ಏರ್ ಇಂಡಿಯಾ ಎಕ್ಸ್‌ಪ್ರೆಸ್ ನಿಂದ ಮಂಗಳೂರು-ಶಾರ್ಜಾ ದೈನಂದಿನ ವಿಮಾನ ಸೇವೆ ಘೋಷಣೆ; ಪರಿಷ್ಕೃತ ವೇಳಾಪಟ್ಟಿ ಪ್ರಕಟ
ಮಂಗಳೂರು: ಮಧ್ಯಪ್ರಾಚ್ಯದ ಸಂಘರ್ಷದ ಹಿನ್ನೆಲೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಶಾರ್ಜಾ ಮತ್ತು ದೆಹಲಿಗೆ ಹೊಸ ವಿಮಾನ ವೇಳಾಪಟ್ಟಿಯನ್ನು ಘೋಷಿಸಿದೆ. ಈ ಪರಿಷ್ಕೃತ ವೇಳಾಪಟ್ಟಿಯು ಮಾರ್ಚ್ 16 ರಿಂದ ಮಾರ್ಚ್ 28 ರವರೆಗೆ ಅನ್ವಯವಾಗಲಿದೆ.
ಹೊಸ ವೇಳಾಪಟ್ಟಿಯ ಪ್ರಕಾರ, ಈ ಅವಧಿಯಲ್ಲಿ ಮಂಗಳೂರು ಮತ್ತು ಶಾರ್ಜಾ ನಡುವೆ ಪ್ರತಿದಿನ ವಿಮಾನ ಸೇವೆ ಲಭ್ಯವಿರಲಿದೆ.
ಮಂಗಳೂರು – ಶಾರ್ಜಾ ವೇಳಾಪಟ್ಟಿ: IX 6057 ವಿಮಾನವು ಮಂಗಳೂರಿನಿಂದ ಮಧ್ಯಾಹ್ನ 1:25ಕ್ಕೆ ಹೊರಟು, ಸ್ಥಳೀಯ ಸಮಯ ಸಂಜೆ 4:05ಕ್ಕೆ ಶಾರ್ಜಾ ತಲುಪಲಿದೆ. IX 6058 ವಿಮಾನವು ಶಾರ್ಜಾದಿಂದ ಸ್ಥಳೀಯ ಸಮಯ ಸಂಜೆ 5:05ಕ್ಕೆ ಹೊರಟು, ರಾತ್ರಿ 10:30ಕ್ಕೆ ಮಂಗಳೂರು ತಲುಪಲಿದೆ.
ಮಂಗಳೂರು – ದೆಹಲಿ ವೇಳಾಪಟ್ಟಿ: ದೆಹಲಿ ಮಾರ್ಗದ ವಿಮಾನಗಳ ಸಮಯವು ವಾರದ ದಿನಗಳಿಗೆ ಅನುಗುಣವಾಗಿ ಬದಲಾಗಲಿದೆ. ಸೋಮವಾರ, ಬುಧವಾರ ಮತ್ತು ಭಾನುವಾರ (ಮಾ. 16 – ಮಾ. 25) ದಂದು IX 1991 ವಿಮಾನವು ದೆಹಲಿಯಿಂದ ಬೆಳಿಗ್ಗೆ 5:15ಕ್ಕೆ ಹೊರಟು, 8:30ಕ್ಕೆ ಮಂಗಳೂರು ತಲುಪಲಿದೆ. IX 1992 ವಿಮಾನವು ಮಂಗಳೂರಿನಿಂದ ಬೆಳಿಗ್ಗೆ 9:30ಕ್ಕೆ ಹೊರಟು, ಮಧ್ಯಾಹ್ನ 12:25ಕ್ಕೆ ದೆಹಲಿ ತಲುಪಲಿದೆ.
ವಾರದ ಇತರ ದಿನಗಳಲ್ಲಿ: IX 1276 ವಿಮಾನವು ಮಂಗಳೂರಿನಿಂದ ಬೆಳಿಗ್ಗೆ 8:30ಕ್ಕೆ ಹೊರಟು, 11:45ಕ್ಕೆ ದೆಹಲಿ ತಲುಪಲಿದೆ. IX 1275 ವಿಮಾನವು ದೆಹಲಿಯಿಂದ ಬೆಳಿಗ್ಗೆ 5:00ಕ್ಕೆ ಹೊರಟು, 8:00ಕ್ಕೆ ಮಂಗಳೂರು ತಲುಪಲಿದೆ.
ಪ್ರಯಾಣಿಕರು ತಮ್ಮ ಪ್ರಯಾಣದ ಮೊದಲು ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ಅಧಿಕೃತ ವೆಬ್‌ಸೈಟ್ ಮೂಲಕ ಸಮಯವನ್ನು ಮತ್ತೊಮ್ಮೆ ಖಚಿತಪಡಿಸಿಕೊಳ್ಳಲು ಸೂಚಿಸಲಾಗಿದೆ.













