ಕೋಮು ಪ್ರಚೋದನಕಾರಿ ಭಾಷಣ ಪ್ರಕರಣ : ಹರೀಶ್ ಪೂಂಜಾ ವಿರುದ್ದ ನ್ಯಾಯಾಲಯಕ್ಕೆ  ಚಾರ್ಜ್ ಶೀಟ್ ಸಲ್ಲಿಕೆ…!

Spread the love

ಕೋಮು ಪ್ರಚೋದನಕಾರಿ ಭಾಷಣ ಪ್ರಕರಣ : ಹರೀಶ್ ಪೂಂಜಾ ವಿರುದ್ದ ನ್ಯಾಯಾಲಯಕ್ಕೆ  ಚಾರ್ಜ್ ಶೀಟ್ ಸಲ್ಲಿಕೆ…!

ತೆಕ್ಕಾರು ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶೋತ್ಸವದ ವೇದಿಕೆಯಲ್ಲಿ ಕೋಮು ಪ್ರಚೋದನಕಾರಿ ಭಾಷಣ ಮಾಡಿದ ಆರೋಪದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ವಿರುದ್ದ ಪ್ರಕರಣ ದಾಖಲಿಸಿದ್ದು ಇದೀಗ ಪೊಲೀಸರು ಇಂದು ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.

ಈ ಹಿಂದೆ ಎಫ್ಐಆರ್ ರದ್ದುಗೊಳಿಸುವಂತೆ ಹರೀಶ್ ಪೂಂಜ ಹೈಕೋರ್ಟ್ ಮೊರೆ ಹೋಗಿದ್ದರು ಆದರೆ ಈ ಬಗ್ಗೆ ತಕ್ಷಣಕ್ಕೆ ಯಾವುದೇ ಕ್ರಮಕೈಗೊಳ್ಳದ ಹೈಕೋರ್ಟ್ ದೂರುದಾರರಿಗೆ ಮತ್ತು ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿತ್ತು.

ಈ ನಡುವೆ ಪೊಲೀಸರು ಶಾಸಕ ಪೂಂಜ ವಿರುದ್ದ ಹೈಕೋರ್ಟಿಗೆ ಚಾರ್ಜ್ ಶೀಟ್ ಸಲ್ಲಿಸಿದ್ದು ಶಾಸಕ ಹರೀಶ್ ಪೂಂಜಗೆ ಮತ್ತೊಂದು ಹಿನ್ನಡೆಯಾಗಿದೆ.

ಇಂದು (ಮೇ 20) ಪ್ರಕರಣ ಸಂಬಂಧ ವಾದ – ಪ್ರತಿವಾದ ನಡೆಯಲಿದ್ದು ದೂರುದಾರ ಎಸ್ ಬಿ. ಇಬ್ರಾಹಿಂ ಅವರ ಪರವಾಗಿ ಹೈಕೊರ್ಟಿನ ಹಿರಿಯ ನ್ಯಾಯವಾದಿ ಬಾಲನ್ ಅವರು ವಾದಿಸಲಿದ್ದಾರೆ.


Spread the love