ಉಡುಪಿಯಲ್ಲಿ ಗಮನ ಸೆಳೆದ ಫಲಪುಷ್ಪ ಪ್ರದರ್ಶನ

Spread the love

ಉಡುಪಿಯಲ್ಲಿ ಗಮನ ಸೆಳೆದ ಫಲಪುಷ್ಪ ಪ್ರದರ್ಶನ

ಉಡುಪಿ : ಉಡುಪಿಯ ದೊಡ್ಡಣಗುಡ್ಡೆಯ ತೋಟಗಾರಿಕಾ ಇಲಾಖೆಯ ರೈತ ಸೇವಾ ಕೇಂದ್ರದ ಆವರಣದಲ್ಲಿ ಶನಿವಾರದಿಂದ 3 ದಿನ ಕಾಲ ಆರಂಭವಾಗಿರುವ ಜಿಲ್ಲಾಮಟ್ಟದ ಫಲಪುಷ್ಪ ಪ್ರರ್ದಶನವು ಸಾರ್ವಜನಿಕರನ್ನು ಆಕರ್ಷಿಸುತ್ತಿದೆ.

ಈ ಫಲಪುಷ್ಪ ಪ್ರದರ್ಶನದಲ್ಲಿ ಕಲ್ಲಂಗಡಿ ಹಣ್ಣುಗಳಲ್ಲಿ ರಚಿಸಿರುವ ಪೇಜಾವರ ವಿಶ್ವೇಶ್ವತೀರ್ಥರ ಚಿತ್ರ ಸೇರಿದಂತೆ, ಲಾಲ್ ಬಹದ್ದೂರ್ ಶಾಸ್ತ್ರಿ, ವಿವೇಕಾನಂದ, ಸುಭಾಷ್ ಚಂಧ್ರ ಬೋಸ್, ಭಗತ್ ಸಿಂಗ್, ಸರ್.ಎಂ. ವಿಶ್ವೇಶ್ವರಯ್ಯ, ಅಟಲ್ ಬಿಹಾರಿ ವಾಜಪೇಯಿ , ನರೇಂದ್ರ ಮೋದಿ, ವಿರಾಟ್ ಕೊಹ್ಲಿ, ಕುವೆಂಪು, ವಿಂಗ್ ಕಮಾಂಡರ್ ಅಭಿನಂದನ್ , ಶ್ರೀಕೃಷ್ಣ , ಹನುಮಾನ್ , ಪೇಜಾವರ ಕಿರಿಯ ಶ್ರೀಗಳು , ಯಕ್ಷಗಾನ ಕುರಿತ ಮುಖಚಿತ್ರ, , ಕುಂಬಳಕಾಯಿಯಲ್ಲಿ ರಚಿಸಿದ ಶಿವಲಿಂಗ, ಮತ್ತು ನವಿಲುಗಳ ಆಕೃತಿಗಳು ನೋಡುಗರ ಗಮನ ಸೆಳೆಯುತ್ತಿವೆ.

ಗುಲಾಬಿ, ಸೇವಂತಿಗೆ,ಚೆಂಡು ಹೂ, ಗ್ಲಾಡಿಯೋಲಸ್, ಕಾರ್ನೇಶನ್ ಹೂಗಳಿಂದ ರಚಿತವಾದ 24 ಅಡಿ ಉದ್ದದ ಹಡಗಿನ ಕಲಾಕೃತಿ ರಚಿಸಿದ್ದು, ಇದಕ್ಕಾಗಿ 30000 ಹೂ ಗಳನ್ನು ಬಳಸಲಾಗಿದೆ,ವಿವಿಧ ಬಗೆಯ ಹೂ ಗಳಿಂದ ರಚಿಸಿರುವ ಅಕ್ಟೋಪಸ್ , ಜೋಡಿ ಮೀನುಗಳ ಕಲಾಕೃತಿ, ಸಮುದ್ರ ಕುದುರೆ, ಸಮುದ್ರದ ಚಿಪ್ಪಿನಲ್ಲಿನ ಮುತ್ತು , ಸ್ಟಾರ್ ಫಿಶ್ ಆಕೃತಿಗಳು ಸೇರಿದಂತೆ, ಸೆಲ್ಫಿ ಮತ್ತು ಪೋಟೋ ಪ್ರಿಯರಿಗಾಗಿ ವಿವಿಧ ಬಗೆಯ ಹೂವಿನಿಂದ ರಚಿಸಿರುವ ಹಾರ್ಟ್ ಮಾದರಿಯ ಕಲಾಕೃತಿಗಳ ಮುಂದೆ ಸಾರ್ವಜನಿಕರು ಮತ್ತು ಮಕ್ಕಳು ಪೋಟೋ ತೆಗೆದುಕೊಳ್ಳುವ ದೃಶ್ಯ ಸಾಮಾನ್ಯವಾಗಿದೆ.

