ಉಡುಪಿ ‘ಸರ್ವಜನೋತ್ಸವ’ದ ಪ್ರಚಾರಾರ್ಥ ಸ್ಟಿಕ್ಕರ್ ಬಿಡುಗಡೆ

Spread the love

ಉಡುಪಿ ಸರ್ವಜನೋತ್ಸವದ ಪ್ರಚಾರಾರ್ಥ ಸ್ಟಿಕ್ಕರ್ ಬಿಡುಗಡೆ

ಉಡುಪಿ : ಸಹಬಾಳ್ವೆ ಉಡುಪಿ ಜಿಲ್ಲೆ ಇದರ ವತಿಯಿಂದ ಮಾ.17 ರಂದು ಉಡುಪಿ ರೋಯಲ್ ಗಾರ್ಡನ್ನಲ್ಲಿ ಹಮ್ಮಿಕೊಳ್ಳಲಾದ ಸರ್ವ ಜನೋತ್ಸವದ ಸಮಾವೇಶದ ಪ್ರಚಾರಾರ್ಥವಾಗಿ ಸ್ಟಿಕ್ಕರ್ ಬಿಡುಗಡೆ ಕಾರ್ಯ ಕ್ರಮವು ಸೋಮವಾರ ತೆಂಕಪೇಟೆಯ ಸೀತಾರ ಕಾಂಪ್ಲೆಕ್ಸ್ನಲ್ಲಿರುವ ಸಹಬಾಳ್ವೆ ಕಚೇರಿಯಲ್ಲಿ ಜರಗಿತು.

ಸ್ಟಿಕ್ಕರ್ ಬಿಡುಗಡೆಗೊಳಿಸಿದ ಹಿರಿಯ ಚಿಂತಕ ಜಿ.ರಾಜಶೇಖರ್ ಮಾತ ನಾಡಿ, ಭಾರತದಲ್ಲಿ ಹದಗೆಟ್ಟ ಸಾಮಾಜಿಕ ಪರಿಸ್ಥಿತಿಯನ್ನು ಒಂದು ಸರಿಯಾದ ಹಳಿಗೆ ತರುವ ಸಣ್ಣ ಪ್ರಯತ್ನ ಇದಾಗಿದೆ. ಇಂದು ದೇಶದ ಪರಿಸ್ಥಿತಿ ತೀರಾ ಹಾಳಾಗಿದೆ. ಇದಕ್ಕೆ ಕಾರಣಕರ್ತರಾದ ಶಕ್ತಿಗಳ ಕುರಿತು ಜನರನ್ನು ಎಚ್ಚರಿಸುವ ಕೆಲಸ ಮಾಡಲಾಗುವುದು. ದೇಶದಲ್ಲಿ ಶಾಂತಿ, ಸಹಬಾಳ್ವೆ, ಸಂವಿಧಾನ, ಪ್ರಜಾ ಪ್ರಭುತ್ವವನ್ನು ಉಳಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.

ಕಾರಿಗೆ ಸ್ಟಿಕ್ಕರ್ ಅಂಟಿಸುವ ಮೂಲಕ ಉಡುಪಿ ನಗರಸಭೆ ಸದಸ್ಯ ರಮೇಶ್ ಕಾಂಚನ್ ಪ್ರಚಾರಕ್ಕೆ ಚಾಲನೆ ನೀಡಿದರು. ಸಹಬಾಳ್ವೆ ಅಧ್ಯಕ್ಷ ಅಮೃತ್ ಶೆಣೈ, ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಯಾಸೀನ್ ಮಲ್ಪೆ, ನಿವೃತ್ತ ಪ್ರಾಧ್ಯಾಪಕ ಪ್ರೋ.ಸಿರಿಲ್ ಮಥಾಯಸ್, ಮಾಜಿ ತಾಪಂ ಅಧ್ಯಕ್ಷೆ ವರೋನಿಕಾ ಕರ್ನೆ ಲಿಯೋ, ರೋಶನಿ ಒಲಿವೇರಾ, ಕೆಪಿಸಿಸಿ ಸಂಯೋಜಕ ಮಾಕ್ರ್ಸ್, ಪದಾಧಿಕಾರಿಗಳಾದ ಇದ್ರೀಸ್ ಹೂಡೆ, ಅಬ್ದುಲ್ ಅಝೀರ, ಮ್ಯಾಕ್ಸಿಂ ಡಿಸೋಜ, ಖಲೀಲ್ ಕೆರಾಡಿ ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸಾಮಾಜಿಕ ಕಾರ್ಯಕರ್ತರು ಹಾಗೂ ಬಂಧುವಾ ಮುಕ್ತಿಮೋರ್ಚಾ ಸಂಸ್ಥಾಪಕರಾದ ಸ್ವಾಮಿ ಅಗ್ನಿವೇಶ್, ನವದೆಹಲಿ, ರಾಜ್ಯದ ಜಲಸಂಪನ್ಮೂಲ ಸಚಿವರು ಹಾಗೂ ಕಾಂಗ್ರೆಸ್ ಮುಖಂಡರು, ಕಮ್ಯುನಿಸ್ಟ್ ಪಾರ್ಟಿ ಆಪ್ ಇಂಡಿಯಾದ ಇದರ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ, ಖ್ಯಾತ ಅಂಕಣಕಾರರು, ಮತ್ತು ಪತ್ರಕರ್ತರು ಶಿವಸುಂದರ್ ಬೆಂಗಳೂರು, ಚಿಂತಕರು ಹಾಗೂ ಪತ್ರಕರ್ತರಾಗಿರುವ ದಿನೇಶ್ ಅಮೀನ್ ಮಟ್ಟು, ಸಾಮಾಜಿಕ ಚಿಂತಕರಾದ ಮಹೇಂದ್ರ ಕುಮಾರ್ ಬೆಂಗಳೂರು, ದಲಿತ ಚಿಂತಕರು ಹಾಗೂ ಪತ್ರಕರ್ತರಾಗಿರುವ ಇಂದೂಧರ ಹೊನ್ನಾಪುರ, ಕ್ರೈಸ್ತ ಧರ್ಮಗುರು ವಂ|ಚೇತನ್ ಲೋಬೊ, ವಾರ್ತಾಭಾರತಿ ಪತ್ರಿಕೆಯ ಪ್ರಧಾನ ಸಂಪಾದಕರು ಆಗಿರುವ ಅಬ್ದುಸ್ಸಲಾಮ್ ಪುತ್ತಿಗೆ ಭಾಗವಹಿಸಲಿದ್ದಾರೆ.


Spread the love