ಭಯೋತ್ಪಾದಕರ ಮೂಲ ನೆಲಕ್ಕೆ ನುಗ್ಗಿ ಉಗ್ರ ಸಂಹಾರಕ್ಕೆ ಭಾರತದ ಸಿಂಧೂರ ಅಸ್ತ್ರ : ಶ್ರೀನಿಧಿ ಹೆಗ್ಡೆ
ರಾಷ್ಟ್ರದ ಮುಕಟ ಮಣಿ ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ಅಮಾನುಷ ರೀತಿಯಲ್ಲಿ ದಾಳಿ ನಡೆಸಿದ ಪಾಕಿಸ್ತಾನ ಪೋಷಿತ ಉಗ್ರರ ನೆಲೆಗಳನ್ನು ನಿಖರವಾಗಿ ಗುರುತಿಸಿ ಹೊಡೆದು ನೂರಾರು ಭಯೋತ್ಪಾದಕರನ್ನು ಸಂಹಾರ ಮಾಡಿದ ನಮ್ಮ ಹೆಮ್ಮೆಯ ಪರಾಕ್ರಮ ಇಡೀ ಜಗತ್ತಿಗೆ ಗೊತ್ತಾಗಿದೆ ಎಂದು ಬಿಜೆಪಿ ಉಡುಪಿ ಮಾಧ್ಯಮ ಪ್ರಮುಖ್ ಶ್ರೀನಿಧಿ ಹೆಗ್ಡೆ ತಿಳಿಸಿದ್ದಾರೆ.
ಪಾಕ್ ಆಕ್ರಮಿತ ಕಾಶ್ಮೀರ ಮಾತ್ರ ಅಲ್ಲ ಭಾರತದ ಸುದ್ದಿಗೆ ಹಾಗೂ ಭಾರತೀಯ ನಾಗರಿಕರ ತಂಟೆಗೆ ಬಂದಲ್ಲಿ ಪಾಕಿಸ್ತಾನದೊಳಗೆ ನುಗ್ಗಿ ಹೊಡೆಯುತ್ತೇವೆ ಎನ್ನುವುದನ್ನು ಕೇಂದ್ರ ಸರ್ಕಾರ ಮತ್ತೊಮ್ಮೆ ಸಾಧಿಸಿ ತೋರಿಸಿದೆ. ಪಾಕಿಸ್ತಾನದ ಅಗ್ರ ನಗರಗಳಲ್ಲಿ ಒಂದಾದ ಬಹವಾಲ್ಪುರ್ ದಾಳಿಗೆ ಮೋಸ್ಟ್ ವಾಂಟೆಡ್ ಉಗ್ರ ಮಸೂದ್ ಅಜರ್ ನ ಕುಟುಂಬದವರು ಮೃತ ಪಟ್ಟಿರುವುದು ಖಚಿತವಾಗಿದೆ. ಈ ಮೂಲಕ ಭಾರತವೆಂಬ ಆನೆಗೆ ಉಗ್ರ ಎಂಬ ಕ್ರಿಮಿಗಳ ಮೂಲಕ ಚುಚ್ಚಿದರೆ ಉಗ್ರರು ಮಾತ್ರ ಸಾವನಪ್ಪುದಿಲ್ಲ, ಇದರ ಮೂಲ ಒಡೆದು ಹಾಕುತ್ತೇವೆ ಹಾಗೂ ಶತ್ರು ಸಂಹಾರಕ್ಕೆ ಭಾರತ ಸಿದ್ದ, ಕೇವಲ ಡಿಫೆನ್ಸ್ ಮಾತ್ರ ಅಲ್ಲ ಅಫೆನ್ಸಿವ್ ಆಗಿ ಕೂಡ ಪ್ರತಿಕ್ರಿಯೆ ನೀಡುತ್ತದೆ ಎಂದು ಈ ಮೂಲಕ ವಿಶ್ವಕ್ಕೆ ಮತ್ತೊಮ್ಮೆ ಸ್ಪಷ್ಟ ಸಂದೇಶ ನೀಡಿದೆ.
2001ರ ಪಾರ್ಲಿಮೆಂಟ್ ಮೇಲಿನ ದಾಳಿ, 2002 ರ ದೆಹಲಿಯ ಅಕ್ಷರಧಾಮ ಮಂದಿರದ ಮೇಲಿನ ದಾಳಿ, 2008 ರ ಮುಂಬೈ ದಾಳಿ, 2016 ರ ಉರಿ ದಾಳಿ, 2019 ರ ಪುಲ್ವಾಮಾ ದಾಳಿ, 2025 ರ ಪಹಲ್ಗಾಮ್ ದಾಳಿಗೆ ಆಪರೇಶನ್ ಸಿಂಧೂರ್ ಮೂಲಕ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ದೃಢ ನಾಯಕತ್ವ ನಮ್ಮ ಸಧೃಡ ಸೇನಾ ಶಕ್ತಿಯ ಮೂಲಕ ಉಗ್ರ ಪೋಷಕ ಪಾಕಿಸ್ತಾನದ ಉಗ್ರರ ಮೂಲ ನೆಲೆಗೆ ಸ್ಟ್ರೈಕ್ ಮಾಡುವ ಮೂಲಕ ತಕ್ಕ ಉತ್ತರ ನೀಡಿದೆ.
ಈ ಹಿಂದೆ ಉರಿ ದಾಳಿಗೆ ಸರ್ಜಿಕಲ್ ಸ್ಟ್ರೈಕ್, ಪುಲ್ವಾಮಾ ದಾಳಿಗೆ ಬಾಲಕೋಟ್ ಸ್ಟ್ರೈಕ್ ಹಾಗೂ ಇಂದು ಹತ್ತು ಹೆಜ್ಜೆ ಮುಂದೆ ಹೋಗಿ ಭಾರತೀಯ ತಾಯಂದಿರ ಸಿಂಧೂರ ಅಳಿಸಿದವರ ಮೂಲ ನೆಲೆಗೆ ಹೋಗಿ ಭಯೋತ್ಪಾದಕರ ಮೂಲದಲ್ಲೇ ರಕ್ತದೋಕುಳಿ ಹರಿಸಿ ಬರುವ ಮೂಲಕ ಪಹಲ್ಗಾಮ್ ದಾಳಿಯಲ್ಲಿ ಮಡಿದವರಿಗೆ ನ್ಯಾಯ ದೊರಕಿಸುವ ಕಾರ್ಯ ನಮ್ಮ ಹೆಮ್ಮೆಯ ನಾಯಕ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಜವಾಬ್ದಾರಿಯುತವಾಗಿ ಮಾಡಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.