ಉಡುಪಿ ಜಿಲ್ಲೆಯಲ್ಲಿ 14 ದಿನ ಗಡಿಗಳ ಸೀಲ್ ಡೌನ್ – ಜಿಲ್ಲೆಯೊಳಗೆ ಏನಿರುತ್ತೆ? ಏನಿರಲ್ಲ?

Spread the love

ಉಡುಪಿ ಜಿಲ್ಲೆಯಲ್ಲಿ 14 ದಿನ ಗಡಿಗಳ ಸೀಲ್ ಡೌನ್ – ಜಿಲ್ಲೆಯೊಳಗೆ ಏನಿರುತ್ತೆ? ಏನಿರಲ್ಲ?

ಉಡುಪಿ: ಕೋವಿಡ್ -19 (ಕೊರೊನಾ ವೈರಸ್ ಕಾಯಿಲೆ 2019)ಯ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಉಡುಪಿ ಜಿಲ್ಲೆಯಲ್ಲಿ ಜುಲೈ 15 ರ ಸಂಜೆ 8 ರಿಂದ ಜುಲೈ 29 ರ ವರೆಗೆ ಜಿಲ್ಲೆಯ ಎಲ್ಲಾ ಗಡಿಗಳನ್ನು ಸೀಲ್ ಡೌನ್ ಮಾಡಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ ಜಗದೀಶ್ ಹೇಳಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಕೋವಿಡ್ -19 (ಕೊರೊನಾ ವೈರಸ್ ಕಾಯಿಲೆ 2019)ಯ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಮುಖ್ಯಮಂತ್ರಿಗಳು ಜುಲೈ 13 ರಂದು ನಡೆದ ವೀಡಿಯೋ ಕಾನ್ಫರೆನ್ಸ್ ನಲ್ಲಿ ಸಂಬಂಧಪಟ್ಟ ಜಿಲ್ಲಾಧಿಕಾರಿಯವರು ಜಿಲ್ಲೆಯಲ್ಲಿ ಲಾಕ್ಡೌನ್ ಮಾಡುವ ವಿಚಾರವಾಗಿ ಜಿಲ್ಲಾ ಉಸ್ತುವಾರಿ ಸಚಿವರ ನಿರ್ಧರಿಸುವಂತೆ ಆದೇಶ ನೀಡಿರುತ್ತಾರೆ. ಅದರಂತೆ ಜಿಲ್ಲೆಯ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾ ವೈದ್ಯಕೀಯ ತಜ್ಞರ ಸಮಿತಿ ಯೊಂದಿಗೆ ಚರ್ಚಿಸಿ, ಉಡುಪಿ ಜಿಲ್ಲೆಯಲ್ಲಿ ಜುಲೈ 15 ರ ಸಂಜೆ 8 ರಿಂದ ಜುಲೈ 29 ರ ವರೆಗೆ ಜಿಲ್ಲೆಯ ಎಲ್ಲಾ ಗಡಿಗಳನ್ನು ಸೀಲ್ ಡೌನ್ ಮಾಡಲು ನಿರ್ಧರಿಸಲಾಗಿದೆ

ಈ ಕೆಳಕಂಡ ನಿರ್ಬಂಧಗಳನ್ನು ಹೊರತುಪಡಿಸಿ, ಜಿಲ್ಲೆಯ ಒಳಗೆ ಎಲ್ಲಾ ಆರ್ಥಿಕ ಚಟುವಟಿಕೆಗಳ ಅನುಮತಿ ನೀಡಲಾಗುತ್ತದೆ, ಅಂತರರಾಜ್ಯ ? ಅಂತರ ಜಿಲ್ಲಾ ಸರಕು ಸಾಗಾಣಿಕೆ ವಸ್ತುಗಳಸಾಗಾಣಿಕೆಗೆ ಯಾವುದೇ ನಿರ್ಬಂಧವಿರುವುದಿಲ್ಲ.

ನಿರ್ಬಂಧಗಳು :
• ಜುಲೈ 15-07-2020 ರ ಸಂಜೆ 8.00 ರಿಂದ ಜುಲೈ 29 ರವರೆಗೆ 14 ದಿನಗಳವರೆಗೆ ಜಿಲ್ಲೆಯ ಗಡಿಗಳನ್ನು ಸೀಲ್ ಡೌನ್ ಮಾಡಲಾಗಿದೆ. ತುರ್ತು ವೈದ್ಯಕೀಯ ಪ್ರಕರಣಗಳನ್ನು ಹೊರತುಪಡಿಸಿ)
• ಹೊರ ಜಿಲ್ಲೆಯಿಂದ ಹಾಗೂ ರಾಜ್ಯದಿಂದ ಬರುವವರು ಹಾಗೂ ಹೋಗುವವರು ಜುಲೈ 15 ರ ಸಂಜೆ 6 ಗಂ ಒಳಗೆ ಹೋಗಲು / ಬರಲು ಅವಕಾಶ ನೀಡಿದೆ.
• ಈ ಅವಧಿಯಲ್ಲಿ ಜಿಲ್ಲೆಯಲ್ಲಿ ಸಾರ್ವಜನಿಕ ಬಸ್ ಸಂಚಾರ ಇರುವುದಿಲ್ಲ.
• ಈ ಅವಧಿಯಲ್ಲಿ ಜಿಲ್ಲೆಯಲ್ಲಿ ಯಾವುದೇ ಸಂತೆಗಳು ಇರುವುದಿಲ್ಲ,
• ಈ ಅವಧಿಯಲ್ಲಿ ಯಾವುದೇ ಧಾರ್ಮಿಕ, ರಾಜಕೀಯ, ಸಾಮಾಜಿಕ ಸಭೆ, ಸಮಾರಂಭಗಳು ಇರುವುದಿಲ್ಲ
ಸಾರ್ವಜನಿಕವಾಗಿ ಹಬ್ಬ, ಆಚರಣೆಗಳು ಇರುವುದಿಲ್ಲ, ಪೂರ್ವ ನಿರ್ಧರಿತ ಮದುವೆ ಸಮಾರಂಭಗಳು ಸಂಬಂಧಿತ ತಹಶೀಲ್ದಾರರಿಂದ ಕಡ್ಡಾಯವಾಗಿ ಅನುಮತಿ ಪಡೆದು 50 ಜನಕ್ಕೆ ಮೀರದಂತೆ ನಡೆಸಬಹುದಾಗಿದೆ.
• ಸರ್ಕಾರಿ ಆದೇಶದಂತೆ ಅಂತ್ಯಸಂಸ್ಕಾರದಲ್ಲಿ 20 ಜನರು ಭಾಗವಹಿಸಬಹುದು.
• ದೇವಸ್ಥಾನ, ಚರ್ಚ್, ಮಸೀದಿಗಳನ್ನು ಸಾರ್ವಜನಿಕ ದರ್ಶನಕ್ಕೆ ಮಾತ್ರ ಸೀಮಿತವಾಗಿದೆ. ಈ ಸಮಯದಲ್ಲಿ ಒಮ್ಮೆಗೆ ಅರ್ಚಕ/ ಮೌಲ್ಯಗಳು/ ಧರ್ಮಗುರುಗಳು/ ಭಕ್ತಾಧಿಗಳು ಸೇರಿ 20 ಜನರಿಗಿಂತ ಜಾಸ್ತಿ ಇರತಕ್ಕದಲ್ಲ. ಯಾವುದೇ ವಿಶೇಷ ಪೂಜೆಗಳು/ ಧಾರ್ಮಿಕ ಆಚರಣೆಗಳು ಇರುವುದಿಲ್ಲ,
• ಸ್ವಯಂ ಪ್ರೇರಿತವಾಗಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲು ಮಾಲೀಕರೇ ನಿರ್ಧರಿಸಿದ್ದಲ್ಲಿ ಜಿಲ್ಲಾಡಳಿತದ ಅಭ್ಯಂತರವಿಲ್ಲ.
ಸರಕಾರದ ಆದೇಶದಂತೆ ಭಾನುವಾರಗಳಂದು ಸಂಪೂರ್ಣ ಲಾಕ್ ಡೌನ್ ಇರಲಿದ್ದು, ಕೇವಲ ಮೆಡಿಕಲ್, ಕ್ಲಿನಿಕಲ್ ಲ್ಯಾಬ್ ಆಸ್ಪತ್ರೆ, ಹಾಲು ದಿನಪತ್ರಿಕೆ ಮಾರಾಟಕ್ಕೆ ನಿರ್ಬಂಧವಿರುವುದಿಲ್ಲ. ಹೋಟೇಲ್ ಗಳಿಂದ ಪಾರ್ಸೆಲ್ ಗಳಿಗೆ ಫುಡ್ ಡೆಲಿವರಿಗೆ ಅವಕಾಶವಿದೆ. ಅಗತ್ಯ ಸರಕು ಸರಂಜಾಂಮುಗಳೀಗೆ ಯಾವುದೇ ನಿರ್ಬಂಧವಿಲ್ಲ ಎಂದು ಅವರು ಹೇಳಿದರು.


Spread the love