ಅಂಗವೈಕಲ್ಯವನ್ನು ಮೆಟ್ಟಿ ನಿಂತು ಸಾಧನೆ ತೋರಿದ ದೇಹದಾಡ್ಯ ಪಟು ಜಗದೀಶ್ ಪೂಜಾರಿ

Spread the love

ಅಂಗವೈಕಲ್ಯವನ್ನು ಮೆಟ್ಟಿ ನಿಂತು ಸಾಧನೆ ತೋರಿದ ದೇಹದಾಡ್ಯ ಪಟು ಜಗದೀಶ್ ಪೂಜಾರಿ

ಮಂಗಳೂರು: ತನ್ನ ದೇಹದ ಅಂಗವೈಕಲ್ಯತೆಯ ಬಗ್ಗೆ ಯಾವುದೇ ಕೀಳರಿಮೆ ಎಣಿಸದೆ ದೇಹದಾಡ್ಯ ಪಟುವಾಗಿ ಹಲವಾರು ಸ್ಪರ್ಧೆಗಳಲ್ಲಿ ಪ್ರಶಸ್ತಿ ಪಡೆದು ಕೊಂಡಿರುವುದು ಮಾತ್ರವಲ್ಲದೆ ಈಗ ನೂರಾರು ಜನರಿಗೆ ಫಿಟ್ನೆಸ್ ಹೇಳಿ ಕೊಡುವ ಗುರುವಾಗಿ ಮಿಂಚುತ್ತಿದ್ದಾರೆ ಜಗದೀಶ್ ಪೂಜಾರಿ


ಮಂಗಳೂರಿನ ಅಡ್ಯಾರ್ ಪದವಿನ ಯಮುನಾ ಮತ್ತು ಲಿಂಗಪ್ಪ ದಂಪತಿಯ ಮೂರನೆಯ ಮಗನಾಗಿ ಜನಿಸಿದ ಇವರು ಬಾಲ್ಯದಲ್ಲಿ ಎಲ್ಲರಂತೆಯೇ ಇದ್ದರು. ತನ್ನ ಸಹೋದರನೊಂದಿಗೆ ಆಡುವಾಗ ಸೈಕಲ್ನ ಚಕ್ರಕ್ಕೆ ಕಾಲು ಸಿಲುಕಿ ಮುಂದೆ ಬಲಹೀನಗೊಂಡಿತು. ತಮ್ಮ ಕಾಲು ಬಲಹೀನಗೊಂಡಿದೆ ಎಂದು ಸುಮ್ಮನೆ ಕೂರದೆ ಅವಿರತ ಶ್ರಮ ಪಟ್ಟು ಮಾಡಿದ ಸಾಧನೆಯಿಂದ ಈಗ ಎಲ್ಲರ ಶ್ಲಾಘನೆಗೆ ಪಾತ್ರರಾಗಿದ್ದಾರೆ. ತಾಯಿಯ ಬೀಡಿ ಕಟ್ಟುವಿಕೆ, ತಂದೆಯ ಕೂಲಿಯಿಂದ ಕುಟುಂಬ ನಿರ್ವಹಣೆ ಕಷ್ಟದಲ್ಲಿ ಸಾಗುತ್ತಿದ್ದ ಸಂದರ್ಭವದು, ಚಿಕಿತ್ಸೆಗಾಗಿನ ಹಣದ ಖರ್ಚು ಪ್ರಯೋಜನವಾಗಲಿಲ್ಲ. ಬಾಲ್ಯದಲ್ಲಿ ಇಂತಹ ಕಷ್ಟ ನೋವುಗಳನ್ನುಂಡ ಜಗದೀಶ್ ರವರಿಗೆ ಸಾಧಿಸಬೇಕೆನ್ನುವ ತುಡಿತವಿತ್ತು.

ಇವರ ಇಷ್ಟೆಲ್ಲಾ ಸಾಧನೆಗಳನ್ನು ಗುರುತಿಸಿ ಸ್ವಾಮೀಜಿಯವರು, ಮುಖ್ಯಮಂತ್ರಿಗಳು, ಹಾಗೂ ಹಿಂದೂ, ಮುಸ್ಲಿಂ ಕ್ರೈಸ್ತ ಹಾಗೂ ಅನೇಕ ಗಣ್ಯ ವೇಕ್ತಿಗಳು ಯಾವುದೇ ಭೇದ ಭಾವ ತೋರದೆ ಸುಮಾರ್ 68 ಬಾರಿ ಸನ್ಮಾನ,ಪ್ರಶಸ್ತಿ,ಪುರಸ್ಕರಗಳನ್ನು ನೀಡಿ ಗೌರವಿಸಿದ್ದಾರೆ..

ರಾಷ್ಟ್ರ ಮಟ್ಟದಲ್ಲಿ ಮಿಂಚಿರುವ ಇವರು ಇನ್ನಷ್ಟು ಸಾಧನೆಗಳನ್ನು ಮಾಡುವ ಹಾಗೂ ಇನ್ನಷ್ಟು ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಹಂಬಲವನ್ನು ಹೊಂದಿದ್ದಾರೆ.

