ಅನಿವಾಸಿ ಭಾರತೀಯರೆಲ್ಲರೂ ಶ್ರೀಮಂತರಲ್ಲ:ಪ್ರವೀಣ್‍ಶೆಟ್ಟಿ ವಕ್ವಾಡಿ

Spread the love

ಅನಿವಾಸಿ ಭಾರತೀಯರೆಲ್ಲರೂ ಶ್ರೀಮಂತರಲ್ಲ:ಪ್ರವೀಣ್‍ಶೆಟ್ಟಿ ವಕ್ವಾಡಿ

ದುಬಾಯಿ : ಯುಎಇನಲ್ಲಿ ನೆಲೆಯಾದ ಕರ್ನಾಟಕದಲ್ಲಿನ ಯಾವುದೇ ಜನರ ಸ್ಪಂದನೆಗೆ ಕೆಎನ್‍ಆರ್‍ಐ ಸಂಸ್ಥೆ ತ್ವರಿತವಾಗಿ ಸ್ಪಂದಿಸಿ ಮಾನವೀಯತೆ ಮೆರೆದಿದೆ. ಆದರೆ ವಿದೇಶದಲ್ಲಿನ ಅಥವಾ ಈ ರಾಷ್ಟ್ರದ ಕಾನೂನುಗಳನ್ನು ಪಾಲಿಸುತ್ತಾ ವೀಸಾ ಸಮಸ್ಯೆಗಳನ್ನು ಪರಿಹಾರಿಸಿ ಕೊಂಡಿದ್ದೇವೆ. ಕರ್ನಾಟಕ ರಾಜ್ಯ ಅಥವಾ ಕೇಂದ್ರ ಸರಕಾರಗಳು ನಮ್ಮನ್ನು ಪೆÇ್ರೀತ್ಸಹಿಸಿದರೆ ಮತ್ತಷ್ಟು ಸುಲಭವಾಗಿ ಸೇವೆ ಸಲ್ಲಿಸಲು ಅನುಕೂಲಕರ ಆಗಬಲ್ಲದು. ಕಾರಣ ಅನಿವಾಸಿ ಭಾರತೀಯರೆಲ್ಲರೂ ಶ್ರೀಮಂತರಲ್ಲ ಎಂದು ದುಬಾಯಿಯ ಪ್ರತಿಷ್ಠಿತ ಉದ್ಯಮಿ, ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ ಯುಎಇ (ಕರ್ನಾಟಕ ಎನ್‍ಆರ್‍ಐ ಫೆÇೀರಂ-ಯುಎಇ) ಅಧ್ಯಕ್ಷ ಪ್ರವೀಣ್‍ಕುಮಾರ್ ಶೆಟ್ಟಿ ವಕ್ವಾಡಿ ತಿಳಿಸಿದರು.


ಕರ್ನಾಟಕ ಉದ್ಯಮಿಗಳ ಸಾಗರೋತ್ತರ ಸಂಸ್ಥೆಯಲ್ಲೊಂದಾದ ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ ಯುಎಇ (ಕೆಎನ್‍ಆರ್‍ಐ) ಇಂದಿಲ್ಲಿ ದುಬಾಯಿ ಇಲ್ಲಿನ ಫರ್ಚುನ್ ಪ್ಲಾಜ್ಹಾ ಹೊಟೇಲು ಸಭಾಗೃಹದಲ್ಲಿ ಆಯೋಜಿಸಿದ್ದ ಕರ್ನಾಟಕ ಮಂತ್ರಿಗಳೊಂದಿಗೆ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಪ್ರವೀಣ್‍ಕುಮಾರ್ ಶೆಟ್ಟಿ ಮಾತನಾಡಿ ವೀಸಾ, ಸಂಬಳ, ಉದ್ಯೋಗದಲ್ಲಿನ ಸಮಸ್ಯೆ, ಹೊಸ ಉದ್ಯಮಕ್ಕೆ ಅವಕಾಶ, ವಿಮಾನ ಯಾದ ದರದಲ್ಲಿನ ತಾರತಮ್ಯತೆ, ಕರ್ನಾಟಕದ ಕೆಲವೊಂದು ಕಡೆ ನೇರ ವಿಮಾನ ಸಂಚಾರ ಇತ್ಯಾದಿ ಸಮಸ್ಯೆಗಳು ಕಾಡುತ್ತಿವೆ. ನಾವು ನಮ್ಮ ಸದಸ್ಯರಿಗೆ ಇದೀಗಲೇ ಕೆಎನ್‍ಆರ್‍ಐ ಕಾರ್ಡ್‍ಗಳನ್ನು ನೀಡಿದ್ದೇವೆ. ನಾವು ತವರೂರಲ್ಲಿ ಮತ್ತೆ ನಿವೃತ್ತಿ ಜೀವನ ಸಾಗಿಸುವಾಗ ಇರಲಿ, ಆ ಮುನ್ನವಾಗಲಿ ನಮಗೆ ವಾಸ್ತವ್ಯಕ್ಕಾಗಿ ಮನೆ ಕಟ್ಟುವಾಗ ಅಧಿಕಾರಿಗಳ ಸಹಯೋಗ, ಶೀಘ್ರವಾಗಿ ದಾಖಲೆಪತ್ರಗಳ ವಿಲೇವರಿ, ವಿಮಾ ಯೋಜನೆ, ಎಲ್ಲದಕ್ಕೂ ಮುನ್ನ ಎನ್‍ಆರ್‍ಐಗಳಿಗೆ ಮತದಾನ ಹಕ್ಕು ಚಲಾವಣೆ ಅವಕಾಶ, ಪ್ರತೀಯೊಂದು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಎನ್‍ಆರ್‍ಐ ಕಛೇರಿ, ಉನ್ನಧಿಕಾರಿಗಳ ನೇಮಕಾತಿ ಬಗ್ಗೆ ಜ್ವಾಲಂತ ಉದಾಹರಣೆಗಳೊಂದಿಗೆ ಸಚಿವರಿಗೆ ತಿಳಿಸಿದರು.

ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ , ಹಾಲಿ ಸಂಸದ ಡಾ| ಎಂ.ವೀರಪ್ಪ ಮೊೈಲಿ, ಕರ್ನಾಟಕದ ನಗರಾಭಿವೃದ್ಧಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವರಿ ಸಚಿವ ಯು.ಟಿ ಖಾದರ್, ಕರ್ನಾಟಕದ ಮಹಿಳಾ-ಮಕ್ಕಳ ಕಲ್ಯಾಣ, ಕನ್ನಡ-ಸಂಸ್ಕೃತಿ ಖಾತೆ, ಉಡುಪಿ ಜಿಲ್ಲಾ ಉಸ್ತುವರಿ ಸಚಿವೆ ಡಾ| ಜಯಮಾಲ ಉಪಸ್ಥಿತರಿದ್ದು, ಕರ್ನಾಟಕ ಎನ್‍ಆರ್‍ಐ ಫೆÇೀರಂ ಅಧ್ಯಕ್ಷ ಪ್ರವೀಣ್‍ಕುಮಾರ್ ಶೆಟ್ಟಿ ವಕ್ವಾಡಿ ಸಚಿವರಿಗೆ ಮನವಿ ಅರ್ಪಿಸಿ ಸಮಸ್ಯೆಗಳ ಪರಿಹಾರಕ್ಕೆ ಕೋರಿದರು.

ವೀರಪ್ಪ ಮೊೈಲಿ ಮಾತನಾಡಿ ವಿದೇಶಿಗರಿಗೆ ರಾಜ್ಯ ಸರಕಾರದ ಮತ್ತು ಕೇಂದ್ರ ಸರಕಾರಗಳ ಅವಶ್ಯಕತೆಗಳಿದ್ದು ಇವೆರಡೂ ಸರಕಾರಗಳ ಕರ್ತವ್ಯಗಳೇ ವಿಭಿನ್ನವಾಗಿವೆ. ಎನ್‍ಆರ್‍ಐಗಳಿಗೆ ಕೇಂದ್ರ ವಿದೇಶಾಂಗದ ಸಹಯೋಗ ಅತ್ಯವಶ್ಯವಾಗಿರುತ್ತದೆ. ತಮ್ಮ ಸಮಸ್ಯೆಗಳಿಗೆ ಸಿಂಗಲ್‍ವಿಂಡೋ ಪರಿಹಾರಕ್ಕೆ ಶೀಘ್ರವೇ ವ್ಯವಸ್ಥೆ ಮಾಡಿಸುವೆ. ತಮ್ಮತಂಹ ಪರಿಶ್ರಮಜೀವಿಗಳಿಂದ ನಮ್ಮನಾಡು ಪ್ರಗತಿ ಕಂಡಿದೆ. ಕರ್ನಾಟಕವು ಉದ್ಯಮಕ್ಕೆ ಸ್ವಂದಿಸುವ ಪ್ರಥಮ ರಾಜ್ಯವಾಗಿ ಅನುಕೂಲಕರ ವಾತಾವರಣ ನಿರ್ಮಿಸಿದೆ. ಆದ್ದರಿಂದ ಅನಿವಾಸಿ ಭಾರತೀಯರು ತವರೂರಲ್ಲೂ ಉದ್ಯಮ ಕಟ್ಟಿ ಬೆಳೆಸಬೇಕು. ಪ್ರವೀಣ್‍ಕುಮಾರ್ ಶೆಟ್ಟಿ ಓರ್ವ ಸಾಧನಾಶೀಲ ಯುವೋದ್ಯಮಿಯಾಗಿದ್ದು ಯುವ ಪೀಳಿಗೆಗೆ ಮಾದರಿ ಉದ್ಯಮಿ ಆಗಿದ್ದಾರೆ ಎಂದರು.

ಸಚಿವ ಖಾದರ್ ಮಾತನಾಡಿ ನಮ್ಮದು ಎನ್‍ಆರ್‍ಐ ಸರಕಾರವಲ್ಲ. ಆದರೆ ವ್ಯಾಪಿಗೆ ಒಳಪಡುವ ಸಮಸ್ಯೆಗಳಿಗೆ ಪರಿಹಾರ ನೀಡುವ ಪ್ರಯತ್ನ ಮಾಡಿದ್ದೇವೆ. ಸಮಸ್ಯೆಗಳು ಎಲ್ಲರನ್ನೂ ಕಾಡುತ್ತವೆ. ಅದನ್ನು ಒಗ್ಗಟ್ಟಿನಿಂದ ಪರಿಹರಿಸಿ ಕೊಳ್ಳಬೇಕು. ತಾವೆಲ್ಲರೂ ಮಾನವೀಯ ದೃಷ್ಟಿಯಿಂದ ಸ್ಪಂದಿಸಿ ಸಹಯೋಗ ನೀಡುತ್ತಿರುವುದು ಶ್ಲಾಘನೀಯ. ಮತ್ತೊಂದು ಸರಕಾರಗಳ ಸ್ಪಂದನೆ ಬಗ್ಗೆ ನಾವೇನನ್ನೂ ಹೇಳಕ್ಕಾಗಲ್ಲ. ಆದರೆ ಮುಂದೆ ತಮ್ಮ ಯೋಗದಾನಕ್ಕೆ ಶಕ್ತಿ ತುಂಬುವ ಕೆಲಸ ಕರ್ನಾಟಕ ಸರಕಾರದಿಂದ ಮಾಡುವ ಪ್ರಯತ್ನ ಮಾಡುವೆ ಎಂದರು.

ಸರಕಾರ ಎಲ್ಲರ ಸಮಸ್ಯೆಗಳನ್ನು ಅರ್ಥೈಸಿ ಅನುದಾನ ನೀಡುತ್ತದೆ. ಮುಂದಿನ ಪೀಳಿಗೆಗೆ ಮಾದರಿ ಆಗುವ ಮತ್ತು ನಮ್ಮ ಸಂಸ್ಕೃತಿ ಉಳಿಸಿ ಬೆಳೆಸುವುದನ್ನೇ ನಮ್ಮ ಸರಕಾರ ಅಪೇಕ್ಷಿಸುತ್ತದೆ. ಆದರೆ ಎನ್‍ಆರ್‍ಐ ಮತ್ತು ನಮ್ಮ ಸರಕಾರದ ಮಧ್ಯೆ ಏನೋ ಸ್ಪಂದನಾ ವ್ಯತ್ಯಾಯ ಆಗಿರಬಹುದು. ವಿದೇಶದಲ್ಲಿನ ನಮ್ಮವರೆಲ್ಲರೂ ಶ್ರೀಮಂತರೆನ್ನುವ ಮನೋಭಾವ ಸಾಮಾನ್ಯವಾದುದು. ಆದರೆ ನಿಮ್ಮೆಲ್ಲರ ಕಷ್ಟಪಾಡು, ಅವಿರತ ಶ್ರಮದ ಬದುಕು ನಾವು ಅರಿತಿದ್ದೇವೆ. ನಿಮ್ಮ ಬೇಡಿಕೆಯಂತೆ ಮತದಾನದ ಹಕ್ಕು ಬಗ್ಗೆ ಮತ್ತೆ ಚರ್ಚಿಸುವೆ. ಮತದಾನ ಮಾಡದ ಮನುಷ್ಯನ ಬದುಕು ಸಾರ್ಥಕವಲ್ಲ ಎಂದÀು ಸಚಿವೆ ಜಯಮಾಲ ತಿಳಿಸಿದರು.

ಈ ಸಂದರ್ಭದಲ್ಲಿ ಫೆÇೀರಂನ ಉಪಾಧ್ಯಕ್ಷ ಜೋಸೆಫ್ ಮಥಾಯಸ್, ಬಿ.ಕೆ ಗಣೇಶ್ ರೈ, ಡಾ| ಕಾಪು ಮಹ್ಮದ್, ಜೊತೆ ಕೋಶಾಧಿಕಾರಿ ದಯಾ ಕಿರೋಡಿಯನ್, ಜೊತೆ ಕಾರ್ಯದರ್ಶಿ ಎಂ.ಇ ಮುಳೂರು, ನೋವೆಲ್ ಅಲ್ಮೇಡಾ ಸೇರಿದಂತೆ ಕಾರ್ಯಕಾರಿ ಸಮಿತಿ ಸದಸ್ಯರಾದ ಅಬ್ದುಲ್ ಲತೀಫ್ ಮೂಲ್ಕಿ, ಮಲ್ಲಿಕಾರ್ಜುನ್ ಗೌಡ, ಮಹ್ಮದ್ ಆಲಿ ಉಚ್ಚಿಲ್, ಪ್ರಶಾಂತ್ ಆಚಾರ್ಯ ಸೇರಿದಂತೆ ಹಲವಾರು ಸದಸ್ಯರು, ಅಖಿಲಭಾರತ ತುಳು ಒಕ್ಕೂಟ ಅಧ್ಯಕ್ಷ ಧರ್ಮಪಾಲ್ ಯು.ದೇವಾಡಿಗ, ಡಾ| ಯು.ಟಿ ಇಫ್ತಿಕರ್ ಆಲಿ, ನಾರಾಯಣ ದೇವಾಡಿಗ ಕಾಪು (ದುಬಾಯಿ), ಸತೀಶ್ ಶೆಟ್ಟಿ ಪಟ್ಲ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಉಭಯ ರಾಷ್ಟ್ರಗಳ ರಾಷ್ಟ್ರಗೀತೆಯೊಂದಿಗೆ ಸಭೆ ಆದಿಗೊಂಡಿತು. ಜೊತೆ ಕಾರ್ಯದರ್ಶಿ ಶಶಿಧರ್ ನಾಗರಾಜಪ್ಪ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಪ್ರಬಾಕರ್ ಅಂಬಲತರೆ ಪ್ರಸ್ತಾವಿಕವಾಗಿ ನುಡಿದು ಸದಸ್ಯರ ಸ್ಪಂದನೆ ಹಾಗೂ ಇಲ್ಲಿನ ಕನ್ನಡಿಗರು ಪಡುವ ಶ್ರಮದ ಬಗ್ಗೆ ವಿವರಿಸಿದರು. ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ಸದನ್ ದಾಸ್ ವಂದಿಸಿದರು.


Spread the love