ಅಕ್ಷಯಪಾತ್ರ ಫೌಂಡೇಷನ್ ಬೃಹತ್ ಪಾಕಶಾಲೆಗೆ ಶಂಕುಸ್ಥಾಪನೆ

Spread the love

ಅಕ್ಷಯಪಾತ್ರ ಫೌಂಡೇಷನ್ ಬೃಹತ್ ಪಾಕಶಾಲೆಗೆ ಶಂಕುಸ್ಥಾಪನೆ

ಮಂಗಳೂರು: ಅಕ್ಷಯಪಾತ್ರ ಫೌಂಡೇಷನ್, ಜಿಟಿ ಫೌಂಡೇಷನ್ ಮತ್ತು ದಿಯಾ ಸಿಸ್ಟಮ್ಸ್ ಪ್ರೈ.ಲಿ. ಸಹಯೋಗದಲ್ಲಿ ಮಂಗಳೂರಿನಲ್ಲಿ ಬೃಹತ್ ಪಾಕಶಾಲೆಗೆ ಶಂಕುಸ್ಥಾಪನೆ ಡಿಸೆಂಬರ್ 22, 2017ರಂದು `ಭೂಮಿ ಪೂಜೆ ನಡೆದಿದು ಈ ಅಡುಗೆಮನೆ 2019ರ ವರ್ಷದಿಂದ 50,000ಕ್ಕೂ ಹೆಚ್ಚು ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟವನ್ನು ಪೂರೈಸುತ್ತದೆ.

ಡಿಸೆಂಬರ್ 22, 2017ರಂದು `ಭೂಮಿ ಪೂಜೆ ನಡೆದಿದ್ದು ಈ ದೀಪ ಹಚ್ಚುವ ಮೂಲಕ ಈ ಪವಿತ್ರ ಪ್ರಾರಂಭಕ್ಕೆ ಚಾಲನೆ ನೀಡಲಾಯಿತು. ಈ ಕಾರ್ಯಕ್ರಮವನ್ನು ಅಕ್ಷಯ ಪಾತ್ರ ಫೌಂಡೇಷನ್‍ನ ಹೊಸ ಅಡುಗೆಮನೆ ಆವರಣ ಕೊಡ್ಮನ್ ಗ್ರಾಮ, ಬೆಂಜನಪಡವು(ಕೆನರಾ ಎಂಜಿನಿಯರಿಂಗ್ ಕಾಲೇಜು ಹಿಂಭಾಗ) ಇಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಶ್ರೀಮದ್ ಜಗದ್ಗುರು ಮಧ್ವಾಚಾರ್ಯ ಮಹಾಸಂಸ್ಥಾನಂನ ಶ್ರೀ ಪಲಿಮಾರು ಮಠ ಉಡುಪಿಯ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ, ಶ್ರೀ ಅದಮಾರು ಮಠದ ಕಿರಿಯ ಶ್ರೀಗಳಾದ ಶ್ರೀ ಶ್ರಿಲ್ಷಪ್ರಿಯ ತೀರ್ಥ ಸ್ವಾಮೀಜಿ ಮಂಗಳೂರು ಡಯೋಸೀಸ್ ಬಿಷಪ್ ಅಲೋಷಿಯಸ್ ಪಾಲ್ ಡಿ’ಸೌಝಾ, ದಿ ಅಕ್ಷಯ ಪಾತ್ರ ಫೌಂಡೇಷನ್‍ನ ಉಪಾಧ್ಯಕ್ಷ ಶ್ರೀ ಚಂಚಲಪತಿ ದಾಸ, ಅಕ್ಷಯ ಪಾತ್ರ ಫೌಂಡೇಷನ್‍ನ ಸಿಇಒ ಶ್ರೀ ಶ್ರೀಧರ್ ವೆಂಕಟ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ ಪರಿಸರ ಮತ್ತು ಅರಣ್ಯ ಇಲಾಖೆ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ್ ರೈ, ದಕ್ಷಿಣ ಕನ್ನಡದ ಸಂಸದ ನಳೀನ್ ಕುಮಾರ್ ಕಟೀಲ್, ಕರ್ನಾಟಕ ಸರ್ಕಾರದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್, ಮಂಗಳೂರಿನ ಎಂಆರ್‍ಪಿಎಲ್‍ನ ವ್ಯವಸ್ಥಾಪಕ ನಿರ್ದೇಶಕ ಎಚ್.