ಆಳ್ವಾಸ್ ಹೋಮಿಯೋಪತಿ ಕಾಲೇಜಿಗೆ 32 ರ್ಯಾಂಕ್

Spread the love

ಆಳ್ವಾಸ್ ಹೋಮಿಯೋಪತಿ ಕಾಲೇಜಿಗೆ 32 ರ್ಯಾಂಕ್

ಮೂಡುಬಿದಿರೆ: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯವು 2019-20ರ ಶೈಕ್ಷಣಿಕ ವರ್ಷದಲ್ಲಿ ನಡೆಸಿದ ಹೋಮಿಯೋಪತಿ ಮೆಡಿಕಲ್ ಸೈನ್ಸ್ ಪದವಿ ಪರೀಕ್ಷೆಗಳ ಫಲಿತಾಂಶವು ಬಿಡುಗಡೆಯಾಗಿದ್ದು, ಆಳ್ವಾಸ್ ಹೋಮಿಯೋಪತಿ ಕಾಲೇಜು 32 ರ್ಯಾಂಕ್‍ಗಳನ್ನು ಪಡೆದುಕೊಂಡಿದೆ. ಸಮಗ್ರವಾಗಿ ದ್ವಿತೀಯ ವರ್ಷದ ಬಿಎಚ್‍ಎಮ್‍ಎಸ್ ವಿದ್ಯಾರ್ಥಿನಿ ಎಮ್.ಎಸ್ ಮಹಾಲಕ್ಷ್ಮಿ 8ನೇ ರ್ಯಾಂಕ್, ನಾಲ್ಕನೇ ವರ್ಷದ ಅಪರ್ಣಾ ಗೋಪಿನಾಥ್ ಐದನೇ ರ್ಯಾಂಕ್ ಹಾಗೂ ಅರ್ಚನಾ ಎನ್. ವಿ ಏಳನೇ ರ್ಯಾಂಕ್‍ನ್ನು ಗಳಿಸಿದ್ದಾರೆ.

ಹೋಮಿಯೋಪತಿ ಮೆಡಿಕಲ್ ಸೈನ್ಸ್‍ನ ಪ್ರಥಮ ವರ್ಷದ ಅಂಗರಚನಾಶಾಸ್ತ್ರ ವಿಷಯದಲ್ಲಿ ನವೀನಾ ಪಿ. ಪಿಗೆ ಒಂಬತ್ತನೇ ರ್ಯಾಂಕ್ ಲಭಿಸಿದೆ.

ಮ್ಯಾಟಿರಿಯಾ ಮೇಡಿಕಾ ವಿಷಯದಲ್ಲಿ ದ್ವಿತೀಯ ಬಿಎಚ್‍ಎಮ್‍ಎಸ್‍ನ ಚಂದನಾ ಚಂದ್ರನ್‍ಗೆ 5ನೇ ರ್ಯಾಂಕ್, ಅರ್ಚನಾ ಎನ್‍ವಿಗೆ 8ನೇ ರ್ಯಾಂಕ್, ಆಶಿಕಾ ಗಫೂರ್‍ಗೆ 10ನೇ ರ್ಯಾಂಕ್, ಸ್ನೇಹಾ ಜ್ಞಾನಶ್ರೀಗೆ 10ನೇ ರ್ಯಾಂಕ್, ಅರಿಫಾಖಾನ್‍ಗೆ 9ನೇ ರ್ಯಾಂಕ್, ಎಮ್.ಎಸ್ ಮಹಾಲಕ್ಷ್ಮಿ 9ನೇ ರ್ಯಾಂಕ್ ಹಾಗೂ ಪ್ಯಾಥಾಲಜಿ ವಿಷಯದಲ್ಲಿ 4ನೇ ರ್ಯಾಂಕ್, ಅಪರ್ಣಾ ಗೋಪಿನಾಥ್‍ಗೆ 7ನೇ ರ್ಯಾಂಕ್ ಮತ್ತು ಆರ್ಗನಾನ್ ಮೆಡಿಸಿನ್ ವಿಷಯದಲ್ಲಿ ಕೆ. ಕಾವ್ಯಾ 5ನೇ ರ್ಯಾಂಕ್, ಸೌಭಾಗ್ಯಾ ಸನ್ನಿ 7ನೇ ರ್ಯಾಂಕ್, ಸೋನಿಕಾ ಪಿ 9ನೇರ್ಯಾಂಕ್‍ನಲ್ಲಿ ತೇರ್ಗಡೆಯಾಗಿದ್ದಾರೆ.

ತೃತೀಯ ಬಿಎಚ್‍ಎಮ್‍ಎಸ್‍ನ ಓಬಿಜಿ ವಿಷಯದಲ್ಲಿ ಶಿಫ್ನಾ ಕೆ 8ನೇ ರ್ಯಾಂಕ್, ಅರ್ಚನಾಎನ್. ವಿ 9ನೇ ರ್ಯಾಂಕ್, ಮೆಟರಿಯಾ ಮೆಡಿಕಾ ವಿಷಯದಲ್ಲಿ ನೀತುಕೃಷ್ಣ ವಿ. ಪಿ 8ನೇ ರ್ಯಾಂಕ್, ಚಂದನಾಚಂದ್ರನ್ 9ನೇ ರ್ಯಾಂಕ್, ನೇಹಾ ಶ್ರೀಹಿತ್ ಎಮ್ 9ನೇರ್ಯಾಂಕ್ ಹಾಗೂ ಕೆ.ಕಾವ್ಯಾಓಬಿಜಿ ವಿಷಯದಲ್ಲಿ 9ನೇ ರ್ಯಾಂಕ್ ಮತ್ತು ಮೆಟರಿಯಾ ಮೆಡಿಕಾ ವಿಷಯದಲ್ಲಿ 7ನೇ ರ್ಯಾಂಕ್ ಪಡೆದುಕೊಂಡಿದ್ದಾರೆ.

ನಾಲ್ಕನೇ ವರ್ಷದ ಬಿಎಚ್‍ಎಮ್‍ಎಸ್‍ನ ಮೆಡಿಸಿನ್ ವಿಷಯದಲ್ಲ್ಲಿ ಆಶಿಕಾ ಗಾಫೂರ್ 8ನೇ ರ್ಯಾಂಕ್, ಕಮ್ಯುನಿಟಿ ಮೆಡಿಸಿನ್ ವಿಷಯದಲ್ಲಿ ಹಫ್ಸಾ ಮಹಿಯಾ 6ನೇ ರ್ಯಾಂಕ್, , ಅಪರ್ಣಾ ಗೋಪಿನಾಥ್ ರಿಪೇರ್ಟರಿ ವಿಷಯದಲ್ಲಿ 7ನೇ ರ್ಯಾಂಕ್, ಮೆಡಿಸಿನ್ ವಿಷಯದಲ್ಲಿ 2ನೇ ರ್ಯಾಂಕ್, ಅರ್ಚನಾ ಎನ್ ವಿ. ಕಮ್ಯುನಿಟಿ ಮೆಡಿಸಿನ್ ವಿಷಯದಲ್ಲಿ 10ನೇ ರ್ಯಾಂಕ್, ಮೆಡಿಸಿನ್ ವಿಷಯದಲ್ಲಿ 4ನೇ ರ್ಯಾಂಕ್, ಕೆ. ಕಾವ್ಯಾ ಮೆಡಿಸಿನ್ ವಿಷಯದಲ್ಲಿ 6ನೇ ರ್ಯಾಂಕ್, ರಿಪೆರ್ಟರಿ ವಿಷಯದಲ್ಲಿ 10ನೇ ರ್ಯಾಂಕ್, ಸಾರಿಗಾ ಎಸ್ ಮೆಡಿಸಿನ್ ವಿಷಯದಲ್ಲಿ 8ನೇ ರ್ಯಾಂಕ್, ಮತ್ತು ಒಗ್ರ್ಯಾನನ್ ಆಫ್ ಮೆಡಿಸಿನ್ ವಿಷಯದಲ್ಲಿ 10ನೇ ರ್ಯಾಂಕ್ ಗಳಿಸಿದ್ದಾರೆ.

ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷಡಾ.ಎಂ ಮೋಹನ್ ಆಳ್ವ, ಮ್ಯಾನೇಜ್‍ಮೆಂಟ್ ಟ್ರಸ್ಟಿ ವಿವೇಕ್ ಆಳ್ವ, ಪ್ರಾಂಶುಪಾಲ ಡಾ ಪ್ರವೀಣ್‍ರಾಜ್, ಉಪಪ್ರಾಂಶುಪಾಲ ಡಾ ರೋಶನ್ ಪಿಂಟೋ ಅಭಿನಂದಿಸಿದ್ದಾರೆ.


Spread the love

1 Comment

  1. What exactly is ರ್ಯಾಂಕ್?

    By the way, no other medical practice besides Homeopathy can aptly describe the meaning of what Voltaire had said –

    “The art of medicine consists of amusing the patient while nature cures the disease.

Comments are closed.