ಅಕ್ರಮ ಮತ ಚೀಟಿ :ಕ್ರಿಮಿನಲ್ ಮೊಕದ್ದಮೆ – ಜಿಲ್ಲಾ ಬಿಜೆಪಿ ಯುವ ಮೋರ್ಚಾ ಎಚ್ಚರಿಕೆ

Spread the love

ಅಕ್ರಮ ಮತ ಚೀಟಿ :ಕ್ರಿಮಿನಲ್ ಮೊಕದ್ದಮೆ – ಜಿಲ್ಲಾ ಬಿಜೆಪಿ ಯುವ ಮೋರ್ಚಾ ಎಚ್ಚರಿಕೆ

ಮಂಗಳೂರು: ಮಂಗಳೂರು ನಗರ ದಕ್ಷಿಣ ಕ್ಷೇತ್ರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ನಕಲಿ ಮತದಾರರನ್ನು ನೊಂದಾಯಿಸಲಾಗಿದೆ ಎಂದು ಬಿಜೆಪಿ ಈಗಾಗಲೇ ಚುನಾವಣಾಧಿಕಾರಿಗಳಿಗೆ ದೂರು ಸಲ್ಲಿಸಿದೆ.

ಈ ಕುರಿತಂತೆ ದಾಖಲೆ ಸಮೇತ ದೂರು ಸಲ್ಲಿಸಿರುವ ಬಿಜೆಪಿ ಕಾನೂನು ವಿಭಾಗ ಈ ಕುರಿತಂತೆ ಚುನಾವಣಾ ಆಯೋಗ ತಕ್ಷಣ ಕ್ರಮ ಜರಗಿಸಬೇಕೆಂದು ಒತ್ತಾಯಿಸಿದೆ.

ನಗರದ ವಿವಿಧ ಶಾಲಾ -ಕಾಲೇಜುಗಳಲ್ಲಿ ಕಲಿಯುತ್ತಿರುವ ಅನ್ಯ ರಾಜ್ಯಗಳ ವಿದ್ಯಾರ್ಥಿಗಳು , ಹಾಸ್ಟೆಲ್, ಪಿಜಿ ಗಳಲ್ಲಿರುವ ಉದ್ಯೋಗಿಗಳನ್ನು ಅಕ್ರಮವಾಗಿ ಮತದಾರರ ಪಟ್ಟಿಗೆ ಸೇರಿಸಲಾಗಿದೆ. ಅವರೆಲ್ಲರೂ ತಮ್ಮ ಸ್ವಂತ ಊರುಗಳಲ್ಲೂ ಮತದಾನದ ಹಕ್ಕು ಹೊಂದಿದ್ದು , ಮಂಗಳೂರು ನಗರದಲ್ಲಿ ಮತ್ತೆ ನಕಲಿ ವಿಳಾಸಗಳನ್ನು ನೀಡಿ ನೊಂದಾಯಿಸಿಕೊಂಡಿದ್ದಾರೆ. ಇದು ಕ್ರಿಮಿನಲ್ ಅಪರಾಧ. ಇಂತವರ ಮೇಲೆ ಕ್ರಿಮಿನಲ್ ಮೊಕದ್ದಮೆಗಳನ್ನು ಹೂಡಬೇಕೆಂದು ಅವರು ಅಗ್ರಹಿಸಿದ್ದಾರೆ.

ಮಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ದೀನಾ ಶಾಜಿ ( ಎನ್ಯುಜಿ 5126719 ) ಮಂಗಳೂರಿನ ಬಲ್ಮಠ ವಿಳಾಸ ತೋರಿಸಿ ಇತ್ತೀಚಿಗಷ್ಟೇ ಮತದಾರರ ಚೀಟಿ ಹೊಂದಿದ್ದಾರೆ. ಆದರೆ ಈ ಯುವತಿ ಈಗಾಗಲೇ (ಎವೈಬಿ0900993 ) ಮತದಾರರ ಚೀಟಿಯನ್ನು ಕೇರಳದಿಂದ ಹೊಂದಿದ್ದಾಳೆ. ಇಂತಹ ಸಹಸ್ರಾರು ಮಂದಿ ಅಕ್ರಮವಾಗಿ ನೊಂದಾವಣೆ ಮಾಡಿಕೊಂಡಿದ್ದಾರೆ .ಈ ಅಕ್ರಮವೆಸಗಿದವರ ಮೇಲೆ ಸೂಕ್ತ ತನಿಖೆಯನ್ನು ತಕ್ಷಣ ಆರಂಭಿಸಬೇಕು. ಇಲ್ಲವಾದರೆ ಬಿಜೆಪಿಯಿಂದ ಕಾನೂನು ಹೋರಾಟ ನಡೆಸಲಾಗುವುದು ಎಂದು ವಿವರಿಸಲಾಗಿದೆ.