ಕುಮಾರ್, ಮಂಗಳೂರಿನ ನಿಟ್ಟೆ ಡೀಮ್ಡ್ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ.ವಿಜಯ ಹೆಗ್ಡೆ, ಮಂಗಳೂರಿನ ಯೇನೆಪೋಯಾ ವಿಶ್ವವಿದ್ಯಾಲಯದ ಗೌರವ ಕುಲಾಧಿಪತಿ ಯೇನೆಪೋಯಾ ಅಬ್ದುಲ್ಲಾ ಕುನ್ಹಿ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಜೆ.ಆರ್.ಲೋಬೋ, ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಬಿ.ಎ.ಮೊಯಿನುದ್ದೀನ್ ಬಾವಾ, ಕರ್ನಾಟಕ ಸರ್ಕಾರದ ಮಾಜಿ ನಗರಾಭಿವೃದ್ಧಿ ಸಚಿವ ವಿನಯ್ ಕುಮಾರ್ ಸೊರಕೆ, ಬಂಟ್ವಾಳ ತಾಲೂಕಿನ ತಾಲೂಕು ಪಂಚಾಯಿತಿ ಅಧ್ಯಕ್ಷ ಶ್ರೀ ಕೆ.ಚಂದ್ರಹಾಸ ಕರ್ಕೇರಾಮ ಮಂಗಳೂರಿನ ಮೇಯರ್ ಕವಿತಾ ಸನಿಲ್, ಮಂಗಳೂರು ಜಿಲ್ಲಾಧಿಕಾರಿ ಶ್ರೀ ಶಶಿಕಾಂತ್ ಸೆಂಥಿಲ್, ಐಎಎಸ್, ಮೆರಮಜಲು ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ಸತೀಶ್ ನೈಗಕೊಡಮಾನ್‍ಕೊಡಿ ಉಪಸ್ಥಿತರಿರುತ್ತಾರೆ.
`ಭೂಮಿ ಪೂಜೆ’ಯನ್ನು ಅಕ್ಷಯ ಪಾತ್ರ ಫೌಂಡೇಷನ್‍ನ ಶ್ರೀ ಚಂಚಲಪತಿ ದಾಸ, ಹುಬ್ಬಳ್ಳಿ-ಧಾರವಾಡದ ಅಕ್ಷಯ ಪಾತ್ರ ಫೌಂಡೇಷನ್‍ನ ಅಧ್ಯಕ್ಷ ಶ್ರೀ ರಾಜೀವ್ ಲೋಚನ ದಾಸ, ಮಂಗಳೂರು ಅಕ್ಷಯ ಪಾತ್ರ ಫೌಂಡೇಷನ್‍ನ ಅಧ್ಯಕ್ಷ ಕಾರುಣ್ಯ ಸಾಗರ ದಾಸ ನೆರವೇರಿಸಿದರು.
ಉಪಸ್ಥಿತರಿದ್ದ ಗಣ್ಯರು ಭಾರತದಲ್ಲಿ ತರಗತಿಯ ಹಸಿವಿನ ರಾಷ್ಟ್ರೀಯ ಸಮಸ್ಯೆಯನ್ನು ನಿವಾರಿಸುವ ಈ ಉಪಕ್ರಮದ ಭಾಗವಾಗಿರುವುದಕ್ಕೆ ಬಹಳ ಸಂತೋಷ ವ್ಯಕ್ತಪಡಿಸಿದರು. ಅವರು ಅಕ್ಷಯ ಪಾತ್ರ ಫೌಂಡೇಷನ್ ಕಳೆದ 17 ವರ್ಷಗಳಿಂದ ಯಶಸ್ವಿಯಾಗಿ ಶಾಲಾ ಬಿಸಿಯೂಟ ಕಾರ್ಯಕ್ರಮ ಅನುಷ್ಠಾನಗೊಳಿಸಿರುವುದಕ್ಕೆ ಅಭಿನಂದನೆ ಸಲ್ಲಿಸಿದರು. ಮತ್ತು ಜಿಟಿ ಫೌಂಡೇಷನ್, ದಿಯಾ ಸಿಸ್ಟಮ್ಸ್ ಪ್ರೈ.ಲಿ.ಗೆ ಈ ಫೌಂಡೇಷನ್‍ನೊಂದಿಗೆ ಸಹಯೋಗದ ಮೂಲಕ ಶಿಕ್ಷಣವನ್ನು ರುಚಿಕರ, ಆರೋಗ್ಯಕರ ಆಹಾರವನ್ನು ಮಂಗಳೂರು ಮತ್ತು ದಕ್ಷಿಣ ಜಿಲ್ಲೆಯಾದ್ಯಂತ ಶಾಲೆಗಳಿಗೆ ನೀಡುತ್ತಿರುವುದಕ್ಕೆ ಶ್ಲಾಘಿಸಿದರು.
