ಕ್ರೈಸ್ತ ಧರ್ಮಕ್ಕೆ ಬಲವಂತದಿಂದ ಮತಾಂತರಕ್ಕೆ ಪ್ರಯತ್ನ – ದೂರು ದಾಖಲು

ಕ್ರೈಸ್ತ ಧರ್ಮಕ್ಕೆ ಬಲವಂತದಿಂದ ಮತಾಂತರಕ್ಕೆ ಪ್ರಯತ್ನ – ದೂರು ದಾಖಲು

ಮಂಗಳೂರು: ಹಿಂದೂಧರ್ಮದಿಂದ ಕ್ರೈಸ್ತ ಧರ್ಮಕ್ಕೆ ಮತಾಂತರವಾಗುವಂತೆ ಒತ್ತಾಯಿಸಿದ್ದಾರೆ ಎಂದು ಉದ್ಯಾವರ ನಿವಾಸಿ ಪ್ರದೀಪ್ ಕೋಟ್ಯಾನ್ ಎಂಬವರು ಡಿವೈನ್ ರೆಟ್ರಿಟ್ ಸೆಂಟರ್ ಇದರ ಅಬ್ರಾಹಾಂ ಮತ್ತು ಐರಿನ್ ಎಂಬವರ ವಿರುದ್ದ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಅಗಸ್ಟ್ 14ರಂದು ಆರೋಪಿ ಐರಿನ್ ಟೀಚರ್ ಎಂಬವರು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತ ಮಾಡುವ ಉದ್ದೇಶದಿಂದ ರಿಕ್ಷಾದಲ್ಲಿ ಉದ್ಯಾವರದಿಂದ ಕಾರ್ನಾಡಿನ ಡಿವೈನ್ ಸೆಂಟರ್ ವರೆಗೆ ಕರೆದುಕೊಂಡು ಹೋಗಿದ್ದು ಈ ವೇಳೆ ಹಿಂದೂ ಧರ್ಮವನ್ನು ಅವಮಾನಕರಿಸುವ ರೀತಿಯಲ್ಲಿ ಮಾತನಾಡಿದ್ದು, ಬಳಿಕ ಕಾರ್ನಾಡಿನ ಡಿವೈನ್ ಸೆಂಟರ್ ನಲ್ಲಿ ಕೂಡ ಹಿಂದೂ ಧರ್ಮದ ಬಗ್ಗೆ ಜಿಗುಪ್ಸೆ ಹುಟ್ಟುವಂತೆ ಮಾತನಾಡಿದ್ದು ಈ ವೇಳೆ ಅಲ್ಲಿಂದ ಹೊರಹೋಗಲು ಪ್ರಯತ್ನಿಸಿದಾಗ ತಡೆದು ನಿಲ್ಲಿಸಿ ಮನಬಿಚ್ಚಿ ಮಾತನಾಡಬೇಕು ಎಂದು ಒತ್ತಾಯಿಸಿದ್ದಲ್ಲದೆ ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಲು ಪ್ರಯತ್ನಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ಪ್ರಕರಣದ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.