ಫಲಪುಷ್ಪ ಪ್ರದರ್ಶನ ಆವರಣದ ಹಿಂಭಾಗದಲ್ಲಿ ಕೃಷಿ ಸಂಬಂದಿತ ಇಲಾಖೆಗಳ ವಿವಿಧ ಯೋಜನೆಗಳ ಕುರಿತು ವಸ್ತುಪ್ರದರ್ಶನ, ನರ್ಸರಿ ಗಿಡಗಳ ಮಾರಾಟ ಮತ್ತು ಪ್ರದರ್ಶನ, ವಿವಿಧ ಬೀಜಗಳ ಮಾರಾಟ ಮಳಿಗೆಗಳಿದ್ದು, ಕೃಷಿ ಮತ್ತು ತೋಟಗಾರಿಕಾ ಆಸಕ್ತರಿಗೆ ಸಮಗ್ರ ಮಾಹಿತಿ ದೊರೆಯಲಿದೆ.

ಭಾನುವಾರ ಫಲಪುಷ್ಪ ಪ್ರದರ್ಶನದ ಪ್ರಯುಕ್ತ , ಬೆಳಗ್ಗೆ 10 ಗಂಟೆಗೆ ಸಾರ್ವಜನಿಕರಿಗೆ ಪುಷ್ಪ ರಂಗೋಲಿ ಸ್ಪರ್ದೇ ಆಯೋಜಿಸಲಾಗಿದೆ, ಸ್ಪರ್ದೇಯಲ್ಲಿ ಭಾಗವಹಿಸುವ ಸಾರ್ವಜನಿಕರು ವಿವಿಧ ಬಗೆಯ ಹೂವಿನ ರಂಗೋಲಿ ರಚಿಸುವ ಮೂಲಕ ಸ್ಪರ್ದೇಯಲ್ಲಿ ಭಾಗವಹಿಸುಬಹುದಾಗಿದೆ. ತೋಟಗಾರಿಕಾ ಬೆಳೆಗಳಲ್ಲಿ ಲಾಭದಾಯಕ ಮಿಶ್ರ ಬೇಸಾಯ ಕುರಿತಂತೆ ಮಾಚ್ ್ 2 ರಂದು ವಿಚಾರ ಸಂಕಿರಣ ಆಯೋಜಿಸಲಾಗಿದೆ.

ದಿನನಿತ್ಯದ ಜಂಜಾಟದಲ್ಲಿ ಬಳಲಿರುವ ಮನಸ್ಸುಗಳಿಗೆ ಹೂವಿನ ನೋಟ ಎಲ್ಲಾ ಜಂಜಾಟವನ್ನು ಮರೆಸಲಿದ್ದು, ಹೂ ಮಾತ್ರವಲ್ಲದೇ ಹೂವಿನಿಂದ ರಚಿಸಿರುವ ವಿವಿಧ ಆಕರ್ಷಕ ಮಾದರಿಗಳು , ಇಡೀ ವಾರದ ಕೆಲಸಗಳ ಒತ್ತಡವನ್ನು ಮರೆಸಿ, ಮನಸ್ಸನ್ನು ಹಗುರಾಗಿಸಲಿದ್ದು, ಸಾರ್ವಜನಿಕರು ತಮ್ಮ ವಾರಾಂತ್ಯದ ರಜಾದಿನವನ್ನು ಕುಟುಂಬ ಸಮೇತ ಈ ಫಲಪುಷ್ಪ ಪ್ರದರ್ಶನಕ್ಕೆ ಭೇಟಿ ನೀಡಿ, ಪ್ರಯೋಜನ ಪಡೆಯಬಹುದಾಗಿದೆ.


Spread the love