ಇರುವೈಲಿನಲ್ಲಿ ಮಹಿಳಾ ದಿನಾಚರಣೆ

Spread the love

ಇರುವೈಲಿನಲ್ಲಿ ಮಹಿಳಾ ದಿನಾಚರಣೆ

 

ಮೂಡುಬಿದಿರೆ: ಹೆಣ್ಣು-ಗಂಡು ಎಂಬ ತಾರತಮ್ಯದ ಅಸಮಾನತೆಯ ಭಾವನೆಯನ್ನು ನಮ್ಮ ಮನೆಯಿಂದಲೇ ಹೊಗಲಾಡಿಸಬೇಕು. ನಮ್ಮ ಜೀವನದ ನಿರ್ಧಾರವನ್ನು ಮತ್ತೊಬ್ಬರು ನಿರ್ಧಾರಿಸಲು ಅವಕಾಶವನ್ನು ನೀಡಬಾರದು.ನಮ್ಮಜೀವನದಲ್ಲಿ ಮುಂದೆ ಏನಾಗಬೇಕೆಂಬ ದೃಢ ಸಂಕಲ್ಪವನ್ನು ಮಾಡಬೇಕೆಂದು ಆಳ್ವಾಸ್ ಕಾಲೇಜಿನ ಸಮಾಜಶಾಸ್ತ್ರದ ಮುಖ್ಯಸ್ಥ ಡಾ.ಮಧುಮಾಲ ತಿಳಿಸಿದರು.

ಇರುವೈಲಿನ ಬ್ರಹ್ಮಶ್ರೀ ಗುರುನಾರಾಯಣ ಸೇವಾ ಸಂಘದಲ್ಲಿ ಆಳ್ವಾಸ್ ಕಾಲೇಜಿನ ಅಂತಿಮ ಸ್ನಾತಕೋತ್ತರ ಸಮಾಜಶಾಸ್ತ್ರ ವಿಭಾಗದ ವಿದ್ಯಾರ್ಥಿನಿ ಅಂಕಿತಾ ಸಂಯೋಜನೆಯಲ್ಲಿ ಆಯೋಜಿಸಲಾದ ಮಕ್ಕಳ ಬೆಳವಣಿಗೆಯಲ್ಲಿ ಪೋಷಕರ ಪಾತ್ರ ಮತ್ತು ಮಹಿಳಾ ದಿನಾಚರಣೆಯ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಮಹಿಳೆಯರನ್ನು ಮತ್ತು ಮಕ್ಕಳನ್ನುದೇಶಿಸಿ ಮಾತನಾಡಿದರು.

ಮಹಿಳೆಯರು ಮಾತ್ರವಲ್ಲದೇ ಮಕ್ಕಳ ಬೆಳವಣಿಗೆಯನ್ನು ಪೋಷಕರು ನೋಡಿಕೊಳ್ಳಬೇಕು. ಮಕ್ಕಳು ದಿನಕ್ಕೆ ಯಾವ ಆಹಾರಗಳನ್ನು ತೆಗೆದುಕೊಳ್ಳಬೇಕು. ದಿನಕ್ಕೆ 5ಬಾರಿಯಾದರೂ ಅವರನ್ನು ಹತ್ತಿರಕರೆದು ಪ್ರೋತ್ಸಾಹವನ್ನು ನೀಡುವ ಮಾತುಗಳನ್ನಾಡಬೇಕು. ತಮ್ಮ ಮಕ್ಕಳು ಚಟುವಟಿಕೆಗಳ ನಿಗಾ ಅಗತ್ಯ ಎಂದರು.

ಮಹಿಳಾ ಶ್ರೀ ಮಾತಾ ಸ್ತ್ರೀ ಶಕ್ತಿ ಸ್ವಸಹಾಯ ಸಂಘದ ಅಧ್ಯಕ್ಷೆ ದೀಪ ದಿನೇಶ್ ಬಟಾರ, ದುರ್ಗಾ ಸ್ತ್ರೀ ಶಕ್ತಿ ಸ್ವಸಹಾಯ ಸಂಘದ ಅಧ್ಯಕ್ಷೆ ಶಕುಂತಲಾ ಶಿವಾನಂದ ಕಿಟ್ಟುಬೆಟ್ಟು, ಕಾರ್ಯಕ್ರಮದ ಸಂಯೋಜಕಿ ಅಂಕಿತಾ ಉಪಸ್ಥಿತರಿದ್ದರು.

ಕಿರಣ ಕಾರ್ಯಕ್ರಮ ನಿರೂಪಿಸಿದರು.

ಆಳ್ವಾಸ್ ಸಮಾಜಕಾರ್ಯ ವಿದ್ಯಾರ್ಥಿಗಳಿಂದ ಮಾಹಿತಿ ಕಾರ್ಯಕ್ರಮ

ಮೂಡುಬಿದಿರೆ: ಪುತ್ತಿಗೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಆಳ್ವಾಸ್ ಕಾಲೇಜಿನ ತೃತೀಯ ಸಮಾಜಕಾರ್ಯ ವಿದ್ಯಾರ್ಥಿಗಳಾದ ಗುರುರಾಜ್, ನಿತಿನ್, ಹಾರ್ದಿಕ್, ಶ್ರೀದರ್ ಹಾಗೂ ನಿತ್ಯಾನಂದ ಮಾಹಿತಿ ಕಾರ್ಯಕ್ರಮವನ್ನು ಸೋಮವಾರ ನಡೆಸಿಕೊಟ್ಟರು.

ಆಳ್ವಾಸ್ ಸಮಾಜಕಾರ್ಯ ವಿಭಾಗದ ಮುಖ್ಯಸ್ಥೆ  ಮದುಮಾಲ ಕೆ. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ವಿಧ್ಯಾರ್ಥಿಗಳ ಕಲಿಕೆಯಲ್ಲಿ ಹಾಗೂ ಬೆಳವಣಿಗೆಯಲ್ಲಿ ಪೆÇೀಷಕರ ಪಾತ್ರ ವಿಷಯದ ಕುರಿತು ಮಾತನಾಡಿದರು. ಮಕ್ಕಳದ ಆರೋಗ್ಯದ ಬಗ್ಗೆ ಪೋಷಕರು ಕಾಳಜಿವಹಿಸಬೇಕು. ಮಹಿಳೆಯರು ತಮ್ಮ ಹಕ್ಕಿನ ಬಗ್ಗೆ ಅರಿತು, ಸಮಾಜದಲ್ಲಿ ಉತ್ತಮ ಸ್ಥಾನಮಾನ ಪಡೆಯಬಹುದು ಎಂದು ಹೇಳಿದರು.

ಬರೆದಿರುವ ಪುಸ್ತಕಗಳಲ್ಲಿ ಉಳಿದಿರುವ ಖಾಲಿ ಪುಟಗಳನ್ನು ಸಂಗ್ರಹಿಸಿ ಅದನ್ನು ಪುಸ್ತಕವನ್ನಾಗಿ ಪರಿವರ್ತಿಸಿ ಅಗತ್ಯ ಇರುವ ವಿಧ್ಯಾರ್ಥಿಗಳಿಗೆ ನೀಡುವ ಯೋಜನೆಯನ್ನು ತೃತೀಯ ವಿಭಾಗದ ವಿದ್ಯಾರ್ಥಿ ಪುನೀತ್ ನಡೆಸಿಕೊಟ್ಟರು. ಪುತ್ತಿಗೆ ಶಾಲೆಯಲ್ಲಿರುವ ಒಂದನೆ ತರಗತಿಯಿಂದ ಏಳನೇ ತರಗತಿಯ ಒಟ್ಟು 37  ವಿಧ್ಯಾರ್ಥಿಗಳಿಗೆ ಪುಸ್ತಕಗಳನ್ನು ವಿತರಿಸಲಾಯಿತು.

ಶಾಲಾ ಮುಖ್ಯ ಶಿಕ್ಷಕಿ ಜಾಯಿಸ್ ಮೊನೀಸ್ ಅಧ್ಯಕ್ಷತೆವಹಿಸಿದರು. ಎಸ್ಡಿಎಂಸಿ ಅಧ್ಯಕ್ಷೆ ವನಿತಾ, ಉಪಾಧ್ಯಕ್ಷೆ ಕುಶಲ, ಪುತ್ತಿಗೆ ಅಂಗನವಾಡಿ ಕಾರ್ಯಕರ್ತೆ ಗುಣಶೀಲ ಉಪಸ್ಥಿತರಿದ್ದರು.

ಜಪಾನ್ ಸಮ್ಮೆಳನದಲ್ಲಿ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು ತಂಡ

ಮೂಡುಬಿದಿರೆ: ಜಪಾನ್‍ನಲ್ಲಿ ನಡೆದ 8ನೇ `ಇಂಟರ್‍ನ್ಯಾಷನಲ್ ಇಂಜಿನಿಯರಿಂಗ್ ಸಿಂಪೊಸಿಯಮ್ 2019’ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಮೂವರು ಪ್ರಾಧ್ಯಾಪಕರು ಒಳಗೊಂಡಂತೆ 18 ವಿದ್ಯಾರ್ಥಿಗಳ ತಂಡ ಭಾಗವಹಿಸಿತು. ಜಪಾನಿನ ಪ್ರತಿಷ್ಠಿತ ವಿಶ್ವವಿದ್ಯಾನಿಲಯವಾದ ಕುಮಮೊಟೊ ಆಯೋಜಿಸಿದ ಮೆಕ್ಯಾನಿಕಲ್ ಇಂಜಿನಿಯರಿಂಗ್  ವಿಭಾಗದ 4ನೇ ವರ್ಷದ ವಿದ್ಯಾರ್ಥಿಗಳಿ ವಿಚಾರ ಮಂಡಿಸಿದರು.


Spread the love