ಅಯೋಧ್ಯೆಯಲ್ಲಿ ರಾಮ ಮಂದಿರದ ಜೊತೆ ಮಸೀದಿಯೂ ನಿರ್ಮಾಣವಾಗಲಿ – ಸಚಿವ ಜಮೀರ್ ಅಹ್ಮದ್

Spread the love

ಅಯೋಧ್ಯೆಯಲ್ಲಿ ರಾಮ ಮಂದಿರದ ಜೊತೆ ಮಸೀದಿಯೂ ನಿರ್ಮಾಣವಾಗಲಿ – ಸಚಿವ ಜಮೀರ್ ಅಹ್ಮದ್

ಉಡುಪಿ: ಬಿಜೆಪಿಯಿಂದ ಸಮ್ಮಿಶ್ರ ಸರ್ಕಾರವನ್ನು ಯಾವುದೇ ಕಾರಣಕ್ಕೂ ಅಸ್ಥಿರಗೊಳಿಸಲು ಸಾಧ್ಯವಿಲ್ಲ. ಐದು ವರ್ಷ ನಮ್ಮ ಕಾಂಗ್ರೆಸ್ – ಜೆಡಿಎಸ್ ನೇತೃತ್ವದ ಸರಕಾರ ರಾಜ್ಯದಲ್ಲಿ ಆಡಳಿತ ನಡೆಸಲಿದೆ ಎಂದು ರಾಜ್ಯ ಆಹಾರ ಮತ್ತು ನಾಗರಿಕ ಪೊರೈಕೆ ಸಚಿವ ಝಮೀರ್ ಅಹ್ಮದ್ ಖಾನ್ ಅವರು ಹೇಳಿದರು.

ಅವರು ಶನಿವಾರ ಉಡುಪಿಯಲ್ಲಿ ಕಾಂಗ್ರೆಸ್ ಭವನಕ್ಕೆ ಆಗಮಿಸಿ ಮಾಧ್ಯಮಗಳೊಂದಿಗೆ ಮಾತನಾಡಿದರು, ನಮ್ಮ ನಾಯಕರು ರಾಹುಲ್ ಗಾಂಧಿಯವರಾಗಿದ್ದು ಕಾಂಗ್ರೆಸ್ ಮತ್ತು ಜೆಡಿಎಸ್ ಜೊತೆಯಾಗಿ ಸುಭದ್ರ ಸರಕಾರವನ್ನು ನಡೆಸುತ್ತಿದ್ದೇವೆ. ಬಿಜೆಪಿ ರಾಜ್ಯಾಧ್ಯಕ್ಷ ಯಡ್ಯೂರಪ್ಪ ಅವರು ಮುಖ್ಯಮಂತ್ರಿ ಆಗಬೇಕು ಎನ್ನುವ ಕನಸು ಕಾಣುತ್ತಿದ್ದಾರೆ. ಎಲ್ಲರೂ ರಾತ್ರಿ ಕನಸು ಕಂಡ್ರೆ, ಬಿಎಸ್ವೈ ಸರಕಾರ ಕೆಡವಲು ಹಗಲುಗನಸು ಕಾಣ್ತಿದ್ದಾರೆ. ಇದರಿಂದ ಏನೂ ಆಗೋದಿಲ್ಲ. ಸರಕಾರ ಐದು ವರ್ಷಗಳ ಕಾಲ ಸುಭದ್ರವಾಗಿ ಇರುತ್ತೆ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ವಿಶ್ವಾಸ ವ್ಯಕ್ತಪಡಿಸಿದರು.

ಗಣಿಧನಿ ಜನಾರ್ದನ ರೆಡ್ಡಿಯವರು ರಾತ್ರಿ ಹೋಗಿ ಬಿಜೆಪಿ ರಾಜ್ಯಧ್ಯಕ್ಷ ಯಡ್ಯೂರಪ್ಪ ಅವರನ್ನು ಭೇಟಿಯಾದ ಕುರಿತು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಮೊದಲಿನಿಂದಲೂ ಜನಾರ್ದನ ರೆಡ್ಡಿಯವರು ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡವರು. ಅವರು ಹೋಗಿ ಭೇಟಿ ಮಾಡಿರುವುದಕ್ಕೆ ವಿಶೇಷ ಅರ್ಥ ಕಲ್ಪಿಸಲಬೇಕಾಗಿಲ್ಲ ಎಂದರು.
ಮೈಸೂರು ಮಹಾನಗರಪಾಲಿಕೆ ಮೇಯರ್ ಆಯ್ಕೆಯ ವಿಚಾರದಲ್ಲಿ ಕಾಂಗ್ರೆಸ್ –ಜೆಡಿಎಸ್ ಮೈತ್ರಿ ಕುರಿತು ಪ್ರತಿಕ್ರಿಯಿಸಿ ಹೊಸದಾಗಿ ಆಯ್ಕೆಯಾದ ಮೇಯರ್ ಮೊದಲು ಜೆಡಿಎಸ್ ಪಕ್ಷದಲ್ಲಿದ್ದವರು. ಪಕ್ಷದಲ್ಲಿ ಟಿಕೇಟ್ ಸಿಗದೆ ಪಕ್ಷೇತರವಾಗಿ ಸ್ಪರ್ಧಿಸಿ ಗೆದ್ದಿದ್ದರು. ಇತ್ತೀಚೆಗೆ ನಮ್ಮ ನಾಯಕರಾದ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದಾರೆ. ಈ ಬಗ್ಗೆ ಕಾರ್ಯಕರ್ತರಲ್ಲಿ ಯಾವುದೇ ರೀತಿಯ ಗೊಂದಲಗಳಿಲ್ಲ ಎಂದು ಸ್ಪಷ್ಟಪಡಿಸಿದರು.

ವಕ್ಫ್ ಆಸ್ತಿ ದುರ್ಬಳಕೆ ವಿಚಾರದಲ್ಲಿ ಪ್ರತ್ರಿಕ್ರಿಯಿಸಿದ ಅವರು ಅದಕ್ಕ ತಮ್ಮದೇ ಆದ ಒಂದು ತಂಡದ ಮೂಲಕ ಕೆಲಸ ನಿರ್ವಹಣೆ ನಡಯುತ್ತಿದೆ ಮುಂದಿನ ತಿಂಗಳು 15 ನೇ ತಾರಿಕಿನ ಒಳಗೆ ವರದಿ ನೀಡಲಿದ್ದೇನೆ ಎಂದರು.

ಲೋಕಸಭೆ ಚುನಾವಣೆ ಹತ್ತಿರ ಆಗುವಾಗ ರಾಮ ಮಂದಿರದ ವಿಚಾರ ಚರ್ಚೆಗೆ ಬರುತ್ತಿರುವುದರ ಕುರಿತು ಕೇಳಿದ ಪ್ರಶ್ನೆಗೆ ಮಾತನಾಡಿದ ಅವರು ಬಿಜೆಪಿ ಕೇಂದ್ರದಲ್ಲಿ ಆಡಳಿತಕ್ಕೆ ಬಂದು 4.5 ವರ್ಷವಾದರೂ ಎಂದೂ ಕೂಡ ರಾಮಮಂದಿರ ವಿಚಾರ ಬಿಜೆಪಿಯವರಿಗೆ ನೆನಪಿಗೆ ಬಂದಿಲ್ಲ. ಕರ್ನಾಟಕದ ಮುಸ್ಲಿಂರು ಮಾತ್ರವಲ್ಲ, ದೇಶದಾದ್ಯಂತ ಮುಸ್ಲಿಂರು ರಾಮಮಂದಿರ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸುತ್ತಿಲ್ಲ ಎಂದರು. ರಾಮ ಮಂದಿರ ನಿರ್ಮಾಣ ಮಾಡಿ ಆದೇ ರೀತಿಯಲ್ಲಿ ಧ್ವಂಸಗೊಂಡಿರುವ ಮಸೀದಿಯನ್ನು ಪುನರು ನಿರ್ಮಾಣ ಮಾಡಬೇಕೆಂದು ತಮ್ಮ ಬೇಡಿಕೆಯಾಗಿದೆ ಎಂದು ಜಮೀರ್ ಅಹ್ಮದ್ ಖಾನ್ ಹೇಳಿದರು.

ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜನಾರ್ದನ ತೋನ್ಸೆ, ಕೆಪಿಸಿಸಿ ಕಾರ್ಯದರ್ಶಿ ಜಿ ಎ ಬಾವಾ, ವೆರೋನಿಕಾ ಕರ್ನೆಲಿಯೋ, ದೇವಿಪ್ರಸಾದ್ ಶೆಟ್ಟಿ, ನಾಯಕರಾದ ರಮೇಶ್ ಕಾಂಚನ್, ರೋಶನಿ ಒಲಿವರ್, ಡಾ ಸುನೀತಾ ಶೆಟ್ಟಿ, ಎಮ್ ಎ ಗಫೂರ್ ಹಾಗೂ ಇತರರು ಉಪಸ್ಥಿತರಿದ್ದರು.


Spread the love