ಪಿಲಿಕುಳ ನಿಸರ್ಗಧಾಮದಲ್ಲಿ ಡಿಜಿಟಲ್ ಸೇವೆಗಳ ವಿಸ್ತರಣೆ-ಆನ್ ಲೈನ್ ಇ-ಟಿಕೇಟಿಂಗ್ ವ್ಯವಸ್ಥೆಗೆ ಸಚಿವ ಎನ್ .ಎಸ್.ಬೋಸರಾಜು ಚಾಲನೆ

Spread the love

ಪಿಲಿಕುಳ ನಿಸರ್ಗಧಾಮದಲ್ಲಿ ಡಿಜಿಟಲ್ ಸೇವೆಗಳ ವಿಸ್ತರಣೆ-ಆನ್ ಲೈನ್ ಇ-ಟಿಕೇಟಿಂಗ್ ವ್ಯವಸ್ಥೆಗೆ ಸಚಿವ ಎನ್ .ಎಸ್.ಬೋಸರಾಜು ಚಾಲನೆ

ಮಂಗಳೂರು:  ಪಿಲಿಕುಳ ನಿಸರ್ಗಧಾಮದಲ್ಲಿ ಪ್ರವಾಸಿಗರ ಸುಗಮ ಪ್ರವೇಶ ವ್ಯವಸ್ಥೆ ಹಾಗೂ ಡಿಜಿಟಲ್ ಸೇವೆಗಳ ವಿಸ್ತರಣೆಯ ಉದ್ದೇಶದಿಂದ ಆನ್ ಲೈನ್ ಇ-ಟಿಕೇಟಿಂಗ್ ವ್ಯವಸ್ಥೆ ಮತ್ತು ಕಿಯೋಸ್ಕ್ ಗೆ ಬುಧವಾರ ಪಿಲಿಕುಳದ ಬಾಕ್ಸ್ ಆಫೀಸ್ ನಲ್ಲಿ ರಾ‍ಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖಾ ಸಚಿವ ಎನ್.ಎಸ್. ಬೋಸರಾಜು ಅವರು ಚಾಲನೆ ನೀಡಿದರು.

ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಮಾಜಿ ಶಾಸಕ‌‌ ಜೆ.ಆರ್.‌ಲೋಬೊ, ಮಾಜಿ ಮೇಯರ್ ಭಾಸ್ಕರ್ ಕೆ., ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ, ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಅರುಣ್ ಕುಮಾರ್ ಶೆಟ್ಟಿ, ಪ್ರಾಧಿಕಾರದ ಸದಸ್ಯರಾದ ಎನ್.ಜಿ. ಮೋಹನ್, ಶಿವರಾಮ್ ಮಲ್ಲಿ, ಉಪ ಸಮಿತಿ ಅಧ್ಯಕ್ಷ ಶ್ರೀನಿಕೇತನ್, ಕೆನರಾ ಬ್ಯಾಂಕ್ ಜನರಲ್ ಮ್ಯಾನೇಜರ್ ಮಂಜುನಾಥ ಬಿ. ಸಿಂಘೈ, ಕೆನರಾ ಬ್ಯಾಂಕ್ ಡಿಜಿಎಂ ವೆಂಕಟ ವರಪ್ರಸಾದ್, ವಿಭಾಗೀಯ ಮ್ಯಾನೇಜರ್ ಗಳಾದ ವನಜ ಪ್ರಸಾದ್ ಎಚ್., ರೋಹಿತ್ ಆರ್., ಪ್ರಾಧಿಕಾರದ ಆಡಳಿತಾಧಿಕಾರಿ ಅಶೋಕ್ ಕೆ.ಆರ್., ಪಿಲಿಕುಳ ಜೈವಿಕ ಉದ್ಯಾನವನದ ನಿರ್ದೇಶಕಿ ನೇಹಾ ಸೇರಿದಂತೆ ಮತ್ತಿತರರು ಇದ್ದರು.

ಕೆನರಾ ಬ್ಯಾಂಕ್ ಜನರಲ್ ಮ್ಯಾನೇಜರ್ ಮಂಜುನಾಥ ಬಿ. ಸಿಂಘೈ ಅವರು ಇ ಟಿಕೇಟಿಂಗ್ ವ್ಯವಸ್ಥೆ ಕಾರ್ಯಾಚರಣೆಯ ಬಗ್ಗೆ ವಿವರ ನೀಡಿದರು ಜಗನ್ನಾಥ ಅವರು ಕಾರ್ಯಕ್ರಮ ನಿರ್ವಹಿಸಿದರು.


Spread the love