ಅಕ್ರಮ ಗೋಮಾಂಸ ಅಡ್ಡೆಗೆ ಕಾಪು ಪೊಲೀಸರು ದಾಳಿ ನಡೆಸಿ ಇಬ್ಬರನ್ನು ಬಂಧಿಸಿ, 12.73 ;ಲಕ್ಷ ಮೌಲ್ಯದ ಸೊತ್ತು ವಶ

Spread the love

ಅಕ್ರಮ ಗೋಮಾಂಸ ಅಡ್ಡೆಗೆ ಕಾಪು ಪೊಲೀಸರು ದಾಳಿ ನಡೆಸಿ ಇಬ್ಬರನ್ನು ಬಂಧಿಸಿ, 12.73 ;ಲಕ್ಷ ಮೌಲ್ಯದ ಸೊತ್ತು ವಶ

ಉಡುಪಿ: ಅಕ್ರಮವಾಗಿ ಗೋವುಗಳನ್ನುಹಾಗೂ ಲಕ್ಷಾಂತರ ಮೌಲ್ಯದ ಇತರ ಸೊತ್ತುಗಳನ್ನು ವಶಪಡಿಸಿಕೊಂಡ ಘಟನೆ ಮಲ್ಲಾರು ಕುಡ್ತಿಮಾರ್ ಎಂಬಲ್ಲಿ ಗುರುವಾರ ಬೆಳಿಗ್ಗೆ ನಡೆದಿದೆ.

ಬಂಧಿತರನ್ನು ಉದ್ಯಾವರ ಗುಡ್ಡೆಯಂಗಡಿ ನಿವಾಸಿ ಮೊಹಮ್ಮದ್ ತಾವಾ(35) ಮತ್ತು ಮೂಳೂರು ನಿವಾಸಿ ಮೊಯ್ದಿನಬ್ಬ (26) ಎಂದು ಗುರುತಿಸಲಾಗಿದೆ. ಈ ವೇಳೆ ಶಮೀರ್ ಮತ್ತು ನೌಷಾದ್ ಎಂಬವರು ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ.

ಗುರುವಾರ ಬೆಳಿಗ್ಗೆ ಕಾಪು ಪಿಎಸ್ ಐ ರಾಜಶೇಖರ್ ಬಿ ಸಾಗನೂರು ಇವರಿಗೆ ಮಲ್ಲಾರು ಕುಡ್ತಿಮಾರ್ ಎಂಬಲ್ಲಿ ಕೈರುನ್ನಿಸಾ ಕಾಟೇಜ್ ಹೆಸರಿನ ಮನೆಯ ಕಂಪೌಡಿನ ಸಮೀಪ ಜಾನುವಾರುಗಳನ್ನು ಕಡಿದು ಮಾಂಸ ಮಾರಾಟ ಮಾಡುಲು ತಯಾರಿಸುತ್ತಿರುವ ಕುರಿತು ಮಾಹಿತಿ ಬಂದ ಹಿನ್ನಲೆ ಸ್ಥಳಕ್ಕೆ ದಾಳಿ ನಡೆಸಿ, ಆರೋಪಿಗಳು ತಪ್ಪಿಸಿಕೊಂಡು ಓಡಲು ಪ್ರಯತ್ನಿಸಿದ್ದು ಈ ವೇಳೆ ಇಬ್ಬರನ್ನು ಬಂಧಿಸಿದ್ದು ಆರೋಪಿಗಳು ಮೂಡಬೆಟ್ಟು ಪರಿಸರದಿಂದ ದನಕರುಗಳನ್ನು ಕಳವು ಮಾಡಿಕೊಂಡು ಬಂದು ಮಾಂಸವನ್ನು ಮಾಡಿ ಮಾರಾಟಕ್ಕೆ ಯತ್ನಿಸುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ.

ಬಂಧಿತರಿಂದ 23000 ಮೌಲ್ಯದ ಮಾಂಸ, 9000 ಮೌಲ್ಯದ ಜೀವಂತ ದನ ಹಾಗೂ ಎರಡು ಕರುಗಳು, ರೂ 2ಲಕ್ಷ ಮೌಲ್ಯದ ಒಕ್ಟೇವಿಯಾ ಕಾರು, ರೂ 10 ಲಕ್ಷ ಮೌಲ್ಯದ ಕ್ರೆಟಾ ಕಾರು, ರೂ 30000 ಮೌಲ್ಯದ ಜೂಪಿಟರ್ ಸ್ಕೂಟರ್, ರೂ 11000 ಮೌಲ್ಯದ 4 ಮೊಬೈಲ್ ಹಾಗೂ ಇತರ ವಸ್ತುಗಳನ್ನು ವಶಪಡಿಕೊಂಡಿದ್ದಾರೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ ರೂ 12,73,300/- ಆಗಿರುತ್ತದೆ.

ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸದರಿ ಕಾರ್ಯಾಚರಣೆಯನ್ನು ಎನ್. ವಿಷ್ಣುವರ್ಧನ ಕುಮಾರಚಂದ್ರ ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಭರತ್ ರೆಡ್ಡಿ ಪೊಲೀಸ್ ಉಪಾಧೀಕ್ಷಕರು, ಕಾರ್ಕಳ ಉಪ ವಿಭಾಗ ಕಾರ್ಕಳ, ಹಾಗೂ ಮಹೇಶ್ ಪ್ರಸಾದ್ ಪೊಲೀಸ್ ವೃತ್ತ ನಿರೀಕ್ಷಕರು ಕಾಪು ವೃತ್ತ ರವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ಮಾಡಿದ್ದು ಸದರಿ ಕಾರ್ಯಾಚರಣೆಯಲ್ಲಿ ರಾಜಶೇಖರ್ ಬಿಎಸ್.ಪೊಲೀಸ್ ಉಪ ನಿರೀಕ್ಷಕರು ,(ಕಾ-ಸೂ) ಅಪರಾಧ ವಿಭಾಗದ ಪಿ ಎಸೈ ಐ ಆರ್ ಗಡ್ಡೆಕರ್ ಮತ್ತು ಸಿಬ್ಬಂದಿಗಳಾದ ರವೀಂದ್ರ ,ಆನಂದ್, ಅರುಣ್, ಮಂಜುನಾಥ್, ಸಂದೇಶ್, ಪರಶುರಾಮ್, ಚಂದ್ರಶೇಖರ್, ಜಗದೀಶ್, ಮಹಾಬಲ, ಮಪಿಸಿ ಗೀತಾ ರವರು ಭಾಗವಹಿಸಿರುತ್ತಾರೆ


Spread the love