ಅಕ್ರಮ ಮರದ ದಿಮ್ಮಿಗಳು ಪತ್ತೆ 

Spread the love

ಅಕ್ರಮ ಮರದ ದಿಮ್ಮಿಗಳು ಪತ್ತೆ 

ಮಂಗಳೂರು: ಖಚಿತ ಮಾಹಿತಿಯ ಮೇರೆಗೆ ಮಾರ್ಚ್ 07 ರಂದು, ಮಂಗಳೂರಿನ ಅರ್ಜುನಕೋಡಿ ರಸ್ತೆಯ ಎಡಪದವು ಎಂಬಲ್ಲಿ ಕಾರ್ಯಚರಣೆ ನಡೆಸುತ್ತಿದ್ದಾಗ, ಆ ಪ್ರದೇಶದಲ್ಲಿ  ಚಲಿಸುತ್ತಿದ್ದ ಟೆಂಪೋ ನೊಂದಣೆ ಸಂಖ್ಯೆ: ಕೆಎ-20-3819ರಲ್ಲಿ ಹೆಬ್ಬಲಸು ಮತ್ತು ಮಾವು ಜಾತಿಯ ಮರದ ದಿಮ್ಮಿಗಳನ್ನು ಸಾಗಾಟ ಮಾಡುತ್ತಿರುವ ಪ್ರಕರಣವನ್ನು ಮಂಗಳೂರು ಅರಣ್ಯ ಸಂಚಾರಿ ದಳದ  ಉಪ ವಲಯ ಅರಣ್ಯ ಅಧಿಕಾರಿಗಳು ಪತ್ತೆಹಚ್ಚಿ  ಅರಣ್ಯ ಮೊಕದ್ದಮೆಯನ್ನು ದಾಖಲಿಸಿರುತ್ತಾರೆ.

ಹೆಬ್ಬಲಸು ಮತ್ತು ಮಾವು ಜಾತಿಯ ಒಟ್ಟು 13 ದಿಮ್ಮಿಗಳನ್ನು ಹಾಗೂ ಸಾಗಾಟ ಮಾಡಲಾದ ಟೆಂಪೋವನ್ನು ಸರಕಾರಕ್ಕೆ ಅಮಾನತು ಪಡಿಸಿಕೊಳ್ಳಲಾಗಿದೆ. ಆರೋಪಿಯು ತಲೆಮರೆಸಿಕೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ  ಉಪವಲಯ ಅರಣ್ಯ ಅಧಿಕಾರಿಗಳಾದ ಪ್ರಮೋದ್, ಸೀತಾರಾಮ್ ಕೆ, ಯಶೋಧರ ಕೆ. ರಾಜಶೇಖರ್ ಕ್ಯಾತ್ನಾರ್ ಹಾಗೂ ವಾಹನ ಚಾಲಕ ಜಯ ಪ್ರಕಾಶ್ ಕೆ ಸಹಕರಿಸಿದ್ದಾರೆ. ಎಂದು ವಲಯ ಅರಣ್ಯ ಅಧಿಕಾರಿ ಅರಣ್ಯ ಸಂಚಾರಿ ದಳ, ಮಂಗಳೂರು


Spread the love