ಕೇರಳದಲ್ಲಿ ಬಿಜೆಪಿಗೆ ಡಬಲ್ ಡಿಜಿಟ್ ಸ್ಥಾನಗಳು: ಕೆ. ಸುರೇಂದ್ರನ್ ವಿಶ್ವಾಸ

Spread the love

ಕೇರಳದಲ್ಲಿ ಬಿಜೆಪಿಗೆ ಡಬಲ್ ಡಿಜಿಟ್ ಸ್ಥಾನಗಳು: ಕೆ. ಸುರೇಂದ್ರನ್ ವಿಶ್ವಾಸ

ಪುತ್ತೂರು: ಕೇರಳ ರಾಜ್ಯದಲ್ಲಿ ಈ ಬಾರಿ ಬಿಜೆಪಿ ಡಬಲ್ ಡಿಜಿಟ್ ಸಂಖ್ಯೆಯಲ್ಲಿ ಸ್ಥಾನಗಳನ್ನು ಗಳಿಸಲಿದೆ ಎಂದು ಮಂಜೇಶ್ವರ ಬಿಜೆಪಿ ಅಭ್ಯರ್ಥಿ ಕೆ. ಸುರೇಂದ್ರನ್ ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಮಾತನಾಡಿದ ಅವರು, ಕಳೆದ ಲೋಕಸಭಾ ಚುನಾವಣೆಯಲ್ಲಿ ಕೇರಳದಲ್ಲಿ ಬಿಜೆಪಿ ಸುಮಾರು 20% ಮತಗಳನ್ನು ಪಡೆದಿದ್ದು, ತ್ರಿಶೂರ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದ್ದನ್ನು ಉಲ್ಲೇಖಿಸಿದರು.

ಇದರಿಂದ ಕೇರಳದಿಂದ ಲೋಕಸಭೆಗೆ ಬಿಜೆಪಿ ಅಭ್ಯರ್ಥಿಯನ್ನು ಜಯಭೇರಿಗೊಳಿಸಿ ಕಳುಹಿಸಲಾಗಿದೆ. ಇದೇ ರೀತಿ, ಈ ಬಾರಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲೂ ಬಿಜೆಪಿ ಉತ್ತಮ ಸ್ಥಾನಗಳನ್ನು ಪಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಹಿಂದುತ್ವ ಆಧಾರಿತ ಪಕ್ಷವಾಗಿದ್ದು, ಕರ್ನಾಟಕ, ಕರಾವಳಿ ಅಥವಾ ಕೇರಳ ಎನ್ನುವ ಭೇದವಿಲ್ಲದೆ ಎಲ್ಲೆಡೆ ಒಂದೇ ಮೂಲ ಸಿದ್ಧಾಂತವನ್ನು ಅನುಸರಿಸುತ್ತದೆ ಎಂದು ಹೇಳಿದರು.
ಇನ್ನು ಬಿಜೆಪಿ ಸಂಸದ ಸುರೇಶ್ ಗೋಪಿ ಅವರ ಬೀಫ್ ತಿನ್ನುವ ಕುರಿತು ನೀಡಿದ ಹೇಳಿಕೆ ವೈಯಕ್ತಿಕವಾಗಿದ್ದು, ಅದು ಪಕ್ಷದ ಅಧಿಕೃತ ನಿಲುವಲ್ಲ ಎಂದು ಕೆ. ಸುರೇಂದ್ರನ್ ಸ್ಪಷ್ಟಪಡಿಸಿದರು.


Spread the love
Subscribe
Notify of

0 Comments
Inline Feedbacks
View all comments