ಈ ರೀತಿಯಲ್ಲಿ ಎರಡು ಕಡೆಗಳಲ್ಲಿ ಮತದಾನದ ಹಕ್ಕು ಹೊಂದಿರುವವರು ಮತದಾನದ ಮುನ್ನ ಎಚ್ಚರಿಕೆ ವಹಿಸುವಂತೆ ಚುನಾವಣಾ ಆಯೋಗ ಎಚ್ಚರಿಕೆಯನ್ನು ನೀಡಬೇಕೆಂದು ಎಂದು ಮನವಿಯಲ್ಲಿ ಅಗ್ರಹಿಸಲಾಗಿದೆ.

ಮಂಗಳೂರು , ಕಾಂಗ್ರೆಸ್ ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಗರಿಷ್ಠ ಪ್ರಮಾಣದಲ್ಲಿ ಅಕ್ರಮ ಮತದಾರರನ್ನು ನೊಂದಾಯಿಸಿದ್ದು , ಇಂತಹ ಎಲ್ಲ ಮತದಾರರ ಮಾಹಿತಿಯನ್ನು ಬಿಜೆಪಿಯನ್ನು ಪತ್ತೆ ಹಚ್ಚುತ್ತಿದ್ದು , ಮತದಾನ ದಿನ ಅಕ್ರಮ ಮತದಾನ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಲಾಗುತ್ತಿದೆ .ಅಕ್ರಮವಾಗಿ ಮತದಾನ ಮಾಡಿದವರ ಬಗ್ಗೆ ಎಲ್ಲ ವಿವರಗಳನ್ನು ಚುನಾವಣಾ ಆಯೋಗಕ್ಕೆ ಒಪ್ಪಿಸಿ , ಅಂತವರ ಮೇಲೆ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸಲಾಗುವುದು ಎಂದು ಜಿಲ್ಲಾ ಬಿಜೆಪಿ ಯುವ ಮೋರ್ಚಾ ಎಚ್ಚರಿಸಿದೆ.

ಕಳೆದ ಬಾರಿಯೂ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಜೆ.ಆರ್.ಲೋಬೋ ಅವರ ಪರವಾಗಿ ಅತ್ಯಧಿಕ ಪ್ರಮಾಣದಲ್ಲಿ ಅನಧಿಕೃತ , ಅಕ್ರಮ ಮತದಾರರು ಮತ ಚಲಾಯಿಸಿದ್ದು, ಈ ಬಾರಿ ಅಂತಹ ಪ್ರಯತ್ನಗಳನ್ನು ನಡೆಸಿದರೆ ಗಂಭೀರ ಪರಿಣಾಮ ಎದುರಿಬೇಕಾಗುವುದು ಎಂದು ಅವರು ವಿವರಿಸಿದರು.

