Spread the love
ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಗೆ ಕೋರ್ ಕಮಿಟಿ ಸದಸ್ಯರ ನೇಮಕ
ಉಡುಪಿ: ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕೋರ್ ಕಮಿಟಿ ಸದಸ್ಯರ ನೇಮಕಾತಿ ಕುರಿತು ನಡೆದ ಮಾಸಿಕ ಸಭೆಯಲ್ಲಿ ಚರ್ಚೆ ನಡೆಸಿ ಸದಸ್ಯರ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ. ಈ ಸಭೆ ದಿನಾಂಕ 05.09.2025ರಂದು, ಕೆಪಿಸಿಸಿ ಉಪಾಧ್ಯಕ್ಷರು ಹಾಗೂ ಶಾಸಕರಾದ ಐವನ್ ಡಿಸೋಜ ಅವರ ಉಪಸ್ಥಿತಿಯಲ್ಲಿ ನಡೆದಿತ್ತು.
ಸಭೆಯ ನಿರ್ಣಯದಂತೆ ಕೆಳಕಂಡವರನ್ನು ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕೋರ್ ಕಮಿಟಿ ಸದಸ್ಯರನ್ನಾಗಿ ನೇಮಿಸಲಾಗಿದೆ:
- ಅಶೋಕ ಕುಮಾರ್ ಕೊಡವೂರು – ಅಧ್ಯಕ್ಷರು, ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ
- ಪ್ರತಾಪಚಂದ್ರ ಶೆಟ್ಟಿ – ಮಾಜಿ ಶಾಸಕರು, ವಿಧಾನ ಪರಿಷತ್
- ವಿನಯ ಕುಮಾರ್ ಸೊರಕೆ – ಮಾಜಿ ಸಚಿವರು, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರು
- ಜಯಪ್ರಕಾಶ್ ಹೆಗ್ಡೆ – ಮಾಜಿ ಸಂಸದರು, ಮಾಜಿ ಸಚಿವರು
- ಎಂ.ಎ. ಗಫೂರ್ – ಉಪಾಧ್ಯಕ್ಷರು, ಕೆಪಿಸಿಸಿ
- ಗೋಪಾಲ್ ಪೂಜಾರಿ – ಮಾಜಿ ಶಾಸಕರು
- ದಿನೇಶ್ ಹೆಗ್ಡೆ – 2023ರ ವಿಧಾನಸಭಾ ಅಭ್ಯರ್ಥಿ
- ಪ್ರಸಾದ್ ರಾಜ್ ಕಾಂಚನ್ – 2023ರ ವಿಧಾನಸಭಾ ಅಭ್ಯರ್ಥಿ
- ಮುನಿಯಲ್ ಉದಯ ಕುಮಾರ್ ಶೆಟ್ಟಿ – 2023ರ ವಿಧಾನಸಭಾ ಅಭ್ಯರ್ಥಿ
- ರಾಜು ಪೂಜಾರಿ – ದ.ಕ. ಹಾಗೂ ಉಡುಪಿ ವಿಧಾನ ಪರಿಷತ್ ಉಪಚುನಾವಣೆಯ ಅಭ್ಯರ್ಥಿ
- ಕಿಶನ್ ಹೆಗ್ಡೆ – ಕಾರ್ಯಾಧ್ಯಕ್ಷರು, ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ
ಈ ನೂತನವಾಗಿ ನೇಮಕಗೊಂಡ ಕೋರ್ ಕಮಿಟಿಯ ಮಾರ್ಗದರ್ಶನದಲ್ಲಿ: ಪಕ್ಷದ ಸಂಘಟನೆ ಬಲಪಡಿಸುವುದು. ಸರ್ಕಾರದಿಂದ ಮಾಡುವ ನಾಮ ನಿರ್ದೇಶನ ಕುರಿತು ಚರ್ಚೆ, ಜಿಲ್ಲೆಗೆ ಸಂಬಂಧಿಸಿದ ಪ್ರಮುಖ ಸಮಸ್ಯೆಗಳ ಬಗ್ಗೆ ನಿರ್ಧಾರ ಕೈಗೊಳ್ಳುವುದು ಇವುಗಳನ್ನು ಕೈಗೊಳ್ಳಲು ನಿರ್ಧಾರಿಸಲಾಗಿದೆ.
Spread the love













![Spanish Ambassador to India Launches ‘The Great Reset [CTRL+ALT+HUMAN]’ in Mangaluru](https://i0.wp.com/www.mangalorean.com/wp-content/uploads/2026/02/The-great-reset.471.jpg?resize=100%2C70&ssl=1)
Voters are minority and Dalits…leadership
Some one else. How many these leaders will in mla or mp elections to Congress?