ಪುಂಜಾಲಕಟ್ಟೆಯಲ್ಲಿ ಅಕ್ರಮ ದನ ಸಾಗಾಟ ; ಒರ್ವನ ಬಂಧನ

Spread the love

 ಪುಂಜಾಲಕಟ್ಟೆಯಲ್ಲಿ ಅಕ್ರಮ ದನ ಸಾಗಾಟ ; ಒರ್ವನ ಬಂಧನ

ಮಂಗಳೂರು: ಅಕ್ರಮ ದನಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಪುಂಜಾಲಕಟ್ಟೆ ಪೋಲಿಸರು ಮಂಗಳವಾರ ಬಂಧಿಸಿದ್ದಾರೆ.

ಬಂಧಿತನನನ್ನು ಪರಂಗೀಪೇಟೆ ನಿವಾಸಿ ಮಹಮ್ಮದ್ ಇಲಾಲ್ (25) ಎಂದು ಗುರುತಿಸಲಾಗಿದೆ.

ಸಪ್ಟೆಂಬರ್ 3 ರಂದು ಡಿ.ಸಿಐಬಿ ಪೊಲೀಸ್ ನಿರೀಕ್ಷಕರ ಆದೇಶದಂತೆ ಡಿಸಿಐಬಿ ತಂಡದ ಸಿಬ್ಬಂದಿಗಳು ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿದ್ದು, ದಿನಾಂಕ: 04-09-2018 ರಂದು ಬೆಳಗಿನ ಜಾವ ಸುಮಾರು 4-30 ಗಂಟೆಗೆ ಬಿ.ಸಿರೋಡ್ ವೃತ್ತದಲ್ಲಿ ವಶಕ್ಕೆ ಪಡೆಯುವಲ್ಲಿ ಮಂಗಳೂರು ಡಿ.ಸಿ.ಐ.ಬಿ ಪೊಲೀಸರು ಯಶಸ್ವಿಯಾಗಿದ್ದು, ಸದ್ರಿ ಕಾರು ಮತ್ತು ಆರೋಪಿಯನ್ನು ಪುಂಜಾಲಕಟ್ಟೆ ಪೊಲೀಸ್ ಠಾಣೆಗೆ ಹಸ್ತಾಂತರಿಸಿರುತ್ತಾರೆ.

ಸದ್ರಿ ಪ್ರಕರಣದಲ್ಲಿ ಅಮ್ಮಮ್ಮಾರ್ನ ನಿವಾಸಿ 1) ಮನ್ಸೂರ್ @ ಮಂಚು, 2) ಅರಫಾ @ ಅಬುಬಕ್ಕರ್ ಸಿದ್ದಿಕ್, 3) ಜೈನು @ ಜೈನುದ್ದೀನ್ ಮತ್ತು 4) ಫಾರೂಕ್ ಎಂಬವರು ತಲೆ ಮರೆಸಿಕೊಂಡಿದ್ದು, 1) ಮನ್ಸೂರ್ @ ಮಂಚು ಎಂಬಾತನ ಮೇಲೆ ದನಕಳವು ಹಾಗೂ ದನ ಸಾಗಾಟಕ್ಕೆ ಸಂಬಂಧಪಟ್ಟಂತೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ 5 ಪ್ರಕರಣಗಳು ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 1 ಪ್ರಕರಣ, ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ 1 ಪ್ರಕರಣ ಮತ್ತು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ 1 ಪ್ರಕರಣ ಸೇರಿ ಒಟ್ಟು 8 ಪ್ರಕರಣಗಳು ದಾಖಲಾಗಿರುತ್ತವೆ. 2) ಜೈನು @ ಜೈನುದ್ದೀನ್ ಎಂಬಾತನ ವಿರುದ್ಧ ಬಂಟ್ವಾಳ ಗ್ರಾಮಂತರ ಪೊಲೀಸ್ ಠಾಣೆಯಲ್ಲಿ 3 ಹಲ್ಲೆ ಪ್ರಕರಣಗಳು ದಾಖಲಾಗಿರುತ್ತದೆ.

ಈ ಕಾರ್ಯಾಚರಣೆಯನ್ನು ದ.ಕ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ|ರವಿಕಾಂತೇಗೌಡ ಐ.ಪಿ.ಎಸ್ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಸಜಿತ್ ವಿ,ಜೆ ರವರ ನಿರ್ದೇಶನದಂತೆ ಡಿ.ಸಿ.ಐ.ಬಿ ಪೊಲೀಸ್ ನಿರೀಕ್ಷಕರಾದ ಶ್ರೀ ಸುನೀಲ್ ವೈ ನಾಯಕ್ರವರ ನೇತ್ರತ್ವದ ತಂಡದಲ್ಲಿ ಸಿಬ್ಬಂದಿಯವರಾದ ವಾಸು ನಾಯ್ಕ, ಲಕ್ಷ್ಮಣ ಕೆ.ಜಿ, ಇಕ್ಬಾಲ್ ಎ.ಇ, ಉದಯ ರೈ, ಪ್ರವೀಣ್ ಎಂ, ತಾರಾನಾಥ್ ಮತ್ತು ಶೋನ್ಶಾರವರು ಭಾಗವಹಿಸಿರುತ್ತಾರೆ.


Spread the love