ಜಿಲ್ಲಾದ್ಯಂತ ಸೆಲೂನ್ ತೆರೆಯಲು ಅವಕಾಶ – ಜಿಲ್ಲಾ ಉಸ್ತುವಾರಿ ಸಚಿವ

Spread the love

ಜಿಲ್ಲಾದ್ಯಂತ ಸೆಲೂನ್ ತೆರೆಯಲು ಅವಕಾಶ – ಜಿಲ್ಲಾ ಉಸ್ತುವಾರಿ ಸಚಿವ

ಮಂಗಳೂರು ಮೇ 20: ದಕ್ಷಿಣ ಕನ್ನಡ ಜಿಲ್ಲಾಯಾದ್ಯಂತ  ಕೊರೊನಾ ಲಾಕ್ ಡೌನ್‍ನಿಂದ ಎಲ್ಲಾ ಸೆಲೂನ್‍ಗಳು ಸ್ಥಗಿತಗೊಂಡಿದ್ದವು. ಆದ್ದರಿಂದ ಎಲ್ಲಾ ಸೆಲೂನ್‍ಗಳನ್ನು ಪುನರ್ ಪ್ರಾರಂಭಿಸಲು ಮೇ 19 ರಿಂದ ಅವಕಾಶ ನೀಡಲಾಗಿದೆ. ಸೆಲೂನ್ ಮಾಲೀಕರು ಕೋವಿಡ್-19 ಸಾಂಕ್ರಮಿಕ ರೋಗ ಹಿನ್ನೆಲೆಯಲ್ಲಿ ಈ ಕೆಳಗಿನ ಸಲಹೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ  ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚಿಸಿದ್ದಾರೆ.

ಬುಧವಾರ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿ, ಗ್ರಾಹಕರು ಮತ್ತು ಕ್ಷೌರಿಕರು  ಜ್ವರ, ಶೀತ, ಕೆಮ್ಮು ಮತ್ತು ಗಂಟಲು ನೋವು ಇವರು ವ್ಯಕ್ತಿಗಳಿಗೆ ಪ್ರವೇಶ ನೀಡದಂತೆ, ಮುಖಗವಸು ಇಲ್ಲದೇ ವ್ಯಕಗತಿಗಳಿಗರ ನಿಬರ್ಂಧ. ಪ್ರವೇಶ ದ್ವಾರದಲ್ಲಿ ಹ್ಯಾಂಡದ ಸ್ಯಾನಿಟೈಸರ್ ಕಡ್ಡಾಯ, ಗ್ರಾಹಕ ಮತ್ತು ಕ್ಷೌರಿಕರ  ನಡುವೆ ಕನಿಷ್ಠ 1 ಮೀಟರ್ ಅಂತರ ಕಾಯ್ದುಕೊಳ್ಳಬೇಕು. ಅಂಗಡಿಯಲ್ಲಿ ಸ್ವಚ್ಚತೆ ಕಾಪಾಡಬೇಕು, ಒಬ್ಬರಿಗೆ ಬಳಸಿದ ಬಟ್ಟೆ ಮತ್ತೊಬ್ಬರಿಗೆ ಬಳಸಬಾರದು. ಗ್ರಾಹಕರಿಗೆ ಸೇವೆ ನೀಡುವಾಗ ಮಸ್ಕ್ ಮತ್ತು ಕೈಗೆ ಗ್ಲವ್ಸ್ ಹಾಕಬೇಕು. ಗ್ರಾಹಕರಿಗೆ ಟೋಕನ್ ವ್ಯವಸ್ಥೆ ನೀಡಿ ಜನ ಸಾಂದ್ರತೆ ಆಗದಂತೆ ತಡೆಯಬೇಕು, ಹೇರ್ ಕಟ್ ನಂತರ ಸಿಬ್ಬಂದಿ ಕೈಗಳನ್ನು ಸ್ಯಾನಿಟೈನ್‍ನಲ್ಲಿ ಕಡ್ಡಾಯವಾಗಿ ತೊಳೆಯಬೇಕು. ಎಲ್ಲಾ ಅಂಗಡಿಗಳು ಸರ್ಕಾರ ನೀಡಿರುವ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಿಬೇಕು ಯಾವುದೇ ರೀತಿಯಲ್ಲಿ ಮಾರ್ಗಸೂಚಿಯನ್ನು  ಮೀರಿದಂತೆ ನೋಡಿಕೊಳ್ಳಬೇಕೆಂದು ವರು ತಿಳಿಸಿದ್ದಾರೆ.

ನಿಷೇಧಾಜ್ಞೆ

ಮಂಗಳೂರು ಮೇ 20:  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ -19 ಸೋಂಕು ಹರಡುವುದನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ನಿಟ್ಟಿನಲ್ಲಿ ಸಾರ್ವಜನಿಕ ಹಿತದೃಷ್ಠಿಯಿಂದ  ಸರಕಾರದ ಆದೇಶದಲ್ಲಿ ನೀಡಿದ ಸಡಿಲಿಕೆಯಂತೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಕರ್ನಾಟಕ ಸಾಂಕ್ರಾಮಿಕ ರೋಗಗಳ ಅಧ್ಯಾದೇಶ 2020 ಕಲಂ 4 ರನ್ವಯ ಮತ್ತು ದಂಡ ಪ್ರಕ್ರಿಯಾ ಸಂಹಿತೆ 1973 ರ ಕಲಂ 144 (3) ರನ್ವಯ ಮೇ 18 ರಿಂದ ಮೇ 31 ರವರೆಗೆ ನಿಷೇದಾಜ್ಞೆಯನ್ನು ವಿಧಿಸಿ ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ಆದೇಶಿಸಿದ್ದಾರೆ.


Spread the love