ಅಕ್ರಮ ಮತದಾನ ಪತ್ತೆಗೆ ಈಗಾಗಲೇ ಬಿಜೆಪಿಯಿಂದ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈಗಾಗಲೇ ಸುಮಾರು 3 ಸಾವಿರಕ್ಕೂ ಮಿಕ್ಕಿ ಇಂತಹ ಮತದಾರರನ್ನು ಪತ್ತೆ ಹಚ್ಚಲಾಗಿದೆ.ಇ ವರಲ್ಲಿ ಗರಿಷ್ಟ ಪ್ರಮಾಣದಲ್ಲಿರುವವರು ನಗರದ ವಿವಿಧ ಕಾಲೇಜು ಹಾಸ್ಟೆಲ್ಗಳಲ್ಲಿರುವ ಹೊರ ರಾಜ್ಯದ ವಿದ್ಯಾರ್ಥಿಗಳು. ಹಾಸ್ಟೆಲ್ಗಳಲ್ಲಿ ವಿದ್ಯಾರ್ಥಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಅಕ್ರಮವಾಗಿ ಮತದಾರರನ್ನಾಗಿ ಸೇರಿಲಾಗಿದೆ. ಈಗಾಗಲೇ ಈ ಬಗ್ಗೆ ದೂರನ್ನು ನೀಡಲಾಗಿದ್ದರೂ ಯಾವುದೇ ಕ್ರಮ ಜರಗಿಲ್ಲ. ಹಾಗಾಗಿ ನಾವು ಮುಂದಿನ ಕಾನೂನು ಕ್ರಮಕ್ಕೆ ಮುಂದಾಗಿದ್ದೇವೆ. ಈ ಅಕ್ರಮ ಮತದಾರರು ತಮ್ಮ ಹುಟ್ಟೂರಿನಲ್ಲೂ ಮತದಾನದ ಹಕ್ಕನ್ನು ಹೊಂದಿದ್ದಾರೆ. ಇಲ್ಲಿಯೂ ಅವರನ್ನು ಅಕ್ರಮವಾಗಿ ಸೇರಿಸಿಕೊಳ್ಳಲಾಗಿದೆ. ಒಬ್ಬ ವ್ಯಕ್ತಿಗೆ ಎರಡು ಕಡೆಗಳಲ್ಲಿ ಮತದಾನದ ಹಕ್ಕು ಇಲ್ಲ. ಕೇವಲ ಗೆಲ್ಲಬೇಕೆಂಬ ಕಾರಣಕ್ಕೆ ಇಂತಹ ಅಕ್ರಮಗಳನ್ನು ಕಾಂಗ್ರೆಸ್ ಕಳೆದ ಹಾಗೂ ಈ ಬಾರಿಯೂ ಮಾಡಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸುಮಾರು 20 ಸಾವಿರ ಹೊರ ರಾಜ್ಯದ ವಿದ್ಯಾರ್ಥಿಗಳನ್ನು ಇಲ್ಲಿಯ ವಿಳಾಸದಲ್ಲಿ ನೊಂದಾಯಿಸಿಕೊಂಡು ಮತದಾನ ಮಾಡಿಸಿತ್ತು. ಆ ಮೂಲಕ ಜೆ.ಆರ್.ಲೋಬೋ ಗೆಲವು ಸಾಧಿಸಿದ್ದರು. ಈ ಬಾರಿಯೂ ಗರಿಷ್ಠ ಪ್ರಮಾಣದಲ್ಲಿ ಕಾಂಗ್ರೆಸ್ ಅಕ್ರಮ ಮತದಾರರ ನೊಂದಾಣೆಯನ್ನು ಮಾಡಿದೆ. ಒಂದೇ ಹೆಸರಿನ ಮತದಾರರು ಎರಡು ಎರಡು ಕಡೆಗಳಲ್ಲಿ ಮತದಾರ ಪಟ್ಟಿಯಲ್ಲಿದ್ದಾರೆ. ಇದಕ್ಕೆ ಪೂರಕ ದಾಖಲೆಗಳನ್ನು ನಾವಿಲ್ಲಿ ಬಿಡುಗಡೆ ಮಾಡುತ್ತಿದ್ದೇವೆ. ಇಂತಹ ಸಹಸ್ರಾರು ಮತದಾರರ ಹೆಸರುಗಳನ್ನು ಬಿಜೆಪಿ ಪತ್ತೆ ಹಚ್ಚಿದೆ. ಈಗಲೂ ಆ ಕಾರ್ಯ ಮುಂದುವರಿಯುತ್ತಿದೆ ಅವರು ವಿವರಿಸಿದರು.

ಮತದಾನದ ದಿನ ಪ್ರತಿ ಬೂತ್ಗಳಲ್ಲಿ ಅಕ್ರಮ ಮತದಾನ ಪತ್ತೆಗೆಂದೇ ಇಬ್ಬರನ್ನು ಯುವ ಮೋರ್ಚಾದಿಂದ ನಿಯೋಚಿಸಲಾಗುವುದು. ಅವರು ಸಂಗ್ರಹಿಸಿದ ಆ ಎಲ್ಲ ವಿವರಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸುವುದಲ್ಲದೇ, ಕಾನೂನಿನ ಪ್ರಕಾರ ಕ್ರಮ ಕೂಡಾ ಜರಗಿಸಲಾಗುದು. ಈ ರೀತಿಯಲ್ಲಿ ಅಕ್ರಮ ಮತದಾನ ಕ್ರಿಮಿನಲ್ ಅಪರಾಧವಾಗಿದೆ. ವಿದ್ಯಾರ್ಥಿಗಳಂತೂ ಅನಾವಶ್ಯಕ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ ಎಂದವರು ಹೇಳಿದರು.

ಒಬ್ಬ ಸರಕಾರಿ ಅಧಿಕಾರಿಯಾಗಿದ್ದು , ಯಾವ ರೀತಿಯಲ್ಲಿ ಅಕ್ರಮಗಳನ್ನು ಮಾಡಬೇಕೆಂಬುದು ಲೋಬೋ ಅವರಿಗೆ ಕರಗತವಾಗಿದೆ. ಚುನಾವಣೆಯಲ್ಲಿ ಅಕ್ರಮವಾಗಿ ಗೆಲ್ಲಲು ಇಂತಹ ಅಕ್ರಮಗಳನ್ನು ಎಸಗುವ ಶಾಸಕರಿಂದ ಮಂಗಳೂರಿಗೆ ಯಾವ ರೀತಿಯ ನ್ಯಾಯವನ್ನು ನಾವು ನಿರೀಕ್ಷೆ ಮಾಡಬಹುದು ಎಂದು ಬಿ ಜೆ ಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ನಂದನ್ ಮಲ್ಯ ಅವರು ಪ್ರಶ್ನಿಸಿದರು.

ಅಧ್ಯಕ್ಷ ಸಂದೀಪ್ ಶೆಟ್ಟಿ , ಉಪಾಧ್ಯಕ್ಷರಾದ ಮಧು ಶೆಟ್ಟಿ , ಚರಿತ್ರ ಅಮೀನ್ ಉಪಸ್ಥಿತರಿದ್ದರು .


Spread the love