ಬೀಡಿ ಬ್ರಾಂಚ್ ಗೆ ತೆರಳಿದ್ದ 38 ವರ್ಷದ ಮಹಿಳೆ ನಾಪತ್ತೆ

Spread the love

ಬೀಡಿ ಬ್ರಾಂಚ್ ಗೆ ತೆರಳಿದ್ದ 38 ವರ್ಷದ ಮಹಿಳೆ ನಾಪತ್ತೆ

ಮಂಗಳೂರು :  ಮಹಿಳೆ ನಾಪತ್ತೆಯಾಗಿರುವ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುಮತಿ (38) ಎಂಬ ಮಹಿಳೆ, ಕೋಡಿಂಬಾಳದ ಬೀಡಿ ಬ್ರಾಂಚ್‍ಗೆ ಹೋಗಿ ಬರುತ್ತೇನೆಂದು ಹೋದವರು ವಾಪಸ್ಸು ಬಾರದೆ ಕಾಣೆಯಾಗಿದ್ದಾರೆ.

ಕಾಣೆಯಾದ ಮಹಿಳೆಯ ಚಹರೆ ಇಂತಿವೆ:- ಹೆಸರು-ಸುಮತಿ, ಪ್ರಾಯ-38 ವರ್ಷ, ಎತ್ತರ-5.2, ಶರೀರ-ಸಪೂರ ದೇಹ, ಗೋಧಿ ಮೈಬಣ್ಣ, ಕೋಲು ಮುಖ, ಕಪ್ಪು ತಲೆಕೂದಲು, ಧರಸಿದ ಬಟ್ಟೆ-ಕಂದು ಬಣ್ಣದ ಸಾರಿ ಮತ್ತು ರವಿಕೆ, ಮಾತನಾಡುವ ಭಾಷೆ-ತುಳು.

ಕಾಣೆಯಾದ ಮಹಿಳೆ ಬಗ್ಗೆ ಮಾಹಿತಿ ದೊರಕಿದ್ದಲ್ಲಿ ಕಡಬ ಪೊಲೀಸ್ ಠಾಣೆಯ ಠಾಣಾಧಿಕಾರಿಯನ್ನು  ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.


Spread the love