದರಿಂದ ಅವರುಗಳು ಕಣ್ಣೀರಲ್ಲೇ ಕೈತೊಳೆಯುವ ಪರಿಸ್ಥಿತಿಗೆ ಕಾರಣವಾಗುವುದು ಸರ್ವೇ ಸಾಮಾನ್ಯ.’

ಇಲ್ಲೊಬ್ಬ ಯುವಕ ಸ್ವತಃ ಕಷ್ಟಪಟ್ಟು ಬೆಳಗ್ಗೆ ಅಂಗಡಿ ಅಂಗಡಿಗೆ ಹೋಗಿ ಹಾಲು ಕೊಟ್ಟು ಎಲ್ಲ ಕೆಲಸವನ್ನು ಮಾಡಿಯೇ ಕಾಲೇಜಿಗೆ ತೆರಳಿ ಒದು ಮುಂದುವರೆಸಿಕೊಂಡ ಯುವಕನ ಮೇಲೆ ವಿಧಿ ಕ್ರೂರ ಆಟವಾಡಿದ್ದು ತನ್ನ ಕಾಲೇಜಿನ ಅಂತಿಮ ಪರೀಕ್ಷೆ ಬರೆಯಬೇಕಾಗಿದ್ದು ಎಮ್ ಜಿಎಮ್ ಕಾಲೇಜಿನ ವಿದ್ಯಾರ್ಥಿ ಅಜಿತ್ ಇಂದು ಆಸ್ಪತ್ರೆಯ ಬೆಡ್ ನಲ್ಲಿ ತನ್ನ ಬಲಗೈ ಕಳೆದುಕೊಂಡು ಅಮ್ಮನ ಕಾವಲಿನಲ್ಲಿ,ನೋವಿನ ನಡುವೆ ನಗುವನ್ನು ಚಿಮ್ಮಿಸುತ್ತಾ ಇರುವುದು ಕಂಡರೆ ಎಂತಹವರಿಗೆ ಆದರೂ ಕಣ್ಣೀರು ತರಿಸುತ್ತಿದೆ.

ಸದ್ಯ ಪದವಿ ವಿಭಾಗದವರಿಗೆ ಕೊನೆಯ ಪರೀಕ್ಷೆ ನಡೆಯುತ್ತಿದ್ದು, ಅಜೀತ್ ಆಗಾಗ ಕಾಲೇಜಿಗೆ ಬಂದು ಓದಿಕೊಂಡು, ಸ್ನೇಹಿತರೊಟ್ಟಿಗೆ ಒಂದಿಷ್ಟು ಹೊತ್ತು ಹರಟೆ ಹೊಡೆದು ಮನೆ ಕಡೆ ಹೋಗುತ್ತಿದ್ದ ಅಜಿತ್. ಅಜಿತ್ ಹೀಗೆಯೇ ಓದೋಕೆ ಕಾಲೇಜಿಗೆ ಬಂದಿದ್ದ. ಮಧ್ಯಾಹ್ನದವರೆಗೆ ಓದಿ, ಮನೆ ಕಡೆ ಹೋಗೋ ಬಸ್ಸಿನಲ್ಲಿ ಕುಳಿತು ಹೋಗುತ್ತಿದ್ದ ವೇಳೆ ಕಾರೊಂದನ್ನು ಒವರ್ ಟೇಕ್ ಮಾಡುವ ಅವಸರದಲ್ಲಿ ಬಸ್ಸೊಂದು, ಅಜಿತ್ ತೆರಳುತ್ತಿದ್ದ ಬಸ್ಸಿಗೆ ಅರಚಿಕೊಂಡು ಹೋಗುವ ಭರದಲ್ಲಿ ಅಜಿತ ಬಲಗೈಯನ್ನು ಎಳೆದುಕೊಂಡೇ ಹೋಯಿತು. ವೇಗ ಎಷ್ಟರ ಮಟ್ಟಿಗೆ ಇತ್ತು ಅಂದ್ರೆ,ಹೊಡೆದ ರಭಸಕ್ಕೆ ಅಜಿತನ ಕೈ ಮೂಳೆ ಪುಡಿ ಪುಡಿಯಾಗಿ ಬಿಟ್ಟಿದೆ. ಆ ಕ್ಷಣಕ್ಕೆ ಏನಾಯಿತು ಅನ್ನುವುದು ಅಜಿತನಿಗೆ ತಿಳಿಯಲಿಲ್ಲ.

ಘಟನೆಯಿಂದ ತೀವ್ರವಾಗಿ ಗಾಯಗೊಂಡ ಅಜಿತ್ ಅವರ ಬಲಗೈಯನ್ನು ಕಳೆದುಕೊಳ್ಳಬೇಕಾಯಿತು. ಅವರಿಗೆ ಕೃತಕ ಕೈ ಜೋಡಿಸಲು ಶಸ್ತ್ರ ಚಿಕಿತ್ಸೆ ಕೂಡ ನಡೆದಿದೆ. ಇಷ್ಟೆಲ್ಲಾ ನಡೆದರೂ ಕೂಡ ನಗುಮುಖದಿಂದ ಅಜಿತ್ ಇದ್ದಾನೆ.ತನಗೇನು ಆಗಿಲ್ಲ ಎನ್ನುವ ಹಾಗೆ ಇದ್ದಾನೆ.ಅವನ ಈ ಹುಮ್ಮಸ್ಸು ಅವನನ್ನು ನೋವಿನಲ್ಲೂ ಗೆದ್ದವವನಾಗಿ ಮಾಡಿದೆ. ಅಜಿತ್ ಹೇಳಿ ಕೇಳಿ ಶ್ರೀಮಂತ ಕುಟುಂಬದಿಂದ ಬಂದವನಲ್ಲ ಮನೆಯವರು, ಗೆಳೆಯರು ಈಗಾಗಲೇ ಮಣಿಪಾಲದ ಕೆ ಎಂ ಸಿ ಆಸ್ಪತ್ರೆಯಲ್ಲಿ ಹಲವಾರು ಹಣವನ್ನು ವ್ಯಯಿಸಿದ್ದಾರೆ. ಇನ್ನೂ ಮುಂದೆಯೂ ಕೂಡ ಚಿಕಿತ್ಸೆಗೆ ಸಹೃದಯ ದಾನಿಗಳ ಆರ್ಥಿಕ ಸಹಾಯದ ನಿರೀಕ್ಷೆಯಲ್ಲಿ ಅಜಿತ್ ಕುಟುಂಬ ಹಾಗೂ ಗೆಳೆಯರಿದ್ದಾರೆ. ಸಹೃದಯ ದಾನಿಗಳು ನೀಡುವ ಒಂದಿಷ್ಟು ನೆರವು, ಅಜಿತನ ಚಿಕಿತ್ಸೆಗೆ ನೆರವಾಗಬಹುದು. ದಾನಿಗಳು ತಮ್ಮ ಸಹಾಯವನ್ನು ಈ ಕೆಳಗಿನ ಖಾತೆಗೆ ನೀಡಬಹುದು

Ajith Shetty, Syndicate Bank Hiriyadka Branch, Account Number- 01482200088432, IFSC- SYNB0000148