ಪುತ್ತೂರು| ತಲವಾರು ಪ್ರದರ್ಶಿಸಿ ಬೆದರಿಕೆ: ಆರೋಪಿ ಸಕಲೇಶಪುರದ ರಾಜೇಶ್ ಬಂಧನ

Spread the love

ಪುತ್ತೂರು| ತಲವಾರು ಪ್ರದರ್ಶಿಸಿ ಬೆದರಿಕೆ: ಆರೋಪಿ ಸಕಲೇಶಪುರದ ರಾಜೇಶ್ ಬಂಧನ

ಪುತ್ತೂರು: ತಲವಾರು ಹಿಡಿದುಕೊಂಡು ಸಾರ್ವಜನಿಕರಿಗೆ ಬೆದರಿಕೆ ಒಡ್ಡಿದ ಪ್ರಕರಣವೊಂದು ಪುತ್ತೂರು ನಗರ ಬೊಳುವಾರು ಮಸೀದಿ ಬಳಿಯಲ್ಲಿ ಸೋಮವಾರ ನಡೆದಿದ್ದು, ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ನಗರ ಪೊಲೀಸರು ತಲವಾರು ಸಹಿತ ಆರೋಪಿಯನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಸಕಲೇಶಪುರ ಮೂಲದ ಪ್ರಸ್ತುತ ಬಂಟ್ವಾಳದಲ್ಲಿ ವಾಸ್ತವ್ಯವಿರುವ ರಾಜು ಯಾನೆ ರಾಜೇಶ್ (45) ಎಂದು ಗುರುತಿಸಲಾಗಿದೆ.

ಆರೋಪಿ ರಾಜೇಶ್ ತಲವಾರು ಹಿಡಿದುಕೊಂಡು ಮಸೀದಿ ಬಳಿಯ ಗೇಟಿನ ಹೊರ ಭಾಗದಲ್ಲಿ ನಿಂತಿದ್ದ ಎನ್ನಲಾಗಿದ್ದು, ಇದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಪುತ್ತೂರು ನಗರ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ, ಆತನನ್ನು ಸಾರ್ವಜನಿಕರ ಸಹಾಯದಿಂದ ಹಿಡಿದು ವಿಚಾರಣೆ ನಡೆಸಿದ್ದಾರೆ. ಆತನ ವಿರುದ್ದ ಅ.ಕ್ರ: 59/2025, ಕಲಂ: 25(1B)(b) Indian Arms Act ಹಾಗೂ 110 ಬಿ.ಎನ್.ಎಸ್ ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments