ಆಶಾ ಕಾರ್ಯಕರ್ತೆಯರಿಗೆ ಸೂಕ್ತ ಗೌರವ ಧನ, ಸುರಕ್ಷಾ ಉಪಕರಣ ಒದಗಿಸಲು ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಒತ್ತಾಯ

Spread the love

ಆಶಾ ಕಾರ್ಯಕರ್ತೆಯರಿಗೆ ಸೂಕ್ತ ಗೌರವ ಧನ, ಸುರಕ್ಷಾ ಉಪಕರಣ ಒದಗಿಸಲು ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಒತ್ತಾಯ

ಉಡುಪಿ: ಕೋರೋನಾ ವಾರಿಯರ್ಸ್ ಆಗಿ ದುಡಿಯುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಸೂಕ್ತ ಗೌರವ ಧನ ಹಾಗೂ ಸುರಕ್ಷಾ ಉಪಕರಣಗಳನ್ನು ಒದಗಿಸುವಂತೆ ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ಮುಖ್ಯಮಂತ್ರಿ ಹಾಗೂ ರಾಜ್ಯಪಾಲರಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಯಿತು.

ಕರ್ನಾಟಕ ರಾಜ್ಯದಲ್ಲಿ ಸುಮಾರು 42,000 ಆಶಾ ಕಾರ್ಯಕರ್ತೆಯರು ಕಳೆದ ನಾಲ್ಕು ತಿಂಗಳುಗಳಿಂದ ಕೊರೊನಾ ವಾರಿಯರ್ಸ್ ಆಗಿ ಕೆಲಸ ಮಾಡುತ್ತಿದ್ದಾರೆ. ಸ್ಥಳೀಯ ಗ್ರಾಮ ಮಟ್ಟದಲ್ಲಿ ಜನರೊಂದಿಗೆ ಅತಿ ಹತ್ತಿರದ ಸಂಬಂಧವಿರುವ ಅವರು ಪ್ರತಿದಿನ ನಿರಂತರವಾಗಿ ದುಡಿಯುತ್ತಿದ್ದಾರೆ. ಪ್ರತ್ಯೇಕವಾಗಿ ನಿರ್ಬಂಧಿತ ವಲಯ (ಕಂಟೇನೆಂಟ್ ಝೋನ್)ಗಳಲ್ಲಿ ಕೂಡ ಹೋಗಿ, ಜನರಲ್ಲಿ ಜಾಗೃತಿ ಮೂಡಿಸುವುದು ಹಾಗೂ ಇಲಾಖೆಗೆ ನೀಡುವುದನ್ನು ತುಂಬಾ ಪ್ರಾಮಾಣಿಕವಾಗಿ ಸಂದರ್ಭದಲ್ಲಿಯೂ ಕೂಡ ಈ ನಮ್ಮ ಮಾಹಿತಿ ಸಂಗ್ರಹಿಸಿ ನಿರ್ವಹಿಸುತ್ತಿದ್ದಾರೆ. ಎಲ್ಲಾ ಜನರು ಮನೆಯೊಳಗೆ ಕೂತು ವಾರಿಯರ್ಸ್ ಮನೆ ಮನೆಗೆ ಭೇಟಿ ನೀಡುತ್ತಿದ್ದರು. ಮಾತ್ರವಲ್ಲ ಆನೇಕ ಕಡೆಗಳಲ್ಲಿ ಜನರಿಂದ ನಿಂದನೆಗೆ ಮತ್ತು ಹಲ್ಲೆಗೆ ಒಳಗಾಗುತ್ತಾರೆ, ಅವರಿಗೆ ಸದ್ಯ ನೀಡುತ್ತಿರುವ ರೂ.4,000/- ಮಾಸಿಕ ಗೌರವಧನ ನಿಜವಾಗಿಯೂ ಅವರು ಮಾಡುತ್ತಿರುವ ಕೆಲಸಕ್ಕೆ ಅತೀ ಕಡಿಮೆ ಎಂದರೆ ತಪ್ಪಾಗಲಾರದು.

ಇತ್ತೀಚೆಗೆ ಆಶಾ ಕಾರ್ಯಕರ್ತೆಯರು ಸರಕಾರದ ಮೇಲೆ ಒತ್ತಡ ಹೇರಲು ಬೆಂಬಲ ಕೋರಿ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿದ್ದು, ಅವರ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ ಹಾಗೂ ನಾಯಕರಾದ ಸಿದ್ದರಾಮಯ್ಯ ಅವರು ಇವರ ಪರವಾಗಿ ಬೇಡಿಕೆಗಳನ್ನು ಸರಕಾರದ ಮುಂದಿಟ್ಟಿದ್ದಾರೆ, ಈ ಕೊರೋನಾ. ಯುದ್ಧದ ಸಂದರ್ಭದಲ್ಲಿ ಕೂಡ ಅವರಿಗೆ ಸರ್ಕಾರದಿಂದ ಯಾವುದೇ ಸುರಕ್ಷಾ ಉಪಕರಣಗಳನ್ನು ನೀಡಿಲ್ಲ.

ಆದುದರಿಂದ ಜನರ ಜೊತೆ ಅತಿ ಹತ್ತಿರದ ಕೊಂಡಿಯಾಗಿರುವ ಆಶಾ ಕಾರ್ಯಕರ್ತೆಯರಿಗೆ ಅವರ ಬೇಡಿಕೆಯಂತೆ ಮಾಸಿಕ ರೂ. 12,000/- ಗೌರವ ಧನವನ್ನು ನಿಗದಿ ಮಾಡಬೇಕು ಹಾಗೂ ಅವರಿಗೆ ಎಲ್ಲಾ ಸುರಕ್ಷಾ ಉಪಕರಣಗಳನ್ನು ನಿರಂತರವಾಗಿ ಪೂರೈಸುತ್ತಿರಬೇಕು ಎಂದು ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಸರಕಾರವನ್ನು ಮನವಿಯಲ್ಲಿ ಆಗ್ರಹಿಸಿದೆ.

ಈ ವೇಳೆ ಕಾಂಗ್ರೆಸ್ ನಾಯಕಿಯರಾದ ವೆರೋನಿಕಾ ಕರ್ನೆಲಿಯೊ, ಡಾ|ಸುನೀತಾ ಶೆಟ್ಟಿ, ಜ್ಯೋತಿ ಹೆಬ್ಬಾರ್, ರೋಶನಿ ಒಲಿವರ್, ಗೋಪಿ ಕೆ ನಾಯ್ಕ್, ಚಂದ್ರಿಕಾ ಶೆಟ್ಟಿ, ಫೌಜಿಯಾ ಸಾದಿಕ್, ಜ್ಯೋತಿ ಬಾರೆಟ್ಟೊ, ರೋಜಲಿನ್ ಕ್ರಾಸ್ತಾ, ಶಾಂತಿ ಪಿರೇರಾ, ಮರೀನಾ ಜಾನ್, ಐರಿನ್ ಡಿಸೋಜಾ, ಪ್ರಮೀಳಾ ಜತ್ತನ್ನ ಉಪಸ್ಥಿತರಿದ್ದರು.


Spread the love