ಉರ್ವದಲ್ಲಿ ವಾಚನಾಲಯ ಸ್ಥಾಪನೆಗೆ ಸಿಪಿಐ ಆಗ್ರಹ

Spread the love

ಉರ್ವದಲ್ಲಿ ವಾಚನಾಲಯ ಸ್ಥಾಪನೆಗೆ ಸಿಪಿಐ ಆಗ್ರಹ

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಉರ್ವ ಪ್ರದೇಶವು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ಉದ್ಯೋಗಸ್ಥರು, ಕಾರ್ಮಿಕರು ನೆಲೆಸಿರುವ ಜನನಿಬಿಡ ಪ್ರದೇಶವಾಗಿದೆ. ಇಲ್ಲಿ ಸಕಲ ವ್ಯವಸ್ಥೆಗಳಿರುವ, ಎಲ್ಲಾ ಮೂಲಗಳ ಜ್ಞಾನಾರ್ಜನೆಗೆ ಪೂರಕವಾಗುವ ವಿವಿಧ ಪತ್ರಿಕೆ, ನಿಯತಕಾಲಿಕೆಗಳು, ದೃಶ್ಯ ಮಾಧ್ಯಮಗಳುಳ್ಳ ಸಕಲ ಆಧುನಿಕತೆಗಳನ್ನೊಳಗೊಂಡ ಸರಕಾರಿ ವಾಚನಾಲಯ/ಲೈಬ್ರೆರಿಯೊಂದನ್ನು ತೆರೆಯಬೇಕೆಂದು ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐ)ದ ಉರ್ವ ಶಾಖಾ ಸಮ್ಮೇಳನ ಮಂಗಳೂರು ಮಹಾನಗರಪಾಲಿಕೆ ಹಾಗೂ ರಾಜ್ಯ ಸರಕಾರದ ಸಂಬಂಧಿತ ಇಲಾಖೆಯನ್ನು ಆಗ್ರಹಿಸಿದೆ. ಉರ್ವ ಮಾರಿಗುಡಿ ಹತ್ತಿರದ ಕರ್ನಾಟಕ ಬೇಂಕ್ ಬಳಿ ಇರುವ ಮಹಾನಗರ ಪಾಲಿಕೆಯ ಜಾಗವನ್ನು ಈ ಉದ್ದೇಶಕ್ಕಾಗಿ ಉಪಯೋಗಿಸಬೇಕೆಂದು ಸಮ್ಮೇಳನ ವಿನಂತಿಸಿದೆ. ಈ ವಿಚಾರದಲ್ಲಿ ಪಕ್ಸದ ಕಾರ್ಯಕರ್ತರು ಸಂಪೂರ್ಣ ಬೆಂಬಲ ನೀಡಲಿದ್ದಾರೆಂದು ಪಕ್ಷ ತಿಳಿಸಿದೆ.

ನಿನ್ನೆ ಉರ್ವದ ಪಿಂಟೋ ಲೇನ್‍ನಲ್ಲಿನಡೆದ ಸಮ್ಮೇಳನದ ಅಧ್ಯಕ್ಷತೆಯನ್ನು ರಾಜೇಂದ್ರ ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ವಿ. ಕುಕ್ಯಾನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಡಿಸೆಂಬರ್ ಐದರಂದು ನಡೆಯಲಿರುವ ತಾಲೂಕು ಸಮ್ಮೇಳನ ಹಾಗೂ ಡಿಸೆಂಬರ್ 24 ರಿಂದ 26 ರವರೆಗೆ ನೆರವೇರಲಿರುವ ಜಿಲ್ಲಾ ಸಮ್ಮೇಳನವನ್ನು ಯಶಸ್ವಿಗೊಳಿಸಲು ತೀರ್ಮಾನಿಸಲಾಯಿತು.


Spread the love