ಅದ್ದೂರಿ ಹುಟ್ಟೂರ ಅಭಿನಂದನೆ ಸ್ವೀಕರಿಸಿದ ಲಿವಾ ಮಿಸ್ ದಿವಾ ಯೂನಿವರ್ಸ್ ಅ್ಯಡ್ಲಿನ್ ಕ್ಯಾಸ್ತಲಿನೊ

Spread the love

ಅದ್ದೂರಿ ಹುಟ್ಟೂರ ಅಭಿನಂದನೆ ಸ್ವೀಕರಿಸಿದ ಲಿವಾ ಮಿಸ್ ದಿವಾ ಯೂನಿವರ್ಸ್ ಅ್ಯಡ್ಲಿನ್ ಕ್ಯಾಸ್ತಲಿನೊ

ಉಡುಪಿ: ಮುಂಬಯಿಯಲ್ಲಿ ನಡೆದ ಪ್ರತಿಷ್ಠಿತ ಸೌಂದರ್ಯ ಸ್ಪರ್ಧೆಯಲ್ಲಿ ಲಿವಾ ಮಿಸ್ ದಿವಾ ಯೂನಿವರ್ಸ್ -2020 ಕಿರೀಟ ಮುಡೀಗೇರಿಸಿಕೊಂಡು ವರ್ಷಾಂತ್ಯದಲ್ಲಿ ನಡೆಯುತ್ತಿರುವ ಮಿಸ್ ಯುನಿವರ್ಸ್ ಸೌಂದರ್ಯ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಉದ್ಯಾವರ ಮೂಲದ ಮಿಸ್ ಅ್ಯಡ್ಲಿನ್ ಕ್ಯಾಸ್ತಲಿನೊ ಅವರಿಗೆ ಸಂತ ಫ್ರಾನ್ಸಿಸ್ ಕ್ಷೇವಿಯರ್ ದೇವಾಲಯದ ನೇತೃತ್ವದಲ್ಲಿ ಐಸಿವೈಎಂ ಸುವರ್ಣ ಮಹೋತ್ಸವ ಸಮಿತಿ, ಕೆಥೊಲಿಕ್ ಸಭಾ ಮತ್ತು ಸ್ತ್ರೀ ಸಂಘಟನೆ ಉದ್ಯಾವರ ಘಟಕದ ಸಹಕಾರದೊಂದಿಗೆ ಫೆಬ್ರವರಿ 29ರಂದು ಅದ್ದೂರಿ ಹುಟ್ಟೂರ ಅಭಿನಂದನಾ ಸಮಾರಂಭ ಆಯೋಜಿಸಿಲಾಗಿತ್ತು.

ಉದ್ಯಾವರ ಚರ್ಚಿನ ಪರವಾಗಿ ಲಿವಾ ಮಿಸ್ ದಿವಾ ಯೂನಿವರ್ಸ್ -2020 ಕಿರೀಟ ಮುಡೀಗೇರಿಸಿಕೊಂಡ ಅ್ಯಡ್ಲಿನ್ ಕ್ಯಾಸ್ತಲಿನೊ ಶಾಲು ಹೊದಿಸಿ ಫಲಪುಷ್ಪ ಸಮರ್ಪಿಸಿ, ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕಾಪು ಶಾಸಕ ಲಾಲಾಜಿ ಆರ್ ಮೆಂಡನ್ ಮಾತನಾಡಿ ಲಿವಾ ಮಿಸ್ ದಿವಾ ಯೂನಿವರ್ಸ್ -2020 ಕಿರೀಟ ಮುಡೀಗೇರಿಸಿಕೊಂಡ ಅ್ಯಡ್ಲಿನ್ ಕ್ಯಾಸ್ತಲಿನೊ ಅವರು ಜಿಲ್ಲೆಯ ಗೌರವ ಹೆಚ್ಚಿಸಿದ್ದಾರೆ. ಸೌಂದರ್ಯ ಸ್ಪರ್ಧೆಯಲ್ಲಿ ಕೇವಲ ಸೌಂದರ್ಯದ ವಿಚಾರದಲ್ಲಿ ಮಾತ್ರ ಗಣನೆಗೆ ತೆಗೆದುಕೊಳ್ಳದೆ ಇತರ ಹಲವಾರು ರೀತಿಯ ಸ್ಪರ್ಧೆಗಳಲ್ಲಿ ಗೆದ್ದಾಗ ಮಾತ್ರ ಇಂತಹ ಕಿರೀಟ ಮುಡಿಗೇರಿಸಿಕೊಳ್ಳಲು ಸಾಧ್ಯವಾಗುತ್ತದೆ. ಪ್ರತಿಭೆಗಳನ್ನು ಹೊಂದಿದವರು ನಿರಾಯಸವಾಗಿ ಇಂತಹ ಸ್ಪರ್ಧೆಗಳನ್ನು ಗೆದ್ದುಬರಲು ಸಾಧ್ಯ ಎಂದರು.

