Spread the love
ಮೋದಿ ಭೇಟಿ ಹಿನ್ನಲೆ: ನಗರದಲ್ಲಿ ಮಾರ್ಗ ಬದಲಾಯಿಸಿ ಮತ್ತು ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ
ಉಡುಪಿ: ನವೆಂಬರ್ 28 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಶ್ರೀ ಕೃಷ್ಣ ಮಠದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸುತ್ತಿರುವ ಹಿನ್ನಲೆಯಲ್ಲಿ ಅಂದು ಬೆಳಿಗ್ಗೆ 9.00 ಗಂಟೆಯಿಂದ ಅಪರಾಹ್ನ 03.00 ಗಂಟೆಯವರೆಗೆ ಈ ಕೆಳಕಂಡಂತೆ ಮಾರ್ಗ ಬದಲಾವಣೆ ಮತ್ತು ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಕೆಳಕಂಡಂತೆ ಮಾರ್ಗ ಬದಲಾವಣೆ ಮತ್ತು ಸಂಚಾರ ನಿಷೇಧದ ವಿವರ ಇಂತಿದೆ
- ಆದಿ ಉಡುಪಿ ಹೆಲಿಪ್ಯಾಡ್ ನಿಂದ ಕರಾವಳಿ ಜಂಕ್ಷನ್-ಬನ್ನಂಜೆ-ಶಿರಿಬೀಡು-ಕಲ್ಸಂಕ-ಶ್ರೀ ಕೃಷ್ಣ ಮಠದವರೆಗೆ ಯಾವುದೇ ವಾಹನಗಳ ಸಂಚಾರ ಮತ್ತು ಪಾರ್ಕಿಂಗ್ ನಿಷೇಧಿಸಿದೆ.
- ಮಣಿಪಾಲದಿಂದ ಉಡುಪಿ ಕಡೆಗೆ ಬರುವ ಎಲ್ಲಾ ವಾಹನಗಳು ಶಾರದಾ ಕಲ್ಯಾಣ ಮಂಟಪ-ಬೀಡಿನಗುಡ್ಡೆ ಮಾರ್ಗವಾಗಿ ಉಡುಪಿಗೆ ಬರುವುದು.
- ಕುಂದಾಪುರದಿಂದ ಉಡುಪಿ ಕಡೆಗೆ ಬರುವ ವಾಹನಗಳು ಕರಾವಳಿ ಫೈ ಓವರ್- ಅಂಬಲಪಾಡಿ -ಬ್ರಹ್ಮಗಿರಿ- ಜೋಡುಕಟ್ಟೆ ಮಾರ್ಗವಾಗಿ ಉಡುಪಿಗೆ ಬರುವುದು.
- ಮಂಗಳೂರಿನಿಂದ ಉಡುಪಿ ಕಡೆಗೆ ಬರುವ ವಾಹನಗಳು ಕಿನ್ನಿಮುಲ್ಕಿ ಸ್ವಾಗತಗೋಪುರ-ಜೋಡುಕಟ್ಟೆ- ಮಾರ್ಗವಾಗಿ ಉಡುಪಿಗೆ ಬರುವುದು.
- ಅಂಬಾಗಿಲಿನಿಂದ ಗುಂಡಿಬೈಲ್ ಮಾರ್ಗವಾಗಿ ಉಡುಪಿಗೆ ಬರುವ ಎಲ್ಲಾ ವಾಹನಗಳು ಗುಂಡಿಬೈಲ್ ರಸಿಕಾ ಬಾರ್ ಮುಖೇನಾ ದೊಡ್ಡಣಗುಡ್ಡೆ-ಎಂಜಿಎಂ-ಎಸ್ಕೆಎಂ-ಬೀಡಿನಗುಡ ಮುಖೇನಾ ಉಡುಪಿಗೆ ಬರುವುದು.
- ಮಲ್ಪೆಯಿಂದ ಬರುವ ಎಲ್ಲಾ ವಾಹನಗಳು ಕುತ್ಪಾಡಿ ಮಾರ್ಗವಾಗಿ ಅಂಬಲಪಾಡಿ ಮುಖೇನಾ ಉಡುಪಿಗೆ ಬರುವುದು.
ಈ ನಿಷೇಧವು ವಿವಿಐಪಿ ವಾಹನ, ಸರಕಾರಿ ವಾಹನ ಮತ್ತು ಎಲ್ಲಾ ರೀತಿಯ ತುರ್ತು ಸೇವೆಯ ವಾಹನಗಳಿಗೆ ಅನ್ವಯಿಸುವುದಿಲ್ಲ ಎಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ
Spread the love













