ಆಶ್ರಯ ಮನೆ: ಸುಳ್ಳು ವದಂತಿಗಳಿಗೆ ಕಿವಿಗೊಡಬೇಡಿ- ಶಾಸಕ ಜೆ.ಆರ್.ಲೋಬೊ ಮನವಿ

Spread the love

ಆಶ್ರಯ ಮನೆ: ಸುಳ್ಳು ವದಂತಿಗಳಿಗೆ ಕಿವಿಗೊಡಬೇಡಿ- ಶಾಸಕ ಜೆ.ಆರ್.ಲೋಬೊ ಮನವಿ

ಮಂಗಳೂರು: ಮಂಗಳೂರಲ್ಲಿ ಸುಮಾರು 10 ಎಕ್ರೆ ಪ್ರದೇಶದಲ್ಲಿ 1100 ಆಶ್ರಯ ಮನೆಗಳನ್ನು ನಿರ್ಮಾಣ ಮಾಡಿಕೊಡಲಾಗುವುದು ಇದು ಮೊದಲ ಯೋಜನೆಯಾಗಿದೆ. ಇದು ಮುಗಿದು ಬಳಿಕ ಎರಡನೇ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಶಾಸಕ ಜೆ.ಆರ್.ಲೋಬೊ ಹೇಳಿದ್ದಾರೆ.

ಅವರು ಆಶ್ರಯ ಯೋಜನೆಯಲ್ಲಿ ಮೊದಲ ಯೋಜನೆಯಲ್ಲಿ ಮನೆ ಸಿಗದವರು ನಿರಾಶರಾಗುವ ಅಗತ್ಯವಿಲ್ಲ. ಎರಡನೇ ಯೋಜನೆಯಲ್ಲಿ ಇನ್ನುಳಿದಿರುವವರಿಗೆ ಆಶ್ರಯ ಮನೆ ಒದಗಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

house-build-jr-lobo

ಕೆಲವರು ಇದೇ ಕೊನೆಯ ಯೋಜನೆಯೆಂದು ಆಶ್ರಯ ಮನೆ ಸಿಗದವರಿಗೆ ನಿರಾಸೆ ಉಂಟು ಮಾಡುತ್ತಿದ್ದಾರೆ. ಸಾರ್ವಜನಿಕರು ಯಾವುದೇ ಕಾರಣಕ್ಕೂ ವಿಶ್ವಾಸ ಕಳೆದುಕೊಳ್ಳಬಾರದು. ಸುಮಾರು 3000 ಸಾವಿರ ಮಂದಿ ಅರ್ಜಿ ಸಲ್ಲಿಸಿದ್ದರು. ಅವುಗಳಲ್ಲಿ 1100 ಮನೆಗಳಿಗೆ ಆಯ್ಕೆಮಾಡಲಾಗಿದೆ. ಇನ್ನುಳಿದ ಅರ್ಜಿಗಳನ್ನು ಮುಂದಿನ ಯೋಜನೆಗೆ ಕಾದಿರಿಸಲಾಗಿದೆ. ಆತಂಕಪಡುವ ಅಗತ್ಯವಿಲ್ಲ ಎಂದಿದ್ದಾರೆ.

ಯಾವುದೇ ಕಾರಣಕ್ಕೂ ಸುಳು ಸುದ್ದಿಗಳಿಗೆ ಕಿವಿಗೊಡಬಾರದು. ಮೊದಲ ಯೋಜನೆಯಲ್ಲಿ ಅರ್ಜಿಗಳನ್ನು ಎಲ್ಲಾ ಕಾರ್ಪೊರೇಟರ್  ಸಮಕ್ಷಮದಲ್ಲೇ ಯಾವುದೇ ಲೋಪ ಬರದಂತೆ ಆಯ್ಕೆಮಾಡಲಾಗಿದೆ. ಮುಂದಿನ ಸಲವೂ ಇದೇ ಮಾನದಂಡ ಅನುಸರಿಸಿ ಮೊದಲು ಅರ್ಜಿ ಸಲ್ಲಿಸಿದವರಿಗೆ ಮೊದಲ ಆಯ್ಕೆ ಮಾಡಲಾಗುವುದು ಎಂದಿದ್ದಾರೆ.

ಅರ್ಜಿ ಸಲ್ಲಿಸದಿರುವ ಫಲಾನುಭವಿಗಳು ಸುಳ್ಳು ಸುದ್ದಿಗಳಿಗೆ ಕಿವಿಗೊಡದೇ ಆದಷ್ಟು ಬೇಗ ಅರ್ಜಿ ಸಲ್ಲಿಸುವಂತೆ ಮನವಿ ಮಾಡಿಕೊಂಡಿದ್ದಾರೆ.


Spread the love