ಗಣೇಶೋತ್ಸವದಲ್ಲಿ ಕಾರ್ಯಕ್ರಮ ನೀಡುತ್ತಿದ್ದ ವೇಳೆ ಹೃದಯಾಘಾತದಿಂದ ಸಂಗೀತ ಸಂಯೋಜಕ ಜೆರಿ ಬಜ್ಜೊಡಿ ನಿಧನ

ಗಣೇಶೋತ್ಸವದಲ್ಲಿ ಕಾರ್ಯಕ್ರಮ ನೀಡುತ್ತಿದ್ದ ವೇಳೆ ಹೃದಯಾಘಾತದಿಂದ ಸಂಗೀತ ಸಂಯೋಜಕ ಜೆರಿ ಬಜ್ಜೊಡಿ ನಿಧನ

ಮಂಗಳೂರು: ಖ್ಯಾತ ಗಾಯಕ ಮತ್ತು ಸಂಗೀತ ಸಂಯೋಜಕ ಜೆರಾಲ್ಡ್ ಡಿಸೋಜ ಸೆಪ್ಟೆಂಬರ್ 3 ರಂದು ಬಿಜೈ ಬಳಿಯ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡುವಾಗ ಹೃದಯಘಾತದಿಂದ ನಿಧನರಾದರು.

ಪೊಲೀಸರ ಪ್ರಕಾರ, ಸೆಪ್ಟೆಂಬರ್ 3 ರಂದು ಪಿಂಟೊ ಕಾಲೋನಿ ಬಿಜೈ ಬಳಿನಲ್ಲಿ ಗಣೇಶೋತ್ಸವ ಕಾರ್ಯಕ್ರಮಕ್ಕಾಗಿ ಜೆರ್ರಿ ನೀಡುತ್ತಿರುವಾಗ ಅವರ ಎದೆಯಲ್ಲಿ ನೋವು ಕಾಣಿಸಿಕೊಂಡಿದ್ದು ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು ಆದರೆ ಅವರು ದಾರಿಮಧ್ಯದಲ್ಲಿಯೇ ಕೊನೆಯುಸಿರೆಳೆದರು.

ಜೆರ್ರಿ ಸುಮಾರು 60 ಹಾಡುಗಳನ್ನು ಸಂಯೋಜಿಸಿದ್ದಾರೆ ಮತ್ತು ಮಂಗಳೂರಿನಲ್ಲಿ ಮತ್ತು ಮುಂಬೈನಲ್ಲಿ ಅನೇಕ ಸಂಗೀತ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದ್ದಾರೆ. ಅವರ ಹಾಡುಗಳಾದ ಆವಯ್ ಪೊಣಾ ಮತ್ತು ರೂಪಾ ಹಾಡುಗಳು ಹೆಚ್ಚು ಜನಪ್ರಿಯವಾಗಿವೆ.