‘ಉತ್ತಮ ಅಂಕ ಪಡೆಯುವಲ್ಲಿ ವಿದ್ಯಾರ್ಥಿಗಳು ಪರಿಶ್ರಮ ವಹಿಸಿದರೆ ಕಾಲೇಜು ಉದ್ಯೋಗವಕಾಶ ಒದಗಿಸಬಲ್ಲದು’ –  ಮಣೇಲ್ ಅಣ್ಣಪ್ಪ ನಾಯಕ್.

Spread the love

ಮಂಗಳೂರು: ಬೆಸೆಂಟ್ ಕಾಲೇಜಿನ ಸ್ನಾತಕೋತ್ತರ ವಿಭಾಗದ ಉದ್ಯೋಗವಕಾಶಗಳ ವೇದಿಕೆಯ ಉದ್ಘಾಟನೆ  ಇಂದು ಕಾಲೇಜಿನ ಎಂ.ಕಾಂ. ಸಭಾಂಗಣದಲ್ಲಿ ನಡೆಯಿತು.

2

1

 

ವೇದಿಕೆಯನ್ನು ಉದ್ಘಾಟಿಸಿದ ವುಮೆನ್ಸ್ ನ್ಯಾಷನಲ್ ಎಜುಕೇಶನ್ ಸೊಸೈಟಿಯ ಉಪಾಧ್ಯಕರಾದ ಶ್ರೀ ಮಣೇಲ್ ಅಣ್ಣಪ್ಪ ನಾಯಕ್ ಮಾತನಾಡಿ ಎಂ.ಕಾಂ. ಪದವಿ ಕೇಂದ್ರ ತೆರೆಯುವುದರಲ್ಲಿ ಬೆಸೆಂಟ್ ಕಾಲೇಜು ನಗರದ ಕಾಲೇಜುಗಳ ಪೈಕಿ ಮೊದಲನೆಯದಾಗಿದೆ. ಕೇವಲ ಪದವಿ ಪಡೆದರೆ ಸಾಕಾಗದು. ಸೂಕ್ತ ಉದ್ಯೋಗವಕಾಶಗಳನ್ನು ವಿದ್ಯಾರ್ಥಿಗಳಿಗೆ ನಿರ್ದೇಶಿಸಬೇಕಾಗಿದೆ. ಈ ವಿಷಯವನ್ನು ಮನಗಂಡು ಕಾಲೇಜು ಉದ್ಯೋಗವಕಾಶದ ವೇದಿಕೆಯನ್ನು ತೆರೆದಿದೆ.  ವಿದ್ಯಾರ್ಥಿಗಳು ಉತ್ತಮ ಅಂಕ ಪಡೆಯುವುದರ ಬಗ್ಗೆ ಗಮನ ವಹಿಸಿದಲ್ಲಿ ಮುಂದೆ ಉತ್ತಮ ಉದ್ಯೋವಕಾಶಗಳನ್ನು ಕಾಲೇಜು ಒದಗಿಸಿ ಕೊಡಲು ಸಾಧ್ಯವಾಗುತ್ತದೆ. ವೇದಿಕೆಯಲ್ಲಿ ಇರುವ ಅಧಿಕಾರಿಗಳಿಗೆ ಕಂಪೆನಿಗಳೊಂದಿಗೆ ಸಂವಹನ ನಡೆಸಲು ಎಲ್ಲಾ ರೀತಿಯ ಸಹಕಾರ ಆಡಳಿತ ಮಂಡಳಿ ನೀಡುತ್ತದೆ ಎಂದು ತಿಳಿಸಿದರು.

ಐದು ಕಂಪೆನಿಗಳ ಅಧಿಕಾರಿಗಳು ಉಪಸ್ಥಿತರಿದ್ದು ಅಂತಿಮ ಪದವಿಯ ವಿದ್ಯಾರ್ಥಿಗಳ ಸಂದರ್ಶನ ನಡೆಸಿ ಉದ್ಯೋಗಕ್ಕಾಗಿ ಆಯ್ಕೆ ಮಾಡುವರು.

ಕಾಲೇಜು ಸಂಚಾಲಕರಾದ ಶ್ರೀ ದೇವಾನಂದ ಪೈ, ಶ್ರೀ ಶ್ಯಾಮ್ ಸುಂದರ್ ಕಾಮತ್ ಕಾರ್ಯದರ್ಶಿ ಡಬ್ಲ್ಯೂ.ಎನ್.ಇ.ಎಸ್., ಡಾ.ಸುಧಾ ಕೆ ಕಾಲೇಜಿನ ಪ್ರಾಂಶುಪಾಲರು, ಡಾ. ಪ್ರವೀಣ್ ಕುಮಾರ್ ಕೆ.ಸಿ. ಡೀನ್, ವೇದಿಕೆಯಲ್ಲಿ ಉಪಸ್ಥಿತರಿದ್ದರು.  ಸಂತೋಷ್ ಪ್ರಭು ಉಪನ್ಯಾಸಕರು ಸ್ವಾಗತಿಸಿದರು. ವಿದ್ಯಾರ್ಥಿನಿ ಸಂಗೀತಾ ವಂದನಾರ್ಪಣೆಗೈದರು.


Spread the love