ಇನ್ನೋರ್ವ ಮುಖ್ಯ ಅತಿಥಿ ಮಾಜಿ ಸಚಿವ ವಿನಯ್ ಕುಮಾರ್ ಸೊರೆಕೆ ಮಾತನಾಡಿ ಉಡುಪಿ ಜಿಲ್ಲೆ ಸದಾ ಎಲ್ಲಾ ಕ್ಷೇತ್ರಗಳಲ್ಲಿ ಸಹ ಮಂಚೂಣಿಯಲ್ಲಿದೆ. ಜಿಲ್ಲೆಯ ಶೈಕ್ಷಣಿಕ ಗುಣಮಟ್ಟ ರಾಜ್ಯಕ್ಕೆ ಮಾದರಿಯಾದರೆ ಇತರ ಕ್ಷೇತ್ರಗಳಲ್ಲಿ ಸಹ ಜಿಲ್ಲೆ ತನ್ನದೆ ಆದ ಹೆಸರನ್ನು ಗಳಿಸಿಕೊಂಡಿದೆ. ಇತ್ತೀಚೆಗೆ ಉದ್ಯಾವರದ ತನುಶ್ರೀ ಎಂಬ ಬಾಲೆ ಯೋಗದಲ್ಲಿ ವಿಶ್ವ ದಾಖಲೆ ಮಾಡಿದರೆ, ಉಡುಪಿಯ ಮಲ್ಲಿಗೆ ದೇಶ ವಿದೇಶಗಳಲ್ಲಿ ಹೆಸರು ಮಾಡಿದೆ. ಉಡುಪಿಯ ಮಟ್ಟುಗುಳ್ಳ ಇಂದು ಪೆಟೇಂಟ್ ಪಡೆದು ಅಂತರಾಷ್ಟ್ರೀಯ ಮಟ್ಟಕ್ಕೆ ರಫ್ತಾಗುತ್ತದೆ. ಇಂದು ಲಿವಾ ಮಿಸ್ ದಿವಾ ಯೂನಿವರ್ಸ್ -2020 ಕಿರೀಟ ಮುಡೀಗೇರಿಸಿಕೊಂಡ ಅ್ಯಡ್ಲಿನ್ ಕ್ಯಾಸ್ತಲಿನೊ ಕೇವಲ ಉದ್ಯಾವರಕ್ಕೆ ಮೆರುಗು ತಾರದೆ ಇಡೀ ದೇಶಕ್ಕೆ ಉದ್ಯಾವರದ ಹೆಸರು ಪರಿಚಯಿಸುವಲ್ಲಿ ಸಾಧನೆ ಮಾಡಿದ್ದಾರೆ ಅವರು ಮುಂದೆ ವಿಶ್ವ ಸುಂದರಿಯಾಗಿ ಗೆದ್ದು ಬರಲಿ ಎಂದು ಶುಭ ಹಾರೈಸಿದರು.

ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ ಲಿವಾ ಮಿಸ್ ದಿವಾ ಯೂನಿವರ್ಸ್ -2020 ಕಿರೀಟ ಮುಡೀಗೇರಿಸಿಕೊಂಡ ಅ್ಯಡ್ಲಿನ್ ಕ್ಯಾಸ್ತಲಿನೊ ಅವರ ಸಾಧನೆ ಅಪೂರ್ವವಾದುದು. ಸ್ಪರ್ಧೆಯ ವೇಳೆ ಕೋಮು ಸಾಮರಸ್ಯದ ಕುರಿತಾಗಿ ಅವರು ಮಾತನಾಡಿದ ವಿಚಾರ ಹಾಗೂ ರೈತರ ಬಗೆಗೆ ತೋರಿದ ಕಾಳಜಿ ನಿಜಕ್ಕೂ ಪ್ರಶಂಶನೀಯವಾಗಿದೆ ಅವರು ಮುಂದಿನ ವಿಶ್ವ ಸುಂದರಿ ಸ್ಪರ್ಧೆಯಲ್ಲೂ ಕೂಡ ಗೆದ್ದು ದೇಶದ ಕೀರ್ತಿ ಹೆಚ್ಚಿಸಲಿ ಎಂದು ಶುಭಕೋರಿದರು.

ಹುಟ್ಟೂರ ಸನ್ಮಾನ ಸ್ವೀಕರಿಸಿ ಮಾತನಾಡಿದ ಲಿವಾ ಮಿಸ್ ದಿವಾ ಯೂನಿವರ್ಸ್ -2020 ಕಿರೀಟ ಮುಡೀಗೇರಿಸಿಕೊಂಡ ಅ್ಯಡ್ಲಿನ್ ಕ್ಯಾಸ್ತಲಿನೊ ಇಂತಹ ಒಂದು ಸನ್ಮಾನ ತನಗೆ ಲಭಿಸುತ್ತದೆ ಎಂಬುದನ್ನು ಕನಸಲ್ಲಿ ಸಹ ಎಣಿಸಿರಲಿಲ್ಲ. ನಾನು ಸ್ಪರ್ಧೆಯ ಸಮಯದಲ್ಲಿ ಕೋಮು ಸಾಮರಸ್ಯದ ಕುರಿತು ಮಾತನಾಡಿದಾಗ ಎಲ್ಲರೂ ಕೂಡ ನನ್ನನ್ನು ಅಭಿನಂದಿಸಿದರು. ನಿಜವಾದ ಕೋಮು ಸಾಮರಸ್ಯದ ಕುರಿತು ಮಾತನಾಡಲು ಪ್ರೇರಣೆ ನೀಡಿದ್ದು ನನ್ನ ಹುಟ್ಟುರು ಉಡುಪಿ. ಅದೇ ಕೋಮು ಸಾಮರಸ್ಯವನ್ನು ಇಂದಿನ ವೇದಿಕೆಯಲ್ಲಿ ಸಹ ಕಾಣುತ್ತಿದ್ದೇನೆ. ನಾನು ಇಲ್ಲಿಂದ ವಾಪಾಸು ಹೋಗುವಾಗ ನನ್ನ ಹುಟ್ಟೂರಿನ ಜನತೆ ನೀಡಿದ ಪ್ರೀತಿಯನ್ನು ಜೊತೆಗೆ ಕೊಂಡೊಯ್ಯಲಿದ್ದೇನೆ ಈ ಪ್ರೀತಿ ನನ್ನ ಮುಂದಿನ ವಿಶ್ವ ಸುಂದರಿ ಸ್ಪರ್ಧೆಗೆ ನನ್ನ ಗುರಿ ಮುಟ್ಟಲು ಪ್ರೇರಣೆಯಾಗಲಿದೆ. ನಾನು ವಿಶ್ವ ಸುಂದರಿ ಸ್ಪರ್ಧೆಯ ವೇದಿಕೆಯಲ್ಲಿ ನಿಂತಾಗ ನನ್ನ ಊರು, ನನ್ನ ಜಿಲ್ಲೆ, ನನ್ನ ರಾಜ್ಯ ಹಾಗೂ ದೇಶವನ್ನು ಮೊದಲು ನೆನಪಿಸಿಕೊಂಡು ಮುಂದುವರೆಯಲಿದ್ದೇನೆ ಎಂದರು.

