ಅತಿ ವೇಗಕ್ಕೆ ಕಡಿವಾಣ ಹಾಕಲು ಉಡುಪಿ ಜಿಲ್ಲೆಯಲ್ಲಿ ಸ್ಪೀಡ್ ರಾಡಾರ್ ಕ್ಯಾಮೆರಾ ಕಾರ್ಯಾರಂಭ

Spread the love

ಅತಿ ವೇಗಕ್ಕೆ ಕಡಿವಾಣ ಹಾಕಲು ಉಡುಪಿ ಜಿಲ್ಲೆಯಲ್ಲಿ ಸ್ಪೀಡ್ ರಾಡಾರ್ ಕ್ಯಾಮೆರಾ ಕಾರ್ಯಾರಂಭ

ಉಡುಪಿ: ಜಿಲ್ಲೆಯಲ್ಲಿ ವಾಹನಗಳನ್ನು ಅತೀ ವೇಗವಾಗಿ ಚಾಲನೆ ಮಾಡಿದರೆ ಜೋಕೆ! ಇನ್ನುಂದೆ ಅಂತಹ ವಾಹನ ಮಾಲಿಕರ ವಿಳಾಸಕ್ಕೆ ಸಂಚಾರ ನಿಯಮ ಉಲ್ಲಂಘನೆಯ ನೋಟಿಸ್ ಬರಲಿದೆ. ಮಾಡಿದ ತಪ್ಪಿಗಾಗಿ ಪೊಲೀಸ್ ಠಾಣೆಗೆ ಹೋಗಿ ದಂಟ ಕಟ್ಟಬೇಕಾಗುತ್ತದೆ.

ಜಿಲ್ಲೆಯ ಪೊಲೀಸರು ವಾಹನಗಳ ಅತಿ ವೇಗಕ್ಕೆ ಕಡಿವಾಣ ಹಾಕಲು ಸ್ವಯಂ ಚಾಲಿತ ಸ್ಪೀಡ್ ರೇಡಾರ್ ವೊಲ್ವೋ ಮೀಟರ್ ಸಾಧನದ ಮೊರೆ ಹೋಗಿದ್ದು ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯ 6 ಕಡೆಗಳಲ್ಲಿ ಅತ್ಯಾಧುನಿಕ ಸ್ಪೀಡ್ ರಾಡಾರ್ ಕ್ಯಾಮರಾಗಳು ಕಾರ್ಯರಂಭಗೊಳ್ಳಲಿದ್ದು, ಸಂಚಾರ ನಿಯಮ ಉಲ್ಲಂಘಿಸುವ ವಾಹನಗಳನ್ನು ಜಿಲ್ಲಾ ನಿಯಂತ್ರಣ ಕೊಠಡಿಯಿಂದ ಮಾನಿಟರ್ ಮಾಡಿ ನಿಯಮ ಉಲ್ಲಂಘಟನೆಗೆ ಸಂಬಂಧಿಸಿದ ಚಲನ್ ಗಳನ್ನು ಪೋಸ್ಟ್ ಮೂಲಕ ಕಳುಹಿಸಿ ಕೊಡಲಾಗುತ್ತದೆ ಎಂದು ಜಿಲ್ಲಾ ಪೊಲೀಸ್ ಇಲಾಖೆ ತಿಳಿಸಿದೆ.

ಸ್ಪೀಡ್ ರಾಡಾರ್ ಕ್ಯಾಮೆರಾ ಅಳವಡಿಸಿದ ಸ್ಥಳಗಳನು ಮತ್ತು ವೇಗ ಮಿತಿ

  • ಕಾರ್ಕಳ – ದೂಪದಕಟ್ಟೆ (60ಕಿಮೀ)
  • ಪಡುಬಿದ್ರೆ – ಉಚ್ಚಿಲ (80ಕೀಮಿ)
  • ಕಾಪು – ದಂಡತೀರ್ಥ (80ಕಿಮೀ)
  • ಕೋಟ-ತೆಕ್ಕಟ್ಟೆ (80ಕಿಮೀ)
  • ಗಂಗೊಳ್ಳಿ – ತ್ರಾಸಿ (80ಕಿಮೀ)
  • ಬೈಂದೂರು – ನಾಯ್ಕನಕಟ್ಟೆ (80ಕಿಮೀ)

ಪ್ರಸ್ತುತ 6 ಸ್ಥಳಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು ಇನ್ನೂ 14 ಸ್ಥಳಗಳಿಗೆ ಟೆಂಡರ್ ಒಪ್ಪಿಗೆಯಾಗಿದ್ದು ಶೀಘ್ರ ಅಳವಡಿಕೆ ಕಾರ್ಯಾ ನಡೆಯಲಾಗುವುದು.

ರಾಡಾರ್ ಕ್ಯಾಮೆರಾ ಪತ್ತೆ ಮಾಡುವ ಉಲ್ಲಂಘನೆಗಳು : ಅತೀ ವೇಗ ಚಾಲನೆ, ಟ್ರಿಪಲ್ ರೈಡಿಂಗ್, ಸೀಟ್ ಬೆಲ್ಟ್ ಉಲ್ಲಂಘಟನೆ, ಮೊಬೈಲ್ ಬಳಸಿ ಚಾಲನೆ, ತಪ್ಪು ದಿಕ್ಕಿನಲ್ಲಿ ಚಾಲನೆ ಹಾಗೂ ಇತರ ಸಂಚಾರ ನಿಯಮ ಉಲ್ಲಂಘನೆಗಳು

ದಂಡದ ಚಲನ್ ಪೋಸ್ಟ್ ಮೂಲಕ ಕಳುಹಿಸಲಾಗುತ್ತಿದ್ದು, ಚಲನ್ ಸ್ವೀಕರಿಸಿದ ಏಳು ದಿನದ ಒಳಗೆ ಉಡುಪಿ ಜಿಲ್ಲೆಯ ಯಾವುದೇ ಪೊಲೀಸ್ ಠಾಣೆಯಲ್ಲಿ ದಂಡ ಪಾವತಿಬೇಕಾಗುತ್ತದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ


Spread the love