ಈ ಕಾರ್ಯಕ್ರಮದಲ್ಲಿ ಮಾತನಾಡಿದ ಡಾ.ವಿ.ರವಿಚಂದ್ರನ್, `ದಕ್ಷಿಣ ಕನ್ನಡ ಮತ್ತು ಉಡುಪಿ ಪ್ರದೇಶದಿಂದ ಪ್ರತಿನಿತ್ಯವೂ 50,000 ದುರ್ಬಲ ವರ್ಗದ ಮಕ್ಕಳಿಗೆ ಆಹಾರವನ್ನು ಸ್ವಯಂಚಾಲಿತ ಅಡುಗೆ ಮನೆ ಸೌಲಭ್ಯದ ಮೂಲಕ ಪೂರೈಸುವ ಕನಸು ಸುಮಾರು 5 ವರ್ಷಗಳ ನಂತರ ವಾಸ್ತವೀಕರಣಗೊಂಡಿದೆ. ನನ್ನ ಕುಟುಂಬ ಮತ್ತು ನಾನು ದೇವರು ಈ ಬಗೆಯ ಆಶೀರ್ವಾದ ಮಾಡಿರುವುದಕ್ಕೆ ನಮ್ಮ ಕೃತಜ್ಞತೆಯನ್ನು ಮಾತುಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ. ನಾವು ನಮ್ಮನ್ನು ಈ ಯೋಜನೆಯನ್ನು ಬದ್ಧತೆ, ತೀವ್ರತೆ, ಪರಿಶ್ರಮ ಮತ್ತು ಸಂಕಲ್ಪದಿಂದ ಪೂರ್ಣಗೊಳಿಸಿದ್ದೇವೆ ಮತ್ತು 50,000 ಶಾಲಾ ಮಕ್ಕಳಿಗೆ ಆಹಾರ ಪೂರೈಸುವುದು ಮತ್ತು ಅಪೌಷ್ಠಿಕತೆ ನಿವಾರಿಸುವುದು ಹಾಗೂ ಮಕ್ಕಳಿಗೆ ಅವರ ಶಿಕ್ಷಣ ಮುಂದುವರೆಸುವಂತೆ ಅವಕಾಶ ಕಲ್ಪಿಸಿ ಅವರನ್ನು ನಾಳಿನ ಮಹತ್ತರ ನಾಗರಿಕರು ಹಾಗೂ ನಾಯಕರನ್ನಾಗಿಸುವಲ್ಲಿ ಮುಖ್ಯವಾಗಿದೆ’ ಎಂದರು.
ಈ ಸಂದರ್ಭದಲ್ಲಿ ಅಕ್ಷಯ ಪಾತ್ರ ಫೌಂಡೇಷನ್‍ನ ಉಪಾಧ್ಯಕ್ಷ ಚಂಚಲಪತಿ ದಾಸ, ಜಿಟಿ ಫೌಂಡೇಷನ್ ಮತ್ತು ದಿಯಾ ಸಿಸ್ಟಮ್ಸ್ ಪ್ರೈ.ಲಿ.ಗೆ ತಮ್ಮ ಕೃತಜ್ಞತೆ ವ್ಯಕ್ತಪಡಿಸಿದರು. ಅವರು, `ಸಮುದಾಯದ ಭಾಗವಹಿಸುವಿಕೆಯಿಂದ ನಾವು ಸನ್ನದ್ಧಗೊಂಡಿದ್ದೇವೆ ಮತ್ತು ಇದು ನಾವೆಲ್ಲರೂ ಒಂದು ಮಹತ್ತರ ಕಾರಣಕ್ಕೆ ಕೈ ಜೋಡಿಸಿದರೆ ಏನು ಮಾಡಬಹುದು ಎನ್ನುವುದಕ್ಕೆ ಇದು ಮಹತ್ತರ ಉದಾಹರಣೆಯಾಗಿದೆ. ನಮ್ಮ ಅಡುಗೆಮನೆಗಳಲ್ಲಿಇ ಸುಸ್ಥಿರತೆಯನ್ನು ಕಾಪಾಡಿಕೊಳ್ಳುವ ಮೂಲಕ ಹೆಚ್ಚು ಮಕ್ಕಳನ್ನು ತಲುಪುವುದು ನಮ್ಮ ಪ್ರಯತ್ನವಾಗಿದೆ. ಆಹಾರ ಭದ್ರತೆ ದೇಶದಲ್ಲಿ ಪ್ರಮುಖ ಕಾಳಜಿಗಳಲ್ಲಿ ಒಂದಾಗಿದೆ ಮತ್ತು ಈ ನಿರಂತರ ಅಡಚಣೆ ನಿವಾರಿಸಲು ನಾವೆಲ್ಲರೂ ಒಗ್ಗೂಡಿರುವುದು ನನಗೆ ಸಂತೋಷ ತಂದಿದೆ. ನಾವು ಮಕ್ಕಳು, ಸಮುದಾಯ ಮತ್ತು ನಮ್ಮ ಸಮಾಜಕ್ಕೆ ಏನು ಅಗತ್ಯವಿದೆ ಎನ್ನುವುದರ ಕುರಿತು ಅರಿವನ್ನು ಹೊಂದಿರುವ ಜಾಗೃತ ವ್ಯಕ್ತಿಗಳಾಗಿದ್ದೇವೆ ಎನ್ನುವುದು ಮುಖ್ಯ’ ಎಂದರು.
ಮಂಗಳೂರಿನ ಅಕ್ಷಯ ಪಾತ್ರ ಫೌಂಡೇಷನ್‍ನ ಅಧ್ಯಕ್ಷ ಶ್ರೀ ಕಾರುಣ್ಯ ಸಾಗರ್ ದಾಸ, `ಜಿಟಿ ಫೌಂಡೇಷನ್ ಮತ್ತು ದಿಯಾ ಸಿಸ್ಟಮ್ಸ್ ಪ್ರೈ.ಲಿ.ಗೆ ನಮ್ಮೊಂದಿಗೆ ಸೇರಿ ಬೆಂಬಲಿಸುತ್ತಿರುವುದು ಮತ್ತು ಮಕ್ಕಳಿಗೆ ಪೌಷ್ಠಿಕ ಆಹಾರ ನೀಡುತ್ತಿರುವುದಕ್ಕೆ ಬಹಳ ಕೃತಜ್ಞರಾಗಿದ್ದೇವೆ. ಪ್ರಸ್ತುತ ಅಕ್ಷಯ ಪಾತ್ರ ಮಂಗಳೂರಿನ 135 ಶಾಲೆಗಳ 14,000 ಮಕ್ಕಳಿಗೆ ಆಹಾರ ಪೂರೈಸುತ್ತಿದೆ. ಈ ಪಾಲುದಾರಿಕೆಯಿಂದ 50,000 ಮಕ್ಕಳನ್ನು ತಲುಪಲು ಸಾಧ್ಯವಾಗುತ್ತದೆ. ಹೆಚ್ಚು ಮಕ್ಕಳನ್ನು ತಲುಪಲು ನಮ್ಮನ್ನು ಶಕ್ತಗೊಳಿಸಿದ್ದಕ್ಕೆ ನಾವು ಬಹಳ ಕೃತಜ್ಞರಾಗಿದ್ದೇವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮಕ್ಕೆ ಬೆಂಬಲಿಸಿರುವುದಕ್ಕೆ ನಾವು ಬಹಳ ಆಭಾರಿಗಳಾಗಿದ್ದೇವೆ. ರಾಷ್ಟ್ರಕ್ಕೆ ಹಸಿವು ಮತ್ತು ಅಪೌಷ್ಠಿಕತೆಯ ಎರಡು ಪ್ರಮುಖ ಕಾಳಜಿಗಳು ಎಂದು ನಮಗೆ ಗೊತ್ತಿದ್ದು ಇವು ನಮ್ಮ ಮಕ್ಕಳನ್ನು ಬಾಧಿಸುವ ಮುನ್ನ ನಿವಾರಿಸಬೇಕಾಗಿದೆ; ಉದ್ದೇಶಿತ ಅಡುಗೆಮನೆಯು ಮಕ್ಕಳು ಅಗತ್ಯವಿರುವ ಪೌಷ್ಠಿಕತೆ ಅಲ್ಲದೆ ಉತ್ತಮ ಶಿಕ್ಷಣ ಪಡೆಯುವಂತೆ ಮಾಡುವಲ್ಲಿ ನಮ್ಮ ವಿನಮ್ರ ಪ್ರಯತ್ನವಾಗಿದೆ’ ಎಂದರು.
ನಿರ್ಮಾಣಗೊಳ್ಳುತ್ತಿರುವ ಈ ಬೃಹತ್ ಅಡುಗೆಮನೆ ತಂತ್ರಜ್ಞಾನ ಬಳಕೆ ಮತ್ತು ಆವಿಷ್ಕಾರದಲ್ಲಿ ಎಲ್ಲ ಉತ್ತಮ ಉತ್ಪಾದನಾ ರೂಢಿಗಳ ಅನ್ವಯ ರೂಪುಗೊಳ್ಳಲಿದೆ.


Spread the love