ಉಮ್ರಾ ಯಾತ್ರಾರ್ಥಿ ಮಕ್ಕಾದಲ್ಲಿ ನಿಧನ-ಅಂತ್ಯಕ್ರಿಯೆಗೆ ಐ ಎಸ್ ಎಫ್ ನೆರವು 

Spread the love

ಉಮ್ರಾ ಯಾತ್ರಾರ್ಥಿ ಮಕ್ಕಾದಲ್ಲಿ ನಿಧನ-ಅಂತ್ಯಕ್ರಿಯೆಗೆ ಐ ಎಸ್ ಎಫ್ ನೆರವು 

ಸೌದಿ ಅರೇಬಿಯಾ: ಪವಿತ್ರ ಉಮ್ರಾ ನಿರ್ವಹಿಸಲು ತನ್ನ ಪತ್ನಿ ಜತೆ ಮಂಗಳೂರಿನ ಅಲ್ ವಫಾ ಟ್ರಾವೆಲ್ಸ್ ಮೂಲಕ ಸೌದಿ ಅರೇಬಿಯಾದ ಮಕ್ಕಾಗೆ ಆಗಮಿಸಿದ ಮೂಡಬಿದ್ರೆ ತಾಲೂಕಿನ ಅಳಿಯೂರು ನಿವಾಸಿ ಮುಹಮ್ಮದ್ ಹೈದರ್ ಖಾನ್ ರವರು ಉಮ್ರಾ ನಿರ್ವಹಿಸಿದ ನಂತರ ತೀವ್ರ ಅಸ್ವಸ್ಥರಾಗಿದ್ದರು,ತಕ್ಷಣವೇ ಅವರನ್ನು ಅಲ್ ವಫಾ ಅಮೀರ್ ನಝೀರ್ ಮುಸ್ಲಿಯಾರ್ ಮರವೂರ್ ಮಕ್ಕಾದ ಕಿಂಗ್ ಅಬ್ದುಲ್ಲಾ ಆಸ್ಪತ್ರೆಗೆ ದಾಖಲಿಸಿದ್ದರು.ಆದರೆ ಚಿಕಿತ್ಸೆಗೆ ಸ್ಪಂದಿಸದ ಹೈದರ್ ಖಾನ್ (೭೦) ರವರು  ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

ಪತ್ನಿ ಹಾಗು ಕುಟುಂಬಿಕರ ಇಂಗಿತದಂತೆ ಹೈದರವರ ದಫನ ಕ್ರಿಯೆ ಮಕ್ಕಾದಲ್ಲಿಯೇ ನಡೆಸುವುದೆಂದು ತೀರ್ಮಾನಿಸಿ ಅಂತ್ಯ ಕ್ರಿಯೆಗೆ ಬೇಕಾದ ದಾಖಲೆ ಪತ್ರದ ಸಂಗ್ರಹಕ್ಕಾಗಿ ನಝೀರ್ ಮುಸ್ಲಿಯಾರ್ ರವರು ಮಕ್ಕಾ ಇಂಡಿಯನ್ ಸೋಶಿಯಲ್ ಫೋರಮ್ ಅಧ್ಯಕ್ಷ ಶಾಕಿರ್ ಹಕ್ ನೆಲ್ಯಾಡಿ ಯವರನ್ನು ಸಂಪರ್ಕಿಸಿದರು,ತಕ್ಷಣವೇ ಸ್ಪಂದಿಸಿದ ಶಾಕಿರ್ ರವರು ಇಂಡಿಯಾ ಫ್ರೆಟರ್ನಿಟಿ ಫೋರಮ್ ನ ಸದಸ್ಯರಾದ ಉಬೈದುಲ್ಲಾ ಬಂಟ್ವಾಳ್ ನೇತೃತ್ವದಲ್ಲಿ ದಾಖಲೆ ಪತ್ರಗಳನ್ನು ಸಂಗ್ರಹಿಸಿದರು.ದಾಖಲೆ ಗಳನ್ನೂ ಸಂಗ್ರಹಿಸಲು ಅಶ್ರಫ್ ಬಜ್ಪೆ ಹಾಗು ರಿಜ್ವಾನ್ ಪುತ್ತೂರು ನೆರವಾದರು.ಎಲ್ಲಾ ದಾಖಲೆಗಳನ್ನು ಸ್ಥಳೀಯಾಡಳಿತಕ್ಕೆ ಸಲ್ಲಿಸಿದ ನಂತರ ಮಕ್ಕಾದ ಶರಾಯ ದಫನ ಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯುತು.ಅಂತ್ಯ ಕ್ರಿಯೆಯಲ್ಲಿ ಅಲ್ ವಫಾದ ಅಮೀರ್ ನಝೀರ್ ಮುಸ್ಲಿಯಾರ್,ಸಮಾಜ ಸೇವಕ ಷರೀಫ್ ಉಪ್ಪಿನಂಗಡಿ, ಇಂಡಿಯಾ ಫೆಟರ್ನಿಟಿ ಫಾರಮ್ ಸದಸ್ಯರಾದ ಹೈದರ್ ಕೊಣಾಜೆ ಹಾಗು ಅನ್ಸಾರ್ ಕರೈ ಸಹಕರಿಸಿದರು


Spread the love