ದಶಕದ ಬಳಿಕ 250 ರೂ. ಗಡಿ ದಾಟಿದ ರಬ್ಬರ್ ಧಾರಣೆ

Spread the love

ದಶಕದ ಬಳಿಕ 250 ರೂ. ಗಡಿ ದಾಟಿದ ರಬ್ಬರ್ ಧಾರಣೆ

ಸ್ಥಿರ ಧಾರಣೆ ಇಲ್ಲದ ರಬ್ಬರ್ ಬೆಲೆ ದಶಕದ ಬಳಿಕ 250 ರೂ. ಗಡಿ ದಾಟಿದೆ. ಅದಾಗ್ಯೂ ಇಳುವರಿ, ನಿರ್ವಹಣೆ ಖರ್ಚಿನ ಲೆಕ್ಕದಲ್ಲಿ ಧಾರಣೆ ಇನ್ನೂ ಹೆಚ್ಚಬೇಕು ಎನ್ನು ತ್ತಾರೆ ಕೃಷಿಕರು. ಕೆಲವು ತಿಂಗಳಿನಿಂದ ಧಾರಣೆ ಏರುಮುಖದತ್ತ ಸಾಗಿದ್ದು, ದಶಕದ ಬಳಿಕ ಮತ್ತೆ ಗರಿಷ್ಠ ಮಟ್ಟ ದಾಖಲಿಸಿದೆ. ಈಗಿನ ಧಾರಣೆ 2012ರ ಬಳಿಕ ದಾಖಲಾದ ಗರಿಷ್ಠ ಮಟ್ಟ ಎನ್ನುತ್ತವೆ ಮಾರುಕಟ್ಟೆ ಮೂಲಗಳು. ಕಳೆದ ಂಡಿದ್ದು, ರಬ್ಬರ್ ಖರೀದಿ ಕೇಂದ್ರಗಳಲ್ಲಿ 254 ರೂ. ಇದ್ದರೆ, ಹೊರ ಮಾರುಕಟ್ಟೆಯಲ್ಲಿ 256 ರೂ. ತನಕ ಬೇಡಿಕೆ ಇತ್ತು. ಮೇ 12ರಂದು ರಬ್ಬರ್ ಗ್ರೇಡ್‌ ಗರಿಷ್ಠ ದರ 254 ರೂ. ಹಾಗೂ ರಬ್ಬರ್ ಸ್ಕ್ಯಾಪ್ ದರ 151ರೂ.ಗೆ ಏರಿಕೆಯಾಗಿದೆ.

2014, 2015, 2017, 2018ರ ಧಾರಣೆಗೆ ಹೋಲಿಸಿದರೆ ಈ ಏರಿಕೆ ಗಮನಾರ್ಹ. 2018ರಲ್ಲಿ 115 ರೂ. ಮಟ್ಟಕ್ಕೆ ಇಳಿದಿದ್ದರೆ, 2015ರಲ್ಲಿ 200 ರೂ. ಗಡಿ ದಾಟಿತ್ತು. 2014ರಲ್ಲಿ ಅದು 245 ರೂ. ಆಸುಪಾಸಿನಲ್ಲಿತ್ತು. 2026ರಲ್ಲಿ ಮತ್ತೆ ಏರುಗತಿಯಲ್ಲಿರುವುದು ರೈತರಲ್ಲಿ ಹೊಸ ಆಶಾವಾದ ಮೂಡಿಸಿದೆ. ಹದಿನೈದು ದಿನಗಳಲ್ಲಿ 10 ರೂ. ಏರಿಕೆಯಾಗಿದ್ದು, 2026ರಲ್ಲಿ ಮೊದಲ ಬಾರಿಗೆ ಏರಿಕೆ ಸ್ಥಿರವಾಗಿದೆ ಎನ್ನುತ್ತದೆ ಮಾರುಕಟ್ಟೆ ಮೂಲಗಳು.

ಹವಾಮಾನ ಅಸ್ಥಿರತೆಯಿಂದ ಇಳುವರಿ ವರ್ಷ ದಿಂದ ವರ್ಷಕ್ಕೆ ಕುಸಿಯುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದೆ ಆರು ವರ್ಷಗಳಲ್ಲಿ ಹಾಲು ಸಿಗುತ್ತಿದ್ದರೆ, ಈಗ 8-10 ವರ್ಷ ತಗಲುತ್ತಿದೆ. ಕೇರಳದಲ್ಲಿ ರಬ್ಬರ್‌ಮರಗಳ ಆಯುಷ್ಯ 32ರಿಂದ 40 ವರ್ಷ. ದಕ್ಷಿಣ ಕನ್ನಡದಲ್ಲಿ ಮರಗಳ ಆಯುಷ್ಯವೂ ಸರಾಸರಿ 20 ವರ್ಷಕ್ಕೆ ಇಳಿದಿದೆ. ಧಾರಣೆ ಏರಿದರೂ ಲಾಭ ಸಿಗುತ್ತಿಲ್ಲ ಎಂದು ಬೆಳೆಗಾರರ ಅಭಿಪ್ರಾಯ

ಇನ್ನೊಂದೆಡೆ ಉತ್ಪಾದನ ವೆಚ್ಚವೂ ಹೆಚ್ಚಾಗಿದೆ. ಹತ್ತು ವರ್ಷದ ಹಿಂದೆ ರಬ್ಬರ್‌ಧಾರಣೆ 245 ರೂ. ಇದ್ದಾಗ ಒಂದು ಮರಕ್ಕೆ ಟ್ಯಾಪಿಂಗ್ ದರ ಸುಮಾರು 80 ಪೈಸೆ ಇದ್ದರೆ, ಈಗ ಅದು 2.50 ರೂ. ದಾಟಿದೆ. ಹಾಗಾಗಿ ಉತ್ಪಾದನ ವೆಚ್ಚ ಹೆಚ್ಚಾಗಿ ಲಾಭಾಂಶ ಕಡಿಮೆಯಾಗುತ್ತಿದೆ ಎಂದು ಬೆಳೆಗಾರರ ಅಭಿಪ್ರಾಯ

ಮಳೆ, ಟ್ಯಾಪಿಂಗ್ ಅಡ್ಡಿ, ಇಳುವರಿ ಕುಸಿತ ಮತ್ತು ಉತ್ಪಾದನ ವೆಚ್ಚ ಏರಿಕೆ ಸೇರಿ ರಬ್ಬರ್ ಮಾರುಕಟ್ಟೆಯಲ್ಲಿ ಪೂರೈಕೆ ಕಡಿಮೆಯಾಗಿದ್ದು, ಧಾರಣೆ ಏರಿಕೆಗೆ ಪ್ರಮುಖ ಕಾರಣಗಳು ಎನ್ನುತ್ತದೆ ಮಾರುಕಟ್ಟೆ ಮೂಲಗಳು.

ಮತ್ತೂಂದೆಡೆ, ಧಾರಣೆಯ ಏರಿಳಿತದಿಂದ ಬೇಸತ್ತು ರಬ್ಬರ್‌ಕೃಷಿಗೆ ವಿದಾಯ ಹೇಳಿದವರ ಸಂಖ್ಯೆ ಹೆಚ್ಚಿದೆ. ಕೇರಳ ಹಾಗೂ ದಕ್ಷಿಣ ಕನ್ನಡ ಗಡಿಯ ಕೆಲವು ಬೆಳೆಗಾರರು ಟ್ಯಾಪಿಂಗ್ ನಡೆಸಬಹುದಾದ ಮರಗಳನ್ನೂ ಕಡಿದಿದ್ದಾರೆ. ಹಳೆ ಮರಗಳನ್ನು ಟಾವು ಮಾಡಿದರೂ ಹೊಸ ಸಸಿಗಳನ್ನು ನಾಟಿ ಮಾಡಿಲ್ಲ.

ಇದು 2012ರ ಬಳಿಕದ ಅತ್ಯಂತ ಗರಿಷ್ಠ ಧಾರಣೆ. ಅಂದು 245 ರೂ. ವರೆಗೆ ಧಾರಣೆ ಇತ್ತು. ಆಗ ನಿರ್ವಹಣ ವೆಚ್ಚ ಕಡಿಮೆ ಇದ್ದುದರಿಂದ ಬೆಳೆಗಾರರಿಗೆ ಅನುಕೂಲವಾಗಿತ್ತು. ಈಗ ಧಾರಣೆ ಹೆಚ್ಚಿದ್ದರೂ ವೆಚ್ಚ ಹಲವು ಪಟ್ಟು ಏರಿಕೆಯಾಗಿದೆ. ಹೀಗಾಗಿ ಲಾಭ ಸಿಗುತ್ತಿಲ್ಲ ಎಂದು ಕೃಷಿಕರ ಅಭಿಪ್ರಾಯ


Spread the love
Subscribe
Notify of

0 Comments
Inline Feedbacks
View all comments