ಆರ್ ಟಿ ಐ ಕಾರ್ಯಕರ್ತ ವಿನಾಯಕ ಬಾಳಿಗ ಕೊಲೆ ಪ್ರಕರಣದ ಆರೋಪಿಗಳನ್ನು ಬಂಧಿಸುವಂತೆ ಪ್ರತಿಭಟನೆ

Spread the love

ಮಂಗಳೂರು: ಆರ್ ಟಿ ಐ ಕಾರ್ಯಕರ್ತ ವಿನಾಯಕ ಬಾಳಿಗ ಕೊಲೆ ಪ್ರಕರಣದ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ದೇಶಪ್ರೇಮಿ ಸಂಘಟನೆಗಳ ಒಕ್ಕೂಟದ ಸದಸ್ಯರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಅಖಿಲ ಭಾರತ ವಿಚಾರವೇದಿಕೆಯ ಅಧ್ಯಕ್ಷ ನರೇಂದ್ರ ನಾಯಕ್ ಅವರು ಬಾಳಿಗಾ ಹತ್ಯೆಯ ವಿರುದ್ದ ಜನಪ್ರತಿನಿಧಿಗಳು ಮೌನವಹಿಸಿದ್ದು, ಸಚಿವ ಯುಟಿ ಖಾದರ್ ಹೊರತುಪಡಿಸಿ ಇತರ ಎಲ್ಲಾ ನಾಯಕರು ಮೌನವಾಗಿದ್ದಾರೆ. ಚರ್ಚಿಗೆ ಚಿಕ್ಕ ಕಲ್ಲು ತೂರಾಟ ನಡೆದ ಕೂಡಲೇ ಒಡುವ ಶಾಸಕ ಜೆ ಆರ್ ಲೋಬೊ ಬಾಳಿಗಾ ಹತ್ಯೆ ಕುರಿತು ಮೌನ ವಹಿಸಿರುವುದು ನಿಜಕ್ಕೂ ಖೇದಕರ. ವಿನಾಯಕ ಬಾಳಿಗ ಬಿಜೆಪಿಯ ಸಕ್ರೀಯ ಕಾರ್ಯಕರ್ತರಾಗಿ ಸಂಸದ ನಳಿನ್ ಕುಮಾರ್ ಚುನಾವಣೆಯ ವೇಳೆ ಹಗಲು ರಾತ್ರಿ ಕೆಲಸ ಮಾಡಿದ್ದು, ಅವರದ್ದೇ ಕಾರ್ಯಕರ್ತನ ಕೊಲೆ ನಡೆದರೂ ಕೂಡ ಬಿಜೆಪಿ ನಾಯಕರು ಮೌನ ವಹಿಸಿದ್ದಾರೆ. ಅನ್ಯಾಯ ಕಂಡೂ ಕೂಡ ಕೆಲವೇ ಜನ ಹೊರತುಪಡಿಸಿ ಮಂಗಳೂರಿನ ಜನರೂ ಕೂಡ ಮೌನ ವಹಿಸಿದ್ದಾರೆ ಎಂದರು.

image011vinayaka-baliga-murder-protest-20160415-011 image010vinayaka-baliga-murder-protest-20160415-010 image009vinayaka-baliga-murder-protest-20160415-009 image008vinayaka-baliga-murder-protest-20160415-008 image001vinayaka-baliga-murder-protest-20160415-001

ಸರಕಾರಕ್ಕೆ ವಂಚನೆ ಮಾಡುತ್ತಿದ್ದ, ಬಿಲ್ಡರ್, ರಿಯಲ್ ಎಸ್ಟೇಟ್ ಮಾಫಿಯಾಗಳು, ಶಿಕ್ಷಣ, ಧಾರ್ಮೀಕ ಕ್ಷೇತ್ರಗಳ ಪ್ರಮುಖರ ವಂಚನೆಗಳನ್ನು ಬಯಲಿಗೆಳೆಯುತ್ತಿದ್ದ ವಿನಾಯಕ್ ಬಾಳಿಗ ಕೊಲೆ ನಡೆದು ಕೊಲೆ ನಡೆದು ವಾರಗಳು ಕಳೆದರೂ ನೈಜ ಆರೋಪಿಗಳನ್ನು ಬಂಧಿಸಲು ಇಲಾಖೆ ಹಾಗೂ ಸರಕಾರ ವಿಫಲವಾಗಿದೆ ಎಂದರು.
ವಿನಾಯಕ ಬಾಳಿಗ ಕೊಲೆಗೆ ಕಾರಣವಾದ ನೈಜ ಆರೋಪಿಗಳನ್ನು ಕೂಡಲೇ ಬಂಧಿಸಿ, ಪ್ರಕರಣದ ಉನ್ನತ ಮಟ್ಟದ ತನಿಖೆಗೆ ಪ್ರತ್ಯೇಕ ತಂಡ ರಚಿಸುವುದರೊಂದಿಗೆ ಅನಾಥವಾಗಿರುವ ಬಾಳಿಗ ಕುಟುಂಬಕ್ಕೆ ಪರಿಹಾರ ನೀಡುವಂತೆ ಒತ್ತಾಯಿಸಲಾಯಿತು.
ಪ್ರತಿಭಟನೆಯಲ್ಲಿ ದಯಾನಂದ ಶೆಟ್ಟಿ, ವಿ ಸೀತಾರಾಮ್ ಬೇರಿಂಜ, ಕರುಣಾಕರ ಕುಲಾಲ್, ಸಂತೋಷ್ ಬಜಾಲ್, ರೆನ್ನಿ ಡಿ’ಸೋಜಾ, ಗಣೇಶ್ ಬಾಳಿಗ, ನಿತಿನ್ ಕುತ್ತಾರ್, ಚರಣ್, ದೀನೇಶ್ ಹೆಗ್ಡೆ ಇನ್ನಿತರರು ಉಪಸ್ಥಿತರಿದ್ದರು.


Spread the love