ಅಸಹಾಯಕರ ಬಾಳಿಗೆ ಬೆಳಕಾದ ಶಾಸಕ ವೇದವ್ಯಾಸ ಕಾಮತ್

Spread the love

ಅಸಹಾಯಕರ ಬಾಳಿಗೆ ಬೆಳಕಾದ ಶಾಸಕ ವೇದವ್ಯಾಸ ಕಾಮತ್

ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಅವರು ಬಡಮನೆಗೆ ವಿದ್ಯುತ್ ಸಂಪರ್ಕದ ವ್ಯವಸ್ಥೆ ಮಾಡಿ ಅಕ್ಷರಶ: ಆ ಕುಟುಂಬಕ್ಕೆ ಬೆಳಕಾಗಿದ್ದಾರೆ. ಮಂಗಳೂರಿನ ಬಿಜೈ ಕಾಪಿಕಾಡ್ ಪರಿಸರದಲ್ಲಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಕಾಲೋನಿಯಲ್ಲಿ ವಾಸವಿರುವ ಜಯಮ್ಮ ಎನ್ನುವ ಹಿರಿಯ ಜೀವ ಕಳೆದ ನಲ್ವತ್ತು ವರ್ಷಗಳಿಂದ ವಿದ್ಯುತ್ ಇಲ್ಲದೆ ಚಿಮಣಿ ದೀಪದಲ್ಲಿ ದಿನ ದೂಡುತ್ತಿದ್ದರು. ಈ ವಿಷಯ ಭಾರತೀಯ ಜನತಾ ಪಾರ್ಟಿಯ ಸ್ಥಳೀಯ ಕಾರ್ಯಕರ್ತರಿಂದ ಶಾಸಕ ವೇದವ್ಯಾಸ ಕಾಮತ್ ಅವರ ಗಮನಕ್ಕೆ ಬಂತು. ಜಯಮ್ಮ ಅವರ ಸಂಕಷ್ಟಕ್ಕೆ ತಕ್ಷಣ ಸ್ಪಂದಿಸಿದ ಶಾಸಕರು ಮೆಸ್ಕಾಂ ಅಧಿಕಾರಿಗಳನ್ನು ಮತ್ತು ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮತ್ತು ಪದಾಧಿಕಾರಿಗಳನ್ನು ಸಂಪರ್ಕಿಸಿ ಜಯಮ್ಮ ಅವರ ಮನೆಗೆ ವಿದ್ಯುತ್ ಸಂಪರ್ಕ ಕೊಡಿಸಲು ಮಾಡಬೇಕಾದ ಕಾರ್ಯಗಳ ವಿಷಯ ತಿಳಿಸಿದರು.

ಈ ಮೂಲಕ ಸೋಮವಾರ ಜಯಮ್ಮ ಅವರ ಮನೆಗೆ ವಿದ್ಯುತ್ ಸಂಪರ್ಕ ಒದಗಿಸಲಾಗಿದೆ. ಅದರ ನಂತರ ಜಯಮ್ಮ ಅವರ ಮನೆಗೆ ಭೇಟಿ ಕೊಟ್ಟ ಶಾಸಕರು ಮಾತನಾಡಿ, ಮಂಗಳೂರು ನಗರ ದಕ್ಷಿಣದಲ್ಲಿರುವ ನಾಗರಿಕರು ವಿದ್ಯುತ್ ಸಂಪರ್ಕ ಇಲ್ಲದೆ ಕಷ್ಟಪಡುವ ಸನ್ನಿವೇಶ ಬರಬಾರದು. ಹಾಗೇನಾದರೂ ಇದ್ದಲ್ಲಿ ತಮ್ಮನ್ನು ಅಥವಾ ತಮ್ಮ ಕಚೇರಿಯನ್ನು ಸಂಪರ್ಕಿಸಿ ಮಾಹಿತಿ ನೀಡಿದಲ್ಲಿ ಅದಕ್ಕೆ ಸೂಕ್ತ ಕ್ರಮ ಕೈಗೊಳ್ಳಲು ಕೆಲಸ ಮಾಡಲಾಗುವುದು ಎಂದರು. ಜಯಮ್ಮನವರ ಮನೆಗೆ ವಿದ್ಯುತ್ ಸಂಪರ್ಕ ನೀಡಲು ಸಹಕರಿಸಿದ ವಿದ್ಯುತ್ ಗುತ್ತಿಗೆದಾರ ಸಂಘದ ಪ್ರಮುಖರಿಗೆ ಮತ್ತು ಸ್ಥಳೀಯ ಬಿಜೆಪಿ ಕಾರ್ಯಕರ್ತರನ್ನು ಶಾಸಕರು ಅಭಿನಂದಿಸಿದರು. ಶಾಸಕರನ್ನು ಜಯಮ್ಮ ಮನತುಂಬಿ ಹರಸಿದರು.

ಶಾಸಕರೊಂದಿಗೆ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರ ಸಂಘ ಬೆಂಗಳೂರು (ರಿ) ದ.ಕ. ಜಿಲ್ಲಾ ಸಮಿತಿ ಮಂಗಳೂರು ಉಪಸಮಿತಿ ಅಧ್ಯಕ್ಷ ಕೆ ಉಮರ್, ಪ್ರಧಾನ ಕಾರ್ಯದರ್ಶಿ ವಿವೇಕಾನಂದ, ಕೋಶಾಧ್ಯಕ್ಷ ಚಂದ್ರಹಾಸ, ಜತೆ ಕಾರ್ಯದರ್ಶಿ ಸಜೀದ್ ಅಲ್ತಪ್, ಉಪಾಧ್ಯಕ್ಷ ಸುಮಿತ್ ರಾಜ್, ಸಂಘಟನಾ ಕಾರ್ಯದರ್ಶಿ ಶಶಿಚಂದ್ರ ಎ ಅಮೀನ್, ಕಾರ್ಯಕಾರಿ ಸಮಿತಿ ಸದಸ್ಯರು, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಲ್ಯಾನ್ಸಿ ಫೆರ್ನಾಂಡಿಸ್, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಬಿಜೈ 31 ನೇ ವಾರ್ಡ್ ಅಧ್ಯಕ್ಷ ಪ್ರಶಾಂತ್ ಆಳ್ವ, ಪ್ರಧಾನ ಕಾರ್ಯದರ್ಶಿ ನಾರಾಯಣ, ಯುವ ಮೋರ್ಚಾದ ಚರಿತ್ ಪೂಜಾರಿ, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ವಸಂತ ಜೆ ಪೂಜಾರಿ, ದಯಾನಂದ, ಕಾರ್ತಿಕ್ ಹಾಗೂ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು


Spread the love