ತೋಡಾರ್ ಮುಸ್ಲಿಂ ಯೂತ್ ಲೀಗ್ ನೂತನ ಸಮಿತಿ ಅಸ್ತಿತ್ವಕ್ಕೆ

ತೋಡಾರ್ ಮುಸ್ಲಿಂ ಯೂತ್ ಲೀಗ್ ನೂತನ ಸಮಿತಿ ಅಸ್ತಿತ್ವಕ್ಕೆ

ತೋಡಾರಿನಲ್ಲಿ ಮುಸ್ಲಿಂ ಯೂತ್ ಲೀಗ್ ಕಾರ್ಯಕರ್ತರ ಸಭೆ ನಡೆಯಿತು. ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ದ.ಕ ಜಿಲ್ಲಾಧ್ಯಕ್ಷರಾದ ಅಬ್ದುರ್ರಹ್ಮಾನ್ ದಾರಿಮಿ ತಬೂಕ್ ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಮುಸ್ಲಿಂ ಯೂತ್ ಲೀಗ್ ಜಿಲ್ಲಾ ಅಧ್ಯಕ್ಷರಾದ ಸಯ್ಯದ್ ಅಫ್ಹಾಮ್ ತಂಗಳ್ ರವರು ಉದ್ಘಾಟಿಸಿದರು. ಬಳಿಕ ನಡೆದ ಸಭೆಯಲ್ಲಿ ಮುಸ್ಲಿಂ ಯೂತ್ ಲೀಗ್  ನೂತನ ಸಮಿತಿಯನ್ನು ರಚಿಸಲಾಯಿತು.

ಅಧ್ಯಕ್ಷರಾಗಿ ಹನೀಫ್,  ಹೆಚ್. ಎಂ. ಟಿ ಪ್ರ.ಕಾರ್ಯದರ್ಶಿಯಾಗಿ ಝುಬೈರ್.ಕೋಶಾಧಿಕಾರಿಯಾಗಿ ಟಿ.ಹೆಚ್ ಅನ್ಸಾರ್, ಉಪಾಧ್ಯಕ್ಷರುಗಳಾಗಿ ನೌಫಾಲ್ ಹೆಚ್.ಎಂ.ಟಿ, ರಿಯಾಝ್ ಬಿ.ಎಸ್., ಕಾರ್ಯದರ್ಶಿಗಳಾಗಿ ಸಫರ್.ಝುಲ್ಫಿಕರ್.ಕೆ.ಶಂಶು, ಸಂಘಟನಾ ಕಾರ್ಯದರ್ಶಿಯಾಗಿ ನಾಸಿರುದ್ದೀನ್.ಮೀಡಿಯಾ ಕಾರ್ಯದರ್ಶಿಯಾಗಿ ಮೊಹಮ್ಮದ್ ಅನೀಸ್. ಆಯ್ಕೆಗೊಂಡಿದ್ದಾರೆ.

ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಯೂತ್ ಲೀಗ್ ಪ್ರ.ಕಾರ್ಯದರ್ಶಿ ಶಬೀರ್ ಅಬ್ಬಾಸ್ ತಲಪಾಡಿ. ಜಿಲ್ಲಾ ಸಮಿತಿ ಕೋಶಾಧಿಕಾರಿಯಾದ ಹೈದರ್ ಕಳಂಜ.ಉಪಾಧ್ಯಕ್ಷರಾದ ಶಬೀರ್ ಪಾಂಡವರಕಲ್ಲು. ಕಾರ್ಯದರ್ಶಿ ನೌಷಾದ್ ದೇರಳಕಟ್ಟೆ.ಶರೀಫ್ ಕಕ್ಕಿಂಜೆ   ಹಾಗೂ ಇನ್ನಿತರ ಮುಸ್ಲಿಂ ಲೀಗ್ ಹಾಗೂ ಯೂತ್ ಲೀಗ್ ನೇತಾರರು ಬಾಗವಹಿಸಿದರು.