ಇನ್ಫೋಸಿಸ್ ವತಿಯಿಂದ 1.5 ಕೋಟಿ ರೂ. ಸಲಕರಣೆ ವಿತರಣೆ 

Spread the love

ಇನ್ಫೋಸಿಸ್ ವತಿಯಿಂದ 1.5 ಕೋಟಿ ರೂ. ಸಲಕರಣೆ ವಿತರಣೆ 

ಮಂಗಳೂರು:  ಇನ್ಫೋಸಿಸ್ ಫೌಂಡೇಷನ್ ವತಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ವೆನ್ಲಾಕ್ ಆಸ್ಪತ್ರೆ ಮತ್ತು ಪೊಲೀಸ್ ಆಯುಕ್ತರ ಕಚೇರಿಗಳಿಗೆ ರೂ 1.50 ಕೋಟಿ ಮೌಲ್ಯದ ವೈದ್ಯಕೀಯ ಉಪಕರಣಗಳು ಹಾಗೂ ಸಾಮಾಗ್ರಿಗಳನ್ನು ಬುಧವಾರ ಹಸ್ತಾಂತರಿಸಲಾಯಿತು.

ಬುಧವಾರ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಯಲ್ಲಿ ಇನ್ಫೋಸಿಸ್ ಫೌಂಡೇಷನ್ ವತಿಯಿಂದ ಕಿಟ್ ವಿತರಣೆ ಕಾರ್ಯಕ್ರಮ ನಡೆಯಿತು.

ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು ಮಾತನಾಡಿ, ಈ ಮಹತ್ತರ ನೆರವನ್ನು ನೀಡಿದ ಇನ್ಫೋಸಿಸ್ ಫೌಂಡೇಷನ್ ಅಧ್ಯಕ್ಷೆ ಸುಧಾಮೂರ್ತಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.

ವೆನ್ಲಾಕ್ ಜಿಲ್ಲಾ ಆಸ್ಪತ್ರೆಗೆ ರೂ 76 ಲಕ್ಷದ 5 ವೆಂಟಿಲೇಟರ್, ಪಿಪಿಇ ಕಿಟ್, ಥರ್ಮಾಮೀಟರ್ ಮತ್ತು ವೈದ್ಯಕೀಯ ಸಲಕರಣೆ , ಪೊಲೀಸ್ ಆಯುಕ್ತರ ಕಚೇರಿಗೆ ರೂ 58 ಲಕ್ಷದ ಪಿಪಿಇ ಕಿಟ್ ಮತ್ತು ಸ್ಯಾನಿಟೈಸರ್ಸ್ ಹಾಗೂ ರೂ 16 ಲಕ್ಷದ 2ಸಾವಿರ ಡ್ರೈ ರೇಷನ್ ಕಿಟ್‍ಗಳನ್ನು ಇದೇ ಸಂದರ್ಭದಲ್ಲಿ ವಿತರಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಇನ್ಫೋಸಿಸ್ ಕೇಂದ್ರಿಯ ಮುಖ್ಯಸ್ಥ ವ್ಯಾಸದೇವ ಕಾಮತ್ ಇನ್ಫೋಸಿಸ್ ಕ್ರಾಂತಿ ಮುಖ್ಯಸ್ಥ ಹರೀಶ್, ಜಿಲ್ಲಾ ವ್ಯವಸ್ಥಾಪಕ ಡಾ. ಕಿಶೋರ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಚಂದ್ರ ಬಾಯರಿ, ಜಿಲ್ಲಾ ಪಂಚಾಯತ್ ಸ್ಥಾಯೀ ಸಮಿತಿ ಅಧ್ಯಕ್ಷ ರವೀಂದ್ರ ಕಂಬಳಿ ಜಿ.ಪಂ. ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ ಮತ್ತಿತರರು ಉಪಸ್ಥಿತರಿದ್ದರು.


Spread the love