ಇವರು ಮಂಗಳೂರಿನ ಫಿಟ್ನೆಸ್ ಜಿಮ್ ನಲ್ಲಿ ಸಂದೀಪ್ ಮತ್ತು ಅಜಯ್ ಯವರಿಂದ ತನಗೆ ಅಂಗವೈಕಲ್ಯ ಇದ್ರು ಕಠಿಣ ದೈಹಿಕ ಕಸರತ್ತು ನಡೆಸಿ ಇಡೀ ರಾಷ್ಟ್ರದ ಗಮನ ಸೆಳೆದು ಇಲ್ಲಿವರೆಗೂ ತನ್ನ ಸಾಧನೆಯ ಹಾದಿಯಲ್ಲಿ ನೋವಿನ ಕ್ಷಣಗಳಲ್ಲೂ ಗೆಲವು ಕಂಡ ಅಪ್ರತಿಮ ಸಾಧಕ ನಮ್ಮ ಜಗದೀಶ್ ಪೂಜಾರಿ

ಅಂತಹ ಸಂದರ್ಭದಲ್ಲಿ ತನ್ನ ಅಂಗವೈಕಲ್ಯತೆಯನ್ನು ಮೀರಿ ದೈಹಿಕ ಕಸರತ್ತಿನ ಮೂಲಕ ದೇಹದಾಡ್ಯ ಪಟುವಾಗಿ ಹೊರಹೊಮ್ಮಿದರು. ಬಡತನವಿದ್ದರೂ ಸಂಘ ಸಂಸ್ಥೆಗಳ ಆಶ್ರಯದಲ್ಲಿ , ಮಿಸ್ಟರ್ ಕದಂಬ, ಮಿಸ್ಟರ್ ವಜ್ರದೇಹಿ, ಕರ್ನಾಟಕ ಭೂಷಣ, ಮಡಿಲು ಸನ್ಮಾನ 2019, ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್, ಫ್ಯೂಚರ್ ಕಲಾಂ ಯುನಿವರ್ಸಲ್ ಬುಕ್ ಅಫ್ ರೆಕಾರ್ಡ್ ಇತ್ಯಾದಿ ಪ್ರಶಸ್ತಿಗಳನ್ನು ಗೆದ್ದು, ಸುಮಾರು 80ಕ್ಕೂಅಧಿಕ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಾರೆ. ಮುಖ್ಯಮಂತ್ರಿ ಒಳಗೊಂಡಂತೆ ಹಲವಾರು ಮಹನೀಯರಿಂದ ಸುಮಾರು 60ಕ್ಕೂ ಅಧಿಕ ಪುರಸ್ಕಾರಗಳನ್ನು ಪಡೆದಿರುತ್ತಾರೆ.

ಜಗದೀಶ್ ಪೂಜಾರಿಯವರು ತನ್ನ ಪ್ರೌಢ ಶಿಕ್ಷಣದ ನಂತರ ಐಟಿಐ ಸ್ಟಡಿ ಮಾಡಿ ಕಂಪ್ಯೂಟರ್ ಶಿಕ್ಷಣ ಕೂಡ ಪಡೆದಿರುತ್ತಾರೆ ಸೋ ಪ್ರಸ್ತುತ ಇವಾಗ ಸಹ್ಯಾದ್ರಿ ಕಾಲೇಜ್ ನಲ್ಲಿ ಜಿಮ್ ಟ್ರೈನರ್ ಆಗಿ ಕಾರ್ಯನಿರ್ವಯಿಸುತ್ತಿದ್ದಾರೆ.

ಈಗಾಗಲೇ ವಿಶೇಷ ಚೇತನರ ವಿಭಾಗದ ದೇಹದಾರ್ಡ್ಯ ಸ್ಪರ್ಧೆಗಳಲ್ಲಿ ಜಿಲ್ಲಾ ,ರಾಜ್ಯ ರಾಷ್ಟ್ರೀಯ ಮಟ್ಟದಲ್ಲಿ ಸುಮಾರು ನಾಲ್ವತ್ತೆಂಟು ಸ್ಪರ್ಧೆಯಲ್ಲಿ ಪಾಲ್ಗೊಂಡು ಪ್ರಶಸ್ತಿ ಗೆಲ್ಲುವ ಮೂಲಕ ತಮ್ಮ ಸಾಮರ್ಥ್ಯ ಪ್ರದರ್ಶನ ಮಾಡಿದ್ದಾರೆ. ಇವರ ಸಾಧನೆಯನ್ನು ಸರಕಾರ ಗುರುತಿಸಿ ಸೂಕ್ತ ಉದ್ಯೋಗ ದೊರಕಿಸುವಂತೆ ಅವರ ಆಸೆಯಾಗಿದೆ.


Spread the love