ಕಾರ್ಯಕ್ರಮದಲ್ಲಿ ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಇದರ ಅಧ್ಯಕ್ಷರಾದ ಆಲ್ವಿನ್ ಕ್ವಾಡ್ರಸ್, ಉದ್ಯಮಿ ಅಬ್ದುಲ್ ಜಲೀಲ್ ಸಾಹೇಬ್, ಉದ್ಯಾವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಗಂಧಿ ಶೇಖರ್ ಶುಭ ಹಾರೈಸಿದರು.

ಕಾರ್ಯಕ್ರಮದ ಮುನ್ನ ಉದ್ಯಾವರ ಜೈ ಹಿಂದ್ ಮಾರ್ಗವಾಗಿ ಉದ್ಯಾವರ ಪೇಟೆಯ ಮೂಲಕ ಮೇಲ್ಪೇಟೆ, ಗುಡ್ಡೆಂಗಡಿ ಮಾರ್ಗವಾಗಿ ಆಕರ್ಷಕ ಮೆರವಣಿಗೆಯಲ್ಲಿ ಅ್ಯಡ್ಲಿನ್ ಕ್ಯಾಸ್ತಲಿನೊ ಅವರನ್ನು ತೆರೆದ ವಾಹನ ಮೂಲಕ ಸಂತ ಫ್ರಾನ್ಸಿಸ್ ಕ್ಷೇವಿಯರ್ ದೇವಾಲಯದ ವಠಾರಕ್ಕೆ ಕರೆತರಲಾಗುವುದು. ಬಳಿಕ ಚರ್ಚಿನಲ್ಲಿ ಪ್ರಾರ್ಥನಾ ವಿಧಿಯನ್ನು ನಡೆಸಲಾಯಿತು.

ವೇದಿಕೆಯಲ್ಲಿ ಉದ್ಯಾವರ ಚರ್ಚಿನ ಸಹಾಯಕ ಧರ್ಮಗುರುವ ವಂ|ರೊಲ್ವಿನ್ ಆರಾನ್ಹಾ, ಉದ್ಯಮಿಗಳಾದ ಲಿಯೋ ಡಿಸೋಜಾ ದುಬೈ, ಅ್ಯಡ್ಲಿನ್ ಕ್ಯಾಸ್ತಲಿನೊ ತಾಯಿ ಮೀರಾ ಕ್ಯಾಸ್ತಲಿನೊ, ಚರ್ಚಿನ ಪಾಲಾನ ಮಂಡಳಿಯ ಉಪಾಧ್ಯಕ್ಷರಾದ ಮೆಲ್ವಿನ್ ನೊರೋನ್ಹಾ, ಸ್ತ್ರೀ ಸಂಘಟನೆ ಅಧ್ಯಕ್ಷೆ ಲೀನಾ ಮೆಂಡೊನ್ಸಾ, ಐಸಿವೈಎಮ್ ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಮೈಕಲ್ ಡಿಸೋಜಾ ಉಪಸ್ಥಿತರಿದ್ದರು

ಉಡುಪಿ ಧರ್ಮಪ್ರಾಂತ್ಯದ ಕುಲಪತಿ ವಂ|ಸ್ಟ್ಯಾನಿ ಬಿ ಲೋಬೊ ಸ್ವಾಗತಿಸಿ ಕೆಥೊಲಿಕ್ ಸಭಾ ಉದ್ಯಾವರ ಇದರ ಅಧ್ಯಕ್ಷರಾದ ಲಾರೆನ್ಸ್ ಡೆಸಾ ವಂದಿಸಿದರು. ಸ್ಟೀವನ್ ಕುಲಾಸೊ ಮತ್ತು ರೊಸಾಲಿಯಾ ಕಾರ್ಡೊಜಾ ಕಾರ್ಯಕ್ರಮ ನಿರೂಪಿಸಿದರು.


Spread the love