ಅನಿಶ್ಚಿತ ಪರೀಕ್ಷಾ ಗೊಂದಲವನ್ನು ಕೊನೆ ಗೊಳಿಸಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ: ಉಡುಪಿ ಜಿಲ್ಲಾ ಎನ್.ಎಸ್.ಯು.ಐ ಆಗ್ರಹ

Spread the love

ಅನಿಶ್ಚಿತ ಪರೀಕ್ಷಾ ಗೊಂದಲವನ್ನು ಕೊನೆ ಗೊಳಿಸಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ: ಉಡುಪಿ ಜಿಲ್ಲಾ ಎನ್.ಎಸ್.ಯು.ಐ ಆಗ್ರಹ

ಉಡುಪಿ: ಮಹಾಮಾರಿ ಕೊರೋನಾದ ಸಂದರ್ಭದಲ್ಲಿ ಅನಿಶ್ಚಿತ ಪರೀಕ್ಷಾ ಗೊಂದಲವನ್ನು ಕೊನೆ ಗೊಳಿಸಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವಂತೆ ಉಡುಪಿ ಜಿಲ್ಲಾ ಎನ್.ಎಸ್.ಯು.ಐ. ಅಧ್ಯಕ್ಷ ಕ್ರಿಸ್ಟನ್ ಡಿ’ಆಲ್ಮೇಡಾ ಸರಕಾರವನ್ನು ಆಗ್ರಹಿಸಿದ್ದಾರೆ.

ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು ಕೊರೋನಾ ತಡೆಗಟ್ಟುವ ನಿಟ್ಟಿನಲ್ಲಿ ದೇಶಾದ್ಯಂತ ಲಾಕ್ ಡೌನ್ ಜಾರಿಯಿಂದಾಗಿ ಈ ಬಾರಿಯ ಶೈಕ್ಷಣಿಕ ವರ್ಷವು ಅನಿಶ್ಚಿತತೆಯಿಂದ ಕೂಡಿದೆ. ಶೈಕ್ಷಣಿಕ ವರ್ಷವು ಮುಗಿಯಲು ಇನ್ನಷ್ಟು ವಿಳಂಬವಾಗುತ್ತಿರುವುದರಿಂದ, ಪಠ್ಯ ತರಗತಿಗಳು ಅಪೂರ್ಣವಾಗಿ ಉಳಿದಿವೆ. ಇದು ವಿದ್ಯಾರ್ಥಿಗಳಲ್ಲಿ ಆತಂಕ ಸೃಷ್ಟಿಸಿದೆ.

ಎನ್ ಎಸ್ ಐ.ಯು ಮೊದಲೇ ಹೇಳಿರುವಂತೆ, ಈ ಆನ್ ಲೈನ್ ಪರೀಕ್ಷೆಯು ಬಡ ಮತ್ತು ಮೂಲಭೂತ ಸೌಕರ್ಯವಿಲ್ಲದ ವಿದ್ಯಾರ್ಥಿ ಗಳಿಗೆ ತಾರತಮ್ಯ ಉಂಟು ಮಾಡುತ್ತದೆ.

ಪ್ರಸ್ತುತ, ಆನ್ ಲೈನ್ ಮುಖಾಂತರ ತರಗತಿಗಳನ್ನು ನಡೆಸಲಾಗುತ್ತಿದೆ. ಕೆಲವು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಇಂಟರ್ನೆಟ್ ಸಂಪರ್ಕ ಸಿಗದೆ ಆನ್ ಲೈನ್ ಪಾಠ ಕೈ ತಪ್ಪಿಹೋಗಿದೆ. ಈ ಸಂದರ್ಭದಲ್ಲಿ ಪರೀಕ್ಷೆಯನ್ನು ಹೇಗೆ ಬರೆಯುವುದು ಎಂಬ ಸವಾಲು ಎದುರಾಗಿದೆ.

ಹಲವಾರು ಇಂಜಿನಿಯರಿಂಗ್ ಪ್ರೊಫೆಸರ್ ಈ ವಾಸ್ತವಾಂಶವನ್ನು ಒಪ್ಪಿಕೊಂಡಿದ್ದು ವಿದ್ಯಾರ್ಥಿಗಳಿಗೆ ಹೇಗೆ ಹೊಸ ಕಲಿಕಾ ವಿಧಾನವನ್ನು ಅಳವಡಿಸಿ ಕೊಳ್ಳವ ಪ್ರಯತ್ನದಲ್ಲಿದ್ದಾರೆ. ಆದರೆ ಕೆಲವು ವಿಷಯಗಳನ್ನು ಪ್ರಾಯೋಗಿಕ ಅಭ್ಯಾಸ ವಿಲ್ಲದೆ ಕಲಿಸುವುದು ಕಷ್ಟ ಸಾಧ್ಯ.

ವಿಟಿಯು ಮತ್ತು ಎಮ್ ಐಟಿ ಅಂಗಸಂಸ್ಥೆ ಯಲ್ಲಿ ಕಲಿಯುತ್ತಿರುವ ಕೆಲವು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಮೌಲ್ಯಮಾಪನವಿಲ್ಲದೆ ಮುಂದಿನ ಅಭ್ಯಾಸಕ್ಕೆ ಅನುವು ಮಾಡಿಕೊಡವಂತೆ ಬೇಡಿಕೆ ಇಟ್ಟು, ಆನ್ ಲೈನ್ ಅಭಿಯಾನವನ್ನು ಆರಂಭಿಸಿದ್ದಾರೆ.

ಈ ದ್ವಂದ್ವತೆಯ ಬಗ್ಗೆ ಕೆಲವು ಪ್ರೊಫೆಸರ್ಸ್ ಗಳೊಂದಿಗೆ ಚರ್ಚಿಸಿದಾಗ, ಎನ್ ಎಮ್ ಎಎಮ್ಐಟಿ ನಿಟ್ಟೆ ಯ ಸಹಾಯಕ ಪ್ರೊಫೆಸರ್ ಮೆಲ್ವಿನ್ ಕ್ಯಾಸ್ತಲಿನೊ ಅವರ ಪ್ರಕಾರ ಸೆಮಿಸ್ಟರ್ ಗೆ ಹೋಗಬೇಕಾದರೆ ಈ ಆನ್ ಲೈನ್ ಪರೀಕ್ಷೆ ಆಗಬೇಕು. ಯಾರಿಗೆ ಈ ಪರೀಕ್ಷೆ ಬರೆಯಲು ಅಸಾಧ್ಯವೋ ಅವರು ಮತ್ತೆ ಕಾಲೇಜು ಪುನರಾಂಭ ಆದಮೇಲೆ ಬರೆಯಬೇಕು. ಆದರೆ ಸೆಮಿಸ್ಟರ್ ಪರೀಕ್ಷೆ ಯನ್ನು ಮಾಡಿ ವಿಧ್ಯಾರ್ಥಿಗಳಿಗೆ ಪ್ರೋತ್ಸಾಹ ಮಾಡಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ.

ವಿಟಿಯುನ ಉಪಕುಲಪತಿಗಳಾದ ಕರಿಸಿದ್ದಪ್ಪನವರು, ಈ ಪರೀಕ್ಷೆಗೆ ಸಂಬಂಧಿಸಿದ ನಿರ್ಧಾರ ವನ್ನು ಸರಕಾರದ ನಿರ್ಧಾರಕ್ಕೆ ಬಿಟ್ಟಿದ್ದೇವೆ. ಈ ಸಮಸ್ಯೆ ಕೇವಲ ನಮ್ಮ ವಿಶ್ವ ವಿದ್ಯಾಲಯಕ್ಕೆ ಮಾತ್ರ ಇರುವುದಲ್ಲ. ರಾಜ್ಯ ಸರಕಾರ ಮತ್ತು ಯುಜಿಸಿಯು ಎಲ್ಲಾ ವಿಶ್ವವಿದ್ಯಾಲಯಕ್ಕೆ ಒಂದು ನಿರ್ಧಾರ ತೆಗೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.

ಆದುದರಿಂದ, ನಮ್ಮ ಈ ಬೇಡಿಕೆಯನ್ನು ಪರಿಗಣಿಸಿ, ಸಮಸ್ಯೆಯನ್ನು ಬಗೆಹರಿಸುವಲ್ಲಿ ಸರ್ಕಾರ ಮಧ್ಯ ಪ್ರವೇಶ ಮಾಡಬೇಕು. ಅಲ್ಲದೆ, ವಿದ್ಯಾರ್ಥಿ ಗಳನ್ನು ಪ್ರೊತ್ಸಾಹಿಸುವಲ್ಲಿ ವಿದ್ಯಾಲಯಕ್ಕೆ ಸರಿಯಾದ ನಿರ್ದೇಶನ ನೀಡಬೇಕು ಎಂದು ಮಾಧ್ಯಮಕ್ಕೆ ತಿಳಿಸಿದ್ದಾರೆ.


Spread the love