ಉಡುಪಿಯಲ್ಲಿ  ಮತ್ತೊಂದು ಕೊರೋನಾ ಪಾಸಿಟಿವ್ ದೃಢ

Spread the love

ಉಡುಪಿಯಲ್ಲಿ  ಮತ್ತೊಂದು ಕೊರೋನಾ ಪಾಸಿಟಿವ್ ದೃಢ

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಸೋಮವಾರ ಮತ್ತೊಂದು ಕೊರೊನಾ ಪಾಸಿಟಿವ್ ಕೇಸ್ ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 11 ಕ್ಕೆ ಏರಿಕೆಯಾಗಿದೆ.

ಮೇ 12ರಂದು 7 ತಿಂಗಳ ಗರ್ಭಿಣಿಯು ಪತಿಯೊಂದಿಗೆ ಮುಂಬೈನಿಂದ ಉಡುಪಿಗೆ ಬಸ್‌ನಲ್ಲಿ ಬಂದಿದ್ದರು. ಸೋಂಕಿತ ಮಹಿಳೆ ಬಂದ ಬಸ್‌ನಲ್ಲಿ ಜಿಲ್ಲೆಯ 25 ಪ್ರಯಾಣಿಕರು ಸಹ ಇದ್ದರು. ಮಹಿಳೆಗೆ ಸೋಂಕು ಇರುವುದು ತಿಳಿಯುತ್ತಿದ್ದಂತೆ ಪತಿಯನ್ನು ಐಸೋಲೇಷನ್‌ ವಾರ್ಡ್‌ನಲ್ಲಿಡಲಾಗಿದೆ. ಸೋಂಕಿತೆಯ ಜತೆ ಪ್ರಯಾಣಿಸಿದ್ದ ಎಲ್ಲ 25 ಪ್ರಯಾಣಿಕರ ಗಂಟಲ ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್‌ ಮಾಹಿತಿ ನೀಡಿದರು.


Spread the love