ಮಾಣ್ಕಾಂ ಮೊತಿಯಾಂ-2ಮಕ್ಕಳ ರಜಾ ಶಿಬಿರ ಸಮಾರೋಪ
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಇನ್ಫೆಂಟ್ ಮೇರಿ ಚರ್ಚ್, ಬಜ್ಜೋಡಿ ಇವರ ಸಹಯೋಗದಲ್ಲಿ ಹಮ್ಮಿಕೊಂಡ “ಮಾಣ್ಕಾಂ ಮೊತಿಯಾಂ-2” ಎಂಬ ಮಕ್ಕಳ 3 ದಿನಗಳ ರಜಾ ಶಿಬಿರದ ಸಮಾರೋಪ ಕಾರ್ಯಕ್ರಮವು 22-04-2026 ರಂದು ಚರ್ಚ್ ಸಭಾಂಗಣದಲ್ಲಿ ನೆರವೇರಿತು.
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಜೋಕಿಂ ಸ್ಟ್ಯಾನಿ ಆಲ್ವಾರಿಸ್‌ರವರು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, ತಮ್ಮ ಪ್ರಾಸ್ತಾವಿಕ ನುಡಿಗಳೊಂದಿಗೆ ನೆರೆದ ಎಲ್ಲಾ ಅತಿಥಿಗಳನ್ನು, ಶಿಬಿರಾರ್ಥಿಗಳನ್ನು ಹಾಗೂ ತರಬೇತಿದಾರರನ್ನು ಸ್ವಾಗತಿಸಿದರು.
ಶಿಬಿರದಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಶ್ರೀ ಕ್ರಿಸ್ಟೋಫರ್ ನಿನಾಸಂ ಹಾಗೂ ವಂ| ಗುರು ಐವನ್ ಡಿಸೋಜಾರವರು ಪ್ರಮಾಣ ಪತ್ರವನ್ನು ವಿತರಿಸಿದರು.
ಮುಖ್ಯ ಅತಿಥಿಗಳಾದ ಶ್ರೀ ಕ್ರಿಸ್ಟೋಫರ್ ನಿನಾಸಂರವರು ಮಾತಾನಾಡಿ, ಶಿಬಿರದಲ್ಲಿ ಕಲಿತ ಪ್ರತಿಯೊಂದು ವಿಚಾರವನ್ನು ಮನಗಂಡು, ಮುಂದಿನ ಜೀವನದಲ್ಲಿ ಅದನ್ನು ಅಳವಡಿಸಿಕೊಳ್ಳಿ ಎಂದು ಮಕ್ಕಳಿಗೆ ಕರೆಕೊಟ್ಟರು.
ಗೌರವ ಅತಿಥಿಗಳಾದ ವಂ| ಗುರು ಐವನ್ ಡಿಸೋಜಾರವರು ಮಾತಾನಾಡಿ, ಚಿಕ್ಕ ವಯಸ್ಸಿನಲ್ಲಿ ಕಲಿತ ವಿಷಯಗಳನ್ನು ನಾವು ಜೀವನದುದ್ದಕ್ಕೂ ರೂಡಿಸಿಕೊಳ್ಳುತ್ತೇವೆ ಹಾಗೆಯೇ ಈ ಶಿಬಿರದಲ್ಲಿ ಕಲಿತ ವಿಷಯಗಳನ್ನು ಜೀವನಕ್ಕೆ ದಾರಿದೀಪವನ್ನಾಗಿಸಿಕೊಂಡು, ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಬೆಳೆಯಿರಿ ಎಂದು ಮಕ್ಕಳನ್ನು ಹುರಿದುಂಬಿಸಿದರು.
ಇನ್ಫೆಂಟ್ ಮೇರಿ ಚರ್ಚ್, ಬಜ್ಜೋಡಿ ಇದರ ಪ್ರಧಾನ ಧರ್ಮಗುರುಗಳಾದ ವಂ| ಗುರು ದೊಮಿನಿಕ್ ವಾಸ್‌ರವರು ಮಕ್ಕಳನ್ನು ಉದ್ದೇಶಿಸಿ, ಕೊಂಕಣಿ ಭಾಷೆಯನ್ನು ಉಳಿಸಿ, ಬೆಳೆಸುವ ಕರ್ತವ್ಯ ಈಗಿನ ಮಕ್ಕಳ ಕೈಯಲ್ಲಿದೆ; ಹಾಗಾಗಿ ಕೊಂಕಣಿ ಭಾಷೆಯನ್ನು ಮಾತಾನಾಡಿ, ಅದರ ಉಪಯೋಗನ್ನು ಇನ್ನಷ್ಟು ಧೃಡಪಡಿಸಿ ಎಂದು ಶಿಬಿರದ ಮಕ್ಕಳಿಗೆ ಮನದಟ್ಟು ಮಾಡಿದರು.
ಶಿಬಿರದ ಗಾಯನ ತರಬೇತಿದಾರರಾದ ಡಿಯಲ್ ಡಿಸೋಜಾ, ನೃತ್ಯ ತರಬೇತಿದಾರರಾದ ರಾಹುಲ್ ಪಿಂಟೊ ಹಾಗೂ ಇತರ ತರಬೇತಿದಾರರಿಗೆ ಧನ್ಯವಾದ ತಿಳಿಸಲಾಯಿತು. ಸಿಯಾನ್ನ ವೇಗಸ್‌ರವರು ಕಾರ್ಯಕ್ರಮವನ್ನು ನಿರೂಪಿಸಿದರು ಹಾಗೂ ಆಶೆಲ್ ಪಿಂಟೊರವರು ಧನ್ಯವಾದಗೈದರು.













