ಎಂ.ಬಿ.ಎ ವಿಭಾಗದಲ್ಲಿ ಆಳ್ವಾಸ್‍ ನ ರಿನು ಥೋಮಸ್‍ಗೆ 2ನೇ ರ್ಯಾಂಕ್

Spread the love

ಎಂ.ಬಿ.ಎ ವಿಭಾಗದಲ್ಲಿ ಆಳ್ವಾಸ್‍ ನ ರಿನು ಥೋಮಸ್‍ಗೆ 2ನೇ ರ್ಯಾಂಕ್

ಮೂಡುಬಿದಿರೆ: ಆಳ್ವಾಸ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಮ್ಯಾನೇಜ್‍ಮೆಂಟ್ ಕಾಲೇಜಿನ ರಿನು ಥೋಮಸ್, ಎಂಬಿಎ ವಿಭಾಗದ ಅಂತಿಮ ಸೆಮಿಸ್ಟರ್ ಪರೀಕ್ಷೆಯಲ್ಲಿ ದ್ವಿತೀಯ ರ್ಯಾಂಕ್ ಗಳಿಸಿದ್ದಾರೆ.

ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯದ ವ್ಯಾಪ್ತಿಗೆ ಒಳಪಟ್ಟ ಎಂಬಿಎ ಕಾಲೇಜುಗಳ ಪರೀಕ್ಷೆ ಕಳೆದ ಜುಲೈ ಮತ್ತು ಆಗಷ್ಟ್ ತಿಂಗಳಲ್ಲಿ ನಡೆದಿದ್ದು, ಆಳ್ವಾಸ್‍ನ ಎಂ.ಬಿ.ಎ ವಿದ್ಯಾರ್ಥಿನಿ ರಿನು, ಸಿ.ಜಿ.ಪಿ.ಎ 8.67 ಗ್ರೇಡ್ ನೊಂದಿಗೆ ಉತ್ತೀರ್ಣರಾಗಿದ್ದಾರೆ. ವಿಶ್ವವಿದ್ಯಾನಿಲಯದ ಸುಮಾರು 150 ಕಾಲೇಜ್‍ಗಳಿಂದ 6021 ವಿದ್ಯಾರ್ಥಿಗಳು ಪರೀಕ್ಷೆಯನ್ನು ಎದುರಿಸಿದ್ದು, ಅದರಲ್ಲಿ 2ನೇ ರ್ಯಾಂಕ್ ಪಡೆದಿದ್ದಾರೆ.

ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನುರಿನ ನಿವಾಸಿಯಾಗಿರುವ ಇವರು, ತಂದೆ ಶಾಜಿ ಥೋಮಸ್ ಮತ್ತು ತಾಯಿ ರಮಣಿ ಥೋಮಸ್‍ರ 2ನೇ ಮಗಳಾಗಿ ಬಡ ಕುಟುಂಬದಲ್ಲಿ ಜನಿಸಿದರು. ತಂದೆ ಮತ್ತು ತಾಯಿ ರಾಜೇಂದ್ರ ಕಾಫಿ ಪ್ರೈವೆಟ್ ಲಿಮಿಟೆಡ್ ನಲ್ಲಿ ಮೇಲ್ವಿಚಾಕರಾಗಿ ಮತ್ತು ಕಚೇರಿ ಸಹಾಯಕರಾಗಿ ಕೆಲಸ ನಿರ್ವಹಿಸುತ್ತಾರೆ.

ಪ್ರಸ್ತುತ ರಿನು ಥೋಮಸ್ ಬೆಂಗಳೂರಿನ ಪ್ರತಿಷ್ಟಿತ ಇ.ವೈ ಕಂಪನಿಯಲ್ಲಿ ಆಶ್ಯುರೇನ್ಸ್ ಅಸೋಸಿಯೇಟ್ ಆಫೀಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ್ ಆಳ್ವ ,ಮ್ಯಾನೆಜಿಂಗ್ ಟ್ರಸ್ಟಿ ವಿವೇಕ್ ಆಳ್ವ ಮತ್ತು ಪ್ರಾಂಶುಪಾಲ ಡಾ. ಪೀಟರ್ ಫೆರ್ನಾಂಡಿಸ್ ರ್ಯಾಂಕ್ ವಿಜೇತೆಯನ್ನು ಅಭಿನಂದಿಸಿದ್ದಾರೆ.


Spread the love