ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕುವ ಪ್ರಯತ್ನಕ್ಕೆ ಸೋಲಾಗಿದೆ – ಪ್ರಕಾಶ್ ರೈ

Spread the love

ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕುವ ಪ್ರಯತ್ನಕ್ಕೆ ಸೋಲಾಗಿದೆ – ಪ್ರಕಾಶ್ ರೈ

ಉಡುಪಿ: ಕಾರಂತರ ಹುಟ್ಟೂರು ಪ್ರಶಸ್ತಿಯ ಸಂಘಟಕರು, ಸಾಹಿತಿಗಳು, ಪತ್ರಕರ್ತರು ಕಾರಂತರಂತೆ ಒಂದು ಬಾರಿ ತೆಗೆದುಕೊಂಡ ನಿರ್ಧಾರಿಂದ ಹಿಂದಕ್ಕೆ ಸರಿಯುವುದಿಲ್ಲ ಎಂಬಂತೆ ನಡೆದುಕೊಂಡಿದ್ದಾರೆ. ಈ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಹುನ್ನಾರ ಸೋತಿದೆ ಎಂದು ಕಾರಂತರು ಹುಟ್ಟಿದ ಕೋಟತಟ್ಟು ಗ್ರಾ.ಪಂ. ವತಿಯಿಂದ ನೀಡಲಾದ ಕಾರಂತ ಹುಟ್ಟೂರು ಪ್ರಶಸ್ತಿಯನ್ನು ಸ್ವೀಕರಿಸಿದ ಬಹುಭಾಷಾ ನಟ ಪ್ರಕಾಶ್ ರೈ ಹೇಳಿದ್ದಾರೆ.

ಅವರು ಕೋಟದ ಥೀಮ್ ಪಾರ್ಕ್ ನಲ್ಲಿ ಮಂಗಳವಾರ ಪ್ರಶಸ್ತಿಯನ್ನು ಸ್ವೀಕರಿಸಿ, ಮೋದಿ ಅವರ ವಿರುದ್ಧ ಮಾತನಾಡಿದ ರೈ ಅವರಿಗೆ ಪ್ರಶಸ್ತಿ ನೀಡಬಾರದು ಎಂಬ ಬಿಜೆಪಿ ಮತ್ತು ಇತರ ಸಂಘಟನೆಗಳ ವಿರೋಧಕ್ಕೆ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದರು.

ಸಮಾರಂಭದಲ್ಲಿ ಬಿ.ಜೆ.ಪಿ.ಯ ನಾಯಕರು ಯಾರೂ ಭಾಗವಹಿಸದಿರುವ ಬಗ್ಗೆ, ನಾನು ಯಾವುದೇ ರಾಜಕೀಯದ ಬಗ್ಗೆ ಮಾತನಾಡುವುದಿಲ್ಲ, ನಾನು ಅಭಿವ್ಯಕ್ತಿ ಸ್ವಾತಂತ್ರ್ಯದ ಪರವಾಗಿ ಮಾತ್ರ ಮಾತನಾಡುತ್ತೇನೆ. ಸಮಾಜದಲ್ಲಿ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯ ಬೇಕು, ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯನೂ ಬೇಕು. ಲ್ಲರಿಗೂ ಅಭಿಪ್ರಾಯ ಹೇಳುವ ಹಕ್ಕಿದೆ, ಆದರೇ ಅವಹೇಳನ ಮಾಡುವ ಹಕ್ಕಿಲ್ಲ. ತಮ್ಮ ವಿರುದ್ದ ಮಾತನಾಡಿದ್ದಾರೆ ಎಂಬ ಕಾರಣಕ್ಕೆ ಬಾಯಿ ಮುಚ್ಚಿಸುವುದು, ಹಿಂಸೆ ನಡೆಸುವುದು ಸರಿಯಲ್ಲ. ಈ ಸ್ವಾಗತದಿಂದ ನನ್ನ ಧ್ವನಿಗೆ ಬಲ ಬಂದಿದೆ ಎಂದರು.

ವಿರೋಧ ಮಾಡುವವರು ಮಾಡಿಯೇ ಮಾಡುತ್ತಾರೆ. ಅದು ಅವರ ಹಕ್ಕು, ಆದರೇ ಪ್ರತಿಭಟನೆ ಯಾವತ್ತೂ ಕಹಿ ಆಗಬಾರದು. ನನ್ನ ಈ ಪ್ರಯಾಣದಲ್ಲಿ ಯುವಕರು, ಸಮಾನ ಮನಸ್ಕರು ಬಂದು ಬೆಂಬಲ ನೀಡುತ್ತಿರುವುದು ನಾನು ಸರಿಯಾದ ದಾರಿಯಲ್ಲಿದ್ದೇನೆ ಎಂಬುದನ್ನು ತೋರಿಸುತ್ತಿದೆ ಎಂದರು.


Spread the love