ಕಾಲೇಜ್ ವಿದ್ಯಾರ್ಥಿಗಳ ಡ್ರಗ್ಸ್ ನೆಟ್‌ವರ್ಕ್ ಬೇಧಿಸಿದ ಪೊಲೀಸರು: ಕಮೀಷನರ್ ಜಾಗೃತಿ ಸಂದೇಶ

Spread the love

ಕಾಲೇಜ್ ವಿದ್ಯಾರ್ಥಿಗಳ ಡ್ರಗ್ಸ್ ನೆಟ್‌ವರ್ಕ್ ಬೇಧಿಸಿದ ಪೊಲೀಸರು: ಕಮೀಷನರ್ ಜಾಗೃತಿ ಸಂದೇಶ

ಶೈಕ್ಷಣಿಕ ನಗರಿ ಮಂಗಳೂರಿನಲ್ಲಿ ವಿದ್ಯಾರ್ಥಿಗಳನ್ನೇ ಗುರಿಯಾಗಿಸಿಕೊಂಡು ನಡೆಯುತ್ತಿದ್ದ ಮಾದಕ ವಸ್ತು ಜಾಲದ ವಿರುದ್ಧ ಪೊಲೀಸರು ಭಾರಿ ಕಾರ್ಯಾಚರಣೆ ನಡೆಸಿದ್ದಾರೆ. ಮಾದಕ ವಸ್ತು ಮಾರಾಟ (Peddling) ಜಾಲದಲ್ಲಿ ತೊಡಗಿದ್ದ ಐವರು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆಯಲಾಗಿದ್ದು, ಇವರಿಂದ ಹಲವು ಮಾಹಿತಿಗಳು ಲಭ್ಯವಾಗಿವೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

ಈ ಬಗ್ಗೆ ವಿಡಿಯೋ ಸಂದೇಶದಲ್ಲಿ ಮಾಹಿತಿ ನೀಡಿದ ಅವರು, ವಿದ್ಯಾರ್ಥಿಯ ಪೋಷಕರೊಬ್ಬರು ತನ್ನ ಮಗನ ಬಳಿ ಸಣ್ಣ ಪ್ಯಾಕೆಟ್ ಗಾಂಜಾ ಸಿಕ್ಕಿದೆ ಎಂದು ಮಾಹಿತಿ ಪೊಲೀಸರಿಗೆ ಕೊಟ್ಟಿದ್ದರು. ಇವರಿಗೆ ಯಾರು ವಿತರಣೆ ಮಾಡ್ತಿದ್ದಾರೆ ಎಂದು ಪರಿಶೋಧಿಸಿದಾಗ ಐದು ಜನ ವಿದ್ಯಾರ್ಥಿಗಳು ಬೇರೆ ಬೇರೆ ಕಾಲೇಜಿನ ಹಾಸ್ಟೆಲ್‌ನಲ್ಲಿರದೆ ಹೊರಗಡೆ ರೂಂ ಪಡೆದು ಅಲ್ಲಿಂದಲೇ ಬೇರೆ ಕಡೆಯಿಂದ ಮಾದಕ ವಸ್ತುಗಳನ್ನು ತಂದು ಪ್ಯಾಕೆಟ್ ಮಾಡಿ ಗಾಂಜಾ ವಿತರಣೆ ಮಾಡುತ್ತಿದ್ದಾರೆಂದು ಗೊತ್ತಾಯ್ತು. ಇವರು ವಿತರಣೆ ಮಾಡುತ್ತಿದ್ದ ಲಿನ್ನಲ್ಲಿ ಆರು ಕಾಲೇಜ್‌ನ ಸುಮಾರು 40 ಮಂದಿ ವಿದ್ಯಾರ್ಥಿಗಳು, ಹತ್ತು ಜನ ಬೇರೆ ಹೊರಗಿನವರು ಇದ್ದಾರೆಂದು ಗೊತ್ತಾಯಿತು. ಈಓ ಕುರಿತಂತೆ ವಿದ್ಯಾರ್ಥಿಗಳನ್ನು ಹಾಗೂ ಅವರ ಪೋಷಕರನ್ನು ಕೌನ್ಸಿಲಿಂಗ್‌ ಮಾಡಿಸಲಾಗುವುದು ಎಂದು ಹೇಳಿದ್ದಾರೆ.

ಪೋಷಕರಿಗೆ ಎಚ್ಚರಿಕೆ ನೀಡಿದ ಅವರು, ಪೋಷಕರಲ್ಲಿ ವಿನಂತಿ ನಿಮ್ಮ ಮಕ್ಕಳ ನಡತೆಯಲ್ಲಿ ಬದಲಾವಣೆ ಇದ್ದರೆ ಅದನ್ನು ಗಮನಿಸಬೇಕು. ಏನಾದರೂ ಸಮಸ್ಯೆ ಇದ್ದರೆ ಪೊಲೀಸರಿಗೆ ತಿಳಿಸಿ. ವಿದ್ಯಾರ್ಥಿಗಳು ಹಾಸ್ಟೆಲ್‌ನಲ್ಲಿರದೆ ಹೊರಗಡೆ ರೂಂನಲ್ಲಿ ಇರುತ್ತಿದ್ದರೆ, ಅವರು ಯಾವ ಕಾರಣಕ್ಕಿದ್ದಾರೆ? ಏನಾದರೂ ಸಮಸ್ಯೆ ಇದೆಯಾ ಎನ್ನುವುದನ್ನು ಮಾನಿಟರ್ ಮಾಡಿಕೊಳ್ಳಿ. ಪೋಷಕರು ಹಾಗೂ ಕಾಲೇಜಿನವರು ಸೇರಿ ಮಾನಿಟರ್ ಮಾಡುತ್ತಿದ್ದರೆ ಇಂಥ ಸಮಸ್ಯೆ ಬರುವುದಿಲ್ಲ. ಯಾವುದೇ ಮಾಹಿತಿ, ಅನುಮಾನ ಬಂದ ತಕ್ಷಣ ಪೊಲೀಸ್ ಸ್ಟೇಷನ್‌ಗೆ ಬಂದ್ರೆ ಸಮಸ್ಯೆಯನ್ನು ಪೂರ್ಣವಾಗಿ ನಿವಾರಿಸಲು ಸಾಧ್ಯವಾಗುತ್ತದೆ ಎಂದು ಕಿವಿ ಮಾತು ಹೇಳಿದ್ದಾರೆ.

ಮೊನ್ನೆ (ನನಗೆ ತಿಳಿದ ಮಟ್ಟಿಗೆ ಮೊದಲ ಬಾರಿಗೆ) ಪೆಡ್ಲಿಂಗ್ ಪ್ರಕರಣದಲ್ಲಿ ನಾವು 5 ವಿದ್ಯಾರ್ಥಿಗಳನ್ನು ಬಂಧಿಸಿದ್ದೇವೆ. ಅವರು ವಿವಿಧ ಕಾಲೇಜುಗಳಿಂದ ಸರಬರಾಜು ಮಾಡುತ್ತಿದ್ದ ಗ್ರಾಹಕರ ಪಟ್ಟಿಯನ್ನು ಹೊಂದಿದ್ದರು. ನಾವು ಈ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ ಎಂದು ಪೊಲೀಸ್ ಕಮಿಷನ‌ರ್ ತಿಳಿಸಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments