ಆರೋಗ್ಯವಂತ ಭಾರತ ಸೃಷ್ಟಿ, ಸ್ವಚ್ಛ ಪರಿಸರದಿಂದ ಮಾತ್ರ ಸಾಧ್ಯ ಡಾ: ವೇದವ್ಯಾಸ ಕಾಮತ್

Spread the love

ಆರೋಗ್ಯವಂತ ಭಾರತ ಸೃಷ್ಟಿ, ಸ್ವಚ್ಛ ಪರಿಸರದಿಂದ ಮಾತ್ರ ಸಾಧ್ಯ ಡಾ: ವೇದವ್ಯಾಸ ಕಾಮತ್
 
ಮಂಗಳೂರು :  2014ರಲ್ಲಿ ಹೊಸ ಹೆಸರಿನಿಂದ ಪ್ರಾರಂಭವಾದ ಸ್ಚಚ್ಛ ಭಾರತ ಅಭಿಯಾನ ಇಂದು ದೇಶದ್ಯಾಂತ ಗುರುತಿಸಲ್ಪಟ್ಟಿದ್ದು, ಸ್ಚಚ್ಛತೆಯ ಕಲ್ಪನೆಯನ್ನು ಮನೆ ಮನೆಗೆ ಮುಟ್ಟಿಸಬೇಕು ಎಂದು ಕಾರ್ಯಕ್ರಮವನ್ನು ಉದ್ಘಾಟಿಸಿ ವೇದವ್ಯಾಸ ಕಾಮತ್ ಶಾಸಕರು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಅಭಿಪ್ರಾಯಪಟ್ಟರು.

ಒಂದು ಹೆಜ್ಜೆ ಸ್ವಚ್ಛತೆಯ ಕಡೆಗೆ ಎಂಬ ದ್ಯೇಯ ವಾಕ್ಯದಂತೆ ನಾವೆಲ್ಲರೂ ಸ್ವಚ್ಛತೆಯಲ್ಲಿ ಭಾಗಿಯಾಗೋಣ 2019 ರೊಳಗಾಗಿ ಮಹಾತ್ಮ ಗಾಂಧೀಜಿಯ ಕನಸಾದ ಸ್ವಚ್ಛ ಭಾರತದ ಕನಸು ನನಸಾಗಿಸೋಣ ಎಂದು ಕಾರ್ಯಕ್ರzಮದಲ್ಲಿ ತಿಳಿಸಿದರು.

ಕ್ಷೇತ್ರ ಜನಸಂಪರ್ಕ ಕಾರ್ಯಾಲಯ, ವಾರ್ತಾ ಮತ್ತು ಪ್ರಸಾರ ಸಚಿವಾಲಯ, ಭಾರತ ಸರ್ಕಾರ, ಮಂಗಳೂರು, ಶಿವಮೊಗ್ಗ ಇಲಾಖೆಯು ಮಂಗಳೂರು ಮಹಾನಗರ ಪಾಲಿಕೆ ಮತ್ತು ಶ್ರೀ ಗೋಕರ್ಣನಾಥೇಶ್ವರ ಶಿಕ್ಷಣ ಮಹಾವಿದ್ಯಾಲಯ ಮಂಗಳೂರು ಇವರ ಸಹಯೋಗದಲ್ಲಿ ಸ್ವಚ್ಛತೆಯ ಕುರಿತು ವಿಶೇಷ ಜಾಗೃತಿ ಕಾರ್ಯಕ್ರಮ(ನಗರ)ವನ್ನು ಡಿಸೆಂಬರ್ 28 ರಂದು ಗೋಕರ್ಣನಾಥೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಬಯಲು ಶೌಚಾಲಯದಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಹಸಿ ಕಸ ಒಣಕಸ ಮತ್ತು ಸ್ಚಚ್ಛ ಭಾರತ ನಿರ್ಮಾಣ ಮಾಡುವುದರಲ್ಲಿ ವಿದ್ಯಾರ್ಥಿಗಳ ಪಾತ್ರದ ಕುರಿತು ವಿಂಗಡಣೆ ಕಾರ್ಯಕ್ರಮದಲ್ಲಿ ನಾಗೇಂದ್ರ ಸ್ವಾಮಿ, ಭಾ.ವಾ.ಸೇ. ಹೆಚ್ಚುವರಿ ಮಹಾನಿರ್ದೇಶಕರು, ಪ್ರಾದೇಶಿಕ ಜನಸಂಪರ್ಕ ಕಾರ್ಯಾಲಯ ಮಂಗಳೂರು ಇವರು ಮಾತನಾಡಿದರು.

ಕಾರ್ಯಕ್ರಮದ ಪ್ರಸ್ತಾವಿಕ ನುಡಿಯಲ್ಲಿ, ಜಿ. ತುಕರಾಂಗೌಡ ,ಕ್ಷೇತ್ರ ಪ್ರಚಾರ ಅಧಿಕಾರಿಗಳು, ಮಂಗಳೂರು ಇವರು ಸ್ವಚ್ಛತೆಯ ಕಾರ್ಯಕ್ರಮದ ಉದ್ದೇಶದ ಕುರಿತು ವಿವರಿಸಿದರು.

ಸ್ವಚ್ಛ ಭಾರತ ಅಭಿಯಾನದಲ್ಲಿ ಮಹಾನಗರ ಪಾಲಿಕೆ ಜನರ ಪಾತ್ರ, ಘನ ತ್ಯಾಜ್ಯ ನಿರ್ವಹಣೆ, ಕುರಿತು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಮಧು.ಎಸ್.ಮನೋಹರ್, ಪರಿಸರ ಅಭಿಯಂತರರು, ಮಂಗಳೂರು ಮಹಾನಗರ ಪಾಲಿಕೆ ಮತ್ತು ನವೀನ್ ಕುಮಾರ್. ಸ್ವಚ್ಛ ಭಾರತ ಮಿಷನ್ ಜಿಲ್ಲಾ ಯೋಜನಾ ಸಂಯೋಜಕರು, ದಕ್ಷಿಣ ಕನ್ನಡ ಇವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಪ್ರೇಮಾನಂದ ಶೆಟ್ಟಿ ವಿಪಕ್ಷ ನಾಯಕರು ಮಂಗಳೂರು ಮಹಾನಗರ ಪಾಲಿಕೆ, ಸುಚಿತ್ರಾ ಶೆಟ್ಟಿ, ಉಪಪ್ರಾಂಶುಪಾಲರು, ರೇಖಾ, ಪ್ರಾಂಶುಪಾಲರು, ಗೋಕರ್ಣನಾಥೇಶ್ವರ ಪದವಿ ಕಾಲೇಜು ಮಂಗಳೂರು, ಭಾಗವಹಿಸಿದ್ದರು.

ರೋಹಿತ್ ಜನಸಂಪರ್ಕ ಕಾರ್ಯಾಲಯ ಮಂಗಳೂರು ಕಾರ್ಯಕ್ರಮವನ್ನು ನಿರೂಪಿಸಿದರೆ ಕ್ಷೇತ್ರ, ಕಾವ್ಯಶ್ರೀ ಪ್ರಾರ್ಥಿಸಿದರು. ದರ್ಶನ್ ಪಿ. ಕ್ಷೇತ್ರ ಜನಸಂಪರ್ಕ ಕಾರ್ಯಾಲಯ, ಶಿವಮೊಗ್ಗ ಇವರು ಸ್ವಾಗತಿಸಿದರು. ಮಲ್ಲಿಕಾ ಇವರು ಕಾರ್ಯಕ್ರಮದ ವಂನಾರ್ಪಣೆ ಮಾಡಿದರು.

ಕಾರ್ಯಕ್ರಮದ ಪೂರ್ವಭಾವಿಯಾಗಿ ಸ್ವಚ್ಛ ಭಾರತದ ಕುರಿತು ಚಿತ್ರ ಕಲಾ ಪ್ರದರ್ಶನ, ಚಲನಚಿತ್ರ ಪ್ರದರ್ಶನ, ಛಾಯಚಿತ್ರ ಪದರ್ಶನ ನಡೆಸಲಾಯಿತು.

ಸ್ವಚ್ಛ ಭಾರತದ ಅಭಿಯಾನದ ಕುರಿತು ವಿದ್ಯಾರ್ಥಿಗಳಿಗೆ ಹಲವಾರು ಸ್ಛರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಸ್ಪರ್ಧೆಗಳಲ್ಲಿ ಗೆದ್ದವರಿಗೆ ಬಹುಮಾನವನ್ನು ಕಾರ್ಯಕ್ರಮದಲ್ಲಿ ವಿತರಿಸಲಾಯಿತು.


Spread the love