ಉಡುಪಿಯ ಒಂಟಿ ಮಹಿಳೆ ಕೊಲೆ ಪ್ರಕರಣ- ಇಬ್ಬರ ಬಂಧನ

Spread the love

ಉಡುಪಿಯ ಒಂಟಿ ಮಹಿಳೆ ಕೊಲೆ ಪ್ರಕರಣ- ಇಬ್ಬರ ಬಂಧನ

ಉಡುಪಿ: ಒಂಟಿಯಾಗಿ ವಾಸವಾಗಿದ್ದ ಮಹಿಳೆಯ ಮನೆಗೆ ನುಗಿದ್ದ ದುಷ್ಕರ್ಮಿಗಳು ಮಹಿಳೆಯನ್ನು ಆಯುಧದಿಂದ ಕೊಲೆ ಮಾಡಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಗೋವಾ ನಿವಾಸಿಗಳಾದ ಅಂಬಣ್ಣ @ ಅಂಬರೀಶ್ @ ಅಂಬಣ್ಣ ಬಸಪ್ಪ ಜಾಡರ್ @ ಶಿವ (31 ವರ್ಷ) ಮತ್ತು ಆತನ ಪತ್ನಿ ಶ್ರೀಮತಿ ರಶೀದಾ @ ಖಾಜಿ @ ಜ್ಯೋತಿ (26) ಎಂದು ಗುರುತಿಸಲಾಗಿದೆ

ರತ್ನಾವತಿ ಜಿ ಶೆಟ್ಟಿ ಎಂಬವರು ಉಡುಪಿ ತಾಲೂಕು ಪುತ್ತೂರು ಗ್ರಾಮದ ಸುಬ್ರಮಣ್ಯ ನಗರದ 5 ನೇ ಕ್ರಾಸ್ ನಲ್ಲಿರುವ ಮನೆಯಲ್ಲಿ ಒಬ್ಬರೇ ವಾಸಿಸುತ್ತಿದ್ದು, ಜುಲೈ 2 ರಿಂದ ಜುಲೈ 5 ರಾತ್ರಿ 20:30 ಗಂಟೆಯ ಮಧ್ಯಾವಧಿಯಲ್ಲಿ ಯಾರೋ ಅಪರಿಚಿತರು ಮನೆಯನ್ನು ಒಳಪ್ರವೇಶಿಸಿ ಮನೆಯ ಬೆಡ್‌ರೂಮಿನ ಹಾಗೂ ಹಾಲ್‌ನಲ್ಲಿದ್ದ ಸೊತ್ತುಗಳನ್ನು ಚೆಲ್ಲಾಪಿಲ್ಲಿಯಾಗಿ ಹರಡಿ ಶ್ರೀಮತಿ ರತ್ನಾವತಿ ಜಿ ಶೆಟ್ಟಿರವರನ್ನು ಯಾವುದೋ ಆಯುಧದಿಂದ ಕೊಲೆ ಮಾಡಿ, ಅವರ ಮೈಮೇಲಿದ್ದ ಹಾಗೂ ಮನೆಯಲ್ಲಿದ್ದ ಸುಮಾರು 2 ಲಕ್ಷಕ್ಕಿಂತ ಅಧಿಕ ಮೌಲ್ಯದ ಚಿನ್ನಾಭರಣವನ್ನು ದೋಚಿಕೊಂಡು ಹೋಗಿದ್ದರು. ಈ ಬಗ್ಗೆ ಮೃತರ ಮಗಳಾದ ಶ್ರೀಮತಿ ಸುಪ್ರಭಾರವರು ನೀಡಿದ ದೂರಿನಂತೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಕೃತ್ಯ ನಡೆದ ಸ್ಥಳದ ಅಕ್ಕಪಕ್ಕದವರನ್ನು ವಿಚಾರಣೆ ನಡೆಸಿದ್ದು, ಗುಪ್ತ ಮಾಹಿತಿಯಿಂದ ಸದ್ರಿ ಮನೆಗೆ ಓರ್ವ ಗಂಡಸು ಹಾಗೂ ಓರ್ವ ಹೆಂಗಸು ಮನೆ ಬಾಡಿಗೆಗೆ ಬಂದಿರುವ ವಿಚಾರ ತಿಳಿಯಲಾಯ್ತು. ಸಂಶಯಿತ ವ್ಯಕ್ತಿಗಳ ಮಾಹಿತಿ ಕಲೆ ಹಾಕಿದಲ್ಲಿ ಅವರುಗಳು ಧಾರವಾಡ ಜಿಲ್ಲೆಯ ನರಗುಂದ ಊರಿನವರೆಂದು ತಿಳಿದು ಬಂತು. ಆರೋಪಿಗಳ ಇರುವಿಕೆಯ ಬಗ್ಗೆ ನಿಖರ ಮಾಹಿತಿ ಸಂಗ್ರಹಿಸಿದಾದ, ಆರೋಪಿಗಳು ಗೋವಾ ರಾಜ್ಯದ ಓಲ್ಡ್ ಗೋವಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇರುವುದು ಪತ್ತೆಯಾಗಿರುವುದರಿಂದ ಈ ಬಗ್ಗೆ ಸ್ಥಳೀಯ ಠಾಣೆಗೆ ಮಾಹಿತಿ ನೀಡಿ ಆರೋಪಿಗಳನ್ನು ವಶಕ್ಕೆ ಪಡೆಯುವಂತೆ ಕೋರಿಕೊಂಡು ವಿಶೇಷ ತಂಡವನ್ನು ಗೋವಾ ರಾಜ್ಯಕ್ಕೆ ಕಳುಹಿಸಿಕೊಡಲಾಗಿತ್ತು.

ವಿಶೇಷ ತಂಡವು ಆರೋಪಿಗಳನ್ನು ಓಲ್ಡ್ ಗೋವಾ ಪೊಲೀಸ್ ಠಾಣಾ ವ್ಯಾಪ್ತಿಯ ಸೆಂಟಾಕ್ರೂಸ್ ಎಂಬಲ್ಲಿಂದ ಗೋವಾ ಪೊಲೀಸರ ಸಹಕಾರದೊಂದಿಗೆ ಆರೋಪಿತರುಗಳಾದ ಅಂಬಣ್ಣ @ ಅಂಬರೀಶ್ @ ಅಂಬಣ್ಣ ಬಸಪ್ಪ ಜಾಡರ್ @ ಶಿವ (31 ವರ್ಷ) ಮತ್ತು ಆತನ ಪತ್ನಿ ಶ್ರೀಮತಿ ರಶೀದಾ @ ಜುಲೈ10 ರಂದು ಕರೆದುಕೊಂಡು ಬಂದಿದ್ದು ಅಂಬಣ್ಣ @ ಅಂಬರೀಶ್ ಅವರನ್ನು ವಿಚಾರಿಸಲಾಗಿ ದುಂದುವೆಚ್ಚ ಮಾಡುವರೇ ಹಣದ ಅಡಚಣೆ ಇದ್ದ ಕಾರಣ ಬಾಡಿಗೆ ಮನೆಯ ಯಜಮಾನಿ ರತ್ನಾವತಿಯ ಕುತ್ತಿಗೆ ಮತ್ತು ಕೈಯಲ್ಲಿದ್ದ ಚಿನ್ನವನ್ನು ನೋಡಿ ಮನೆಯಲ್ಲಿ ತುಂಬಾ ಚಿನ್ನ ಇರಬಹುದೆಂದು ತಿಳಿದು ತಾವಿಬ್ಬರು ಕೊಲೆ ಮಾಡಿರುವ ಬಗ್ಗೆ ಒಪ್ಪಿಕೊಂಡಿರುತ್ತಾನೆ. ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ತನಿಖೆ ಬಗ್ಗೆ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಆರೋಪಿ ಅಂಬಣ್ಣ @ ಅಂಬರೀಶ್ @ ಅಂಬಣ್ಣ ಬಸಪ್ಪ ಜಾಡರ್ @ ಶಿವನ ವಿರುದ್ಧ ಹುಬ್ಬಳ್ಳಿಯಲ್ಲಿ ಮೊಬೈಲ್ ಕಳವು ಪ್ರಕರಣ, ಬಿಜಾಪುರದಲ್ಲಿ ಸ್ಕೂಟರ್ ಕಳವು ಪ್ರಕರಣ, ಬಾದಾಮಿಯಲ್ಲಿ ಸರ ಸುಲಿಗೆ ಪ್ರಕರಣ ಹಾಗೂ ಮಂಗಳೂರಿನ ಕಾವೂರು ಎಂಬಲ್ಲಿ ಮನೆ ಕಳವು ಪ್ರಕರಣ ದಾಖಲಾಗಿತ್ತದೆ.

ಉಡುಪಿ ಜಿಲ್ಲಾ ವರಿಷ್ಠಾಧಿಕಾರಿರವರ ಮಾಗದರ್ಶನದಂತೆ, ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಹಾಗೂ ಡಿವೈಎಸ್‌ಪಿ ಉಡುಪಿರವರ ಆದೇಶದಂತೆ ಪೊಲೀಸ್ ವೃತ್ತ ನಿರೀಕ್ಷಕರು ಉಡುಪಿ ವೃತ್ತರವರ ನೇತೃತ್ವದ ವಿಶೇಷ ತಂಡವು, ಡಿ.ಸಿ.ಐ.ಬಿ. ತಂಡದ ಸದಸ್ಯರೊಂದಿಗೆ ಜಂಟಿಯಾಗಿ ಪ್ರಕರಣ ದಾಖಲಾಗಿ 05 ದಿನದೊಳಗೆ ಈ ಲಾಭಕ್ಕಾಗಿ ಕೊಲೆ ಪ್ರಕರಣವನ್ನು ಚಾಣಾಕ್ಷತನದಿಂದ ಭೇದಿಸಿರುತ್ತದೆ